Site icon Vistara News

Toby Movie: ಟೋಬಿ ಚೆನ್ನಾಗಿಲ್ಲ ಅಂದಿದ್ದಕ್ಕೆ ಮಹಿಳೆಗೆ ಅವಾಚ್ಯ ನಿಂದನೆ; ರಾಜ್‌ಬಿ ಶೆಟ್ಟಿ ಪ್ರತಿಕ್ರಿಯೆ ಏನು?

Raj B shetty

ಬೆಂಗಳೂರು: ಟೋಬಿ ಸಿನಿಮಾ (Toby Movie) ಈಗಾಗಲೇ ಬಿಡುಗಡೆಯಾಗಿದೆ. ಮೈಸೂರಿನ ಸಂಗಮ್ ಚಿತ್ರಮಂದಿರದಲ್ಲಿ ಮಹಿಳೆಯೊಬ್ಬರು ಚಿತ್ರ ವೀಕ್ಷಿಸಿದ ಬಳಿಕ ಯುಟ್ಯೂಬ್ ಚಾನೆಲ್ ಒಂದಕ್ಕೆ ಚಿತ್ರ ಚೆನ್ನಾಗಿಲ್ಲ ಎಂದು ಕ್ಯಾಮೆರಾ ಮುಂದೆ ನಿಂತು ಹೇಳಿದ್ದಕ್ಕೆ ಕೋಪಗೊಂಡ ವ್ಯಕ್ತಿಯೋರ್ವ ಕನ್ನಡ ಸಿನಿಮಾ ʻಚೆನ್ನಾಗಿಲ್ಲ ಅಂತೀಯಲ್ಲʼʼಎಂದು ಅಸಹ್ಯವೆನಿಸುವ ಪದಗಳನ್ನು ಬಳಸಿ ಆಕೆಯನ್ನು ಜನರ ಮುಂದೆ (unspoken word) ನಿಂದಿಸಿದ್ದಾನೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ರಾಜ್‌ಬಿ ಶೆಟ್ಟಿ ಅವರು ʻʻವಿಡಿಯೊದಲ್ಲಿರುವವರು ನಮ್ಮ ಚಿತ್ರ ತಂಡಕ್ಕೆ ಸಂಬಂಧವೇ ಇಲ್ಲದವರು. ಆದರೂ ನಾನು ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ.

ಆಗಿದ್ದೇನು?

ರಾಜ್‌ ಬಿ ಶೆಟ್ಟಿ (Raj B shetty) ಅಭಿನಯದ ಟೋಬಿ ಸಿನಿಮಾ (Toby Movie) ರಾಜ್ಯಾದ್ಯಂತ ಆಗಸ್ಟ್‌ 25ರಂದು ಬಿಡುಗಡೆಗೊಂಡಿದೆ. ಕೆಲವರು ಸಿನಿಮಾವನ್ನು ಹೊಗಳಿದರೆ ಇನ್ನು ಕೆಲವರು ಚಿತ್ರ ನಿರೀಕ್ಷಿಸಿದ ಮಟ್ಟಕ್ಕೆ ಇಲ್ಲ, ಒಮ್ಮೆ ನೋಡಬಹುದು ಎಂಬ ಟ್ವೀಟ್‌ಗಳನ್ನು ಮಾಡಿದ್ದಾರೆ. ಮಹಿಳೆಯೊಬ್ಬರು ಚಿತ್ರ ವೀಕ್ಷಿಸಿದ ಬಳಿಕ ಯುಟ್ಯೂಬ್ ಚಾನೆಲ್ ಒಂದಕ್ಕೆ ಚಿತ್ರ ಚೆನ್ನಾಗಿಲ್ಲ ಎಂದು ಕ್ಯಾಮೆರಾ ಮುಂದೆ ನಿಂತು ಹೇಳಿಬಿಟ್ಟಿದ್ದಾರೆ. ಇಷ್ಟಕ್ಕೆ ಕೋಪಗೊಂಡ ವ್ಯಕ್ತಿಯೋರ್ವ ಕನ್ನಡ ಸಿನಿಮಾ ʻಚೆನ್ನಾಗಿಲ್ಲ ಅಂತೀಯಲ್ಲʼʼಎಂದು ಅಸಹ್ಯವೆನಿಸುವ ಪದಗಳನ್ನು ಬಳಸಿ ಆಕೆಯನ್ನು ಜನರ ಮುಂದೆ (unspoken word) ನಿಂದಿಸಿದ್ದಾನೆ. ಕನ್ನಡ ಚಿತ್ರವೊಂದನ್ನು ನೋಡಲು ಬಂದ ಹುಡುಗಿಗೆ (humiliating a girl) ವ್ಯಕ್ತಿಯೊಬ್ಬ ಅತಿ ಕೆಟ್ಟ ಪದ ಬಳಕೆ ಮಾಡುತ್ತಿದ್ದರೂ ಅಲ್ಲಿ ನೆರೆದಿದ್ದ ಪ್ರತಿಯೊಬ್ಬರೂ ಸಹ ಆಕೆಯದ್ದೆ ತಪ್ಪು, ಚಿತ್ರ ಚೆನ್ನಾಗಿಲ್ಲ ಎಂದಿದ್ದೇ ತಪ್ಪು ಎಂದಿದ್ದಾರೆ. ಇದೀಗ ರಾಜ್‌ ಬಿ ಶೆಟ್ಟಿ ಈ ಬಗ್ಗೆ ಕ್ಷಮೆ ಕೇಳಿದ್ದಾರೆ.

ರಾಜ್‌ ಬಿ ಶೆಟ್ಟಿ ಹೇಳಿದ್ದೇನು?

ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ʻʻಸಿನಿಮಾ ಎಂದರೆ ವಿಮರ್ಶೆಗೆ ಒಳಪಡುವ ಮಾಧ್ಯಮ. ನಮಗೆ ಸಂಭಾವನೆ ನೀಡುವ ಪ್ರೇಕ್ಷಕರು ತಮಗೆ ಅನಿಸಿದ್ದನ್ನು ವ್ಯಕ್ತಪಡಿಸುವ ಹಕ್ಕು ಹೊಂದಿದ್ದಾರೆ. ಅದನ್ನು ಒಪ್ಪಲು ಅಥವಾ ಒಪ್ಪದಿರಲು ನಾವು ಸ್ವತಂತ್ರರು. ಆದರೆ ಯಾವುದೇ ರೀತಿಯಲ್ಲಿ ನಾವು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಜನರಿಗೆ ಕಿರುಕುಳ ನೀಡಲು ಪ್ರಯತ್ನಿಸಬಾರದು. ವಿಡಿಯೊದಲ್ಲಿರುವವರು ನಮ್ಮ ಚಿತ್ರಕ್ಕೆ ಸಂಬಂಧವೇ ಇಲ್ಲದವರು. ಮಹಿಳೆ ಎದುರಿಸಿದ ಕಿರುಕುಳಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ಕ್ಷಮಿಸಿ ಮತ್ತು ನಮ್ಮನ್ನು ಕ್ಷಮಿಸಿʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Toby Movie: ʻಟೋಬಿʼ ಚೆನ್ನಾಗಿಲ್ಲ ಅಂದಿದ್ದಕ್ಕೆ ಮಹಿಳೆಗೆ ಅವಾಚ್ಯ ನಿಂದನೆ; ದುಷ್ಕರ್ಮಿ ವಿರುದ್ಧ ನೆಟ್ಟಿಗರ ಆಕ್ರೋಶ

ಟೋಬಿ ಚಿತ್ರದ ಕಥೆಗಾರ ದಯಾನಂದ್‌ ಟಿಕೆ ಈ ಬಗ್ಗೆ ಖಂಡಿಸಿದ್ದಾರೆ. “ಭಿನ್ನಾಭಿಪ್ರಾಯನ್ನು ಗೌರವಿಸುವುದು ಆರೋಗ್ಯವಂತ ಸಮಾಜದ ಲಕ್ಷಣ. ಚಿತ್ರ ಚೆನ್ನಾಗಿದೆ ಎಂದವರ ಅಭಿಪ್ರಾಯವನ್ನು ಗೌರವಿಸಿದಷ್ಟೇ, ಚೆನ್ನಾಗಿಲ್ಲ ಎಂದವರ ಅಭಿಪ್ರಾಯವನ್ನೂ ನಾವು ಗೌರವಿಸುತ್ತೇವೆ. ಅಪರಿಚಿತರ ಈ ಅಸಭ್ಯ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ. – ಟೋಬಿ ಚಿತ್ರತಂಡದ ಪರವಾಗಿ”ಎಂದು ದಯಾನಂದ್‌ ಟಿಕೆ ಅವರು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇಷ್ಟೆಲ್ಲಾ ನಡೆದರೂ ಚಿತ್ರಮಂದಿರದ ಅಂಗಳದಲ್ಲಿ ಹುಡುಗಿ ಪರ ಯಾರೊಬ್ಬರೂ ಮಾತನಾಡಲೇ ಇಲ್ಲ. ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಜನರು ʻʻತಮ್ಮ ಸ್ವಂತ ಹಣದಿಂದ ಟಿಕೆಟ್ ಖರೀದಿಸಿ ಬರುವ ಸಿನಿ ರಸಿಕರಿಗೆ ಚಿತ್ರ ಹೇಗಿದೆ ಎಂದು ಹೇಳುವ ಎಲ್ಲಾ ರೀತಿಯ ಹಕ್ಕಿದೆ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲʼʼಎಂದು ಕಮೆಂಟ್‌ ಮಾಡಿದ್ದಾರೆ.

Exit mobile version