ತೆಲುಗು ಚಿತ್ರರಂಗದಲ್ಲಿ (Tollywood Films) ಪೌರಾಣಿಕ ಕಥೆಗಳು (mythological concepts) ತನ್ನದೇ ಆದ ಪ್ರೇಕ್ಷಕ ಬಳಗವನ್ನು ಹೊಂದಿವೆ. ಕೆಲವರಿಗೆ ಥ್ರಿಲರ್, ಇನ್ನು ಕೆಲವರಿಗೆ ಆಕ್ಷ್ಯನ್ ಮತ್ತೆ ಕೆಲವರಿಗೆ ರೋಮ್ಯಾಂಟಿಕ್, ಹಾಸ್ಯ ಚಿತ್ರಗಳು ಇಷ್ಟವಾಗುತ್ತವೆ. ಇವೆಲ್ಲದರ ಸಮ್ಮಿಶ್ರಣದೊಂದಿಗೆ ಮೂಡಿ ಬರುವ ಪೌರಾಣಿಕ ಕಥೆಗಳನ್ನು ಬಹುತೇಕ ಪ್ರೇಕ್ಷಕ ವರ್ಗ ಇಷ್ಟ ಪಡುತ್ತದೆ ಎಂಬುದನ್ನು ಇತ್ತೀಚೆಗೆ ತೆರೆ ಕಂಡಿರುವ ಹಲವು ಚಿತ್ರಗಳು ಸಾಬೀತುಪಡಿಸಿದೆ.
ಭಾರತೀಯರು ಹೆಚ್ಚಾಗಿ ಪೌರಾಣಿಕ ಪರಿಕಲ್ಪನೆಗಳನ್ನು ಹೊಂದಿರುವ ಸಿನಿಮಾಗಳನ್ನು ಇಷ್ಟಪಡುತ್ತಾರೆ. ಯಾಕೆಂದರೆ ಅದು ಅವರಿಗೆ ತಮ್ಮ ಹಿರಿಯರ, ತಾವು ಬೆಳೆದು ಬಂದ ದಾರಿಯ ನೆನಪು ಮಾಡಿಕೊಡುತ್ತದೆ. ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾದ ಕೆಲವು ಟಾಲಿವುಡ್ ಪೌರಾಣಿಕ ಕಥಾ ಹಂದರವನ್ನು ಒಳಗೊಂಡ ಚಿತ್ರಗಳ ಕುರಿತು ಮಾಹಿತಿ ಇಲ್ಲಿದೆ. ನಿಮಗೆ ಅವಕಾಶ ಸಿಕ್ಕಾಗ ನೋಡುವುದನ್ನು ಮಿಸ್ ಮಾಡಿಕೊಳ್ಳಬೇಡಿ.
ಕಲ್ಕಿ 2898ಎಡಿ
ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದ ಪ್ರಭಾಸ್ ಅಭಿನಯದ ಚಿತ್ರ ಕಳೆದ ತಿಂಗಳು ಬಿಡುಗಡೆಯಾಗಿತ್ತು. ಗಲ್ಲಾಪೆಟ್ಟಿಗೆಯ ಕಲೆಕ್ಷನ್‌ಗಳನ್ನು ಗಮನಿಸಿದರೆ ಚಿತ್ರವು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಯಿತು. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮತ್ತು ದಿಶಾ ಪಟಾನಿ ಗಮನಾರ್ಹ ಪಾತ್ರಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಹನುಮಾನ್
ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಹನುಮಾನ್ ಈ ವರ್ಷದ ಅತಿದೊಡ್ಡ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ. ಚಿತ್ರದಲ್ಲಿ ತೇಜ ಸಜ್ಜ, ಅಮೃತಾ ಅಯ್ಯರ್, ವರಲಕ್ಷ್ಮಿ ಶರತ್‌ಕುಮಾರ್, ಸಮುದ್ರಕಣಿ, ವಿನಯ್ ರೈ ಮತ್ತು ವೆನ್ನೆಲ ಕಿಶೋರ್ ನಟಿಸಿದ್ದಾರೆ. ಪ್ರಶಾಂತ್ ವರ್ಮಾ ಅವರ ನಿರ್ದೇಶನದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಭಗವಾನ್ ಹನುಮಾನ್ ಕಥೆಯಿಂದ ಪ್ರೇರಿತವಾಗಿದೆ.
ಅಖಂಡ 2
2021ರ ಸೂಪರ್‌ಹಿಟ್ ಅಖಂಡದ ಮುಂದುವರಿದ ಭಾಗ ಅಖಂಡ 2ನಲ್ಲಿ ನಂದಮೂರಿ ಬಾಲಕೃಷ್ಣ ನಾಯಕನಾಗಿ ನಟಿಸಿದ್ದಾರೆ. ಇನ್ನೂ ಬಿಡುಗಡೆಯಾಗಬೇಕಿರುವ ಈ ಚಿತ್ರವನ್ನು ಅನಿಲ್ ರವಿಪುಡಿ ಅವರು ನಿರ್ದೇಶಿಸುತ್ತಿದ್ದು, ಹರೀಶ್ ಪೆದ್ದಿ ನಿರ್ಮಾಪಕರಾಗಿದ್ದಾರೆ. ಇದು ಎಸ್ ಜೆ ಸೂರ್ಯ, ಜಗಪತಿ ಬಾಬು, ಕಾವ್ಯ ಥಾಪರ್, ಪ್ರಜ್ಞಾ ಜೈಸ್ವಾಲ್ ಮತ್ತು ಇತರರ ಹಲವು ಪ್ರಮುಖ ನಟನಟಿಯರನ್ನು ಒಳಗೊಂಡಿದೆ. ವರದಿಗಳ ಪ್ರಕಾರ ಈ ಚಿತ್ರವು ವರ್ಷಾಂತ್ಯಕ್ಕೆ ಥಿಯೇಟರ್‌ಗಳಿಗೆ ಬರಬಹುದು ಎನ್ನಲಾಗಿದೆ.
ವಿಶ್ವಂಭರ
ಫ್ಯಾಂಟಸಿ ಎಂದು ಡಬ್ ಮಾಡಲಾಗಿರುವ ವಿಶ್ವಂಭರ ಚಿತ್ರ ಕೂಡ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಮೆಗಾಸ್ಟಾರ್ ಚಿರಂಜೀವಿ ಅವರು ದೊರಬಾಬು ಪಾತ್ರದಲ್ಲಿ ಕಾಣಿಕೊಂಡಿದ್ದಾರೆ. ಈ ಚಿತ್ರವನ್ನು ಮಲ್ಲಿಡಿ ವಸಿಷ್ಟ ಅವರು ನಿರ್ದೇಶಿಸುತ್ತಿದ್ದು, ಇವರೇ ಇ6ದರ ಬರಹಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ತಾರಾಗಣದಲ್ಲಿ ತ್ರಿಶಾ ಕೃಷ್ಣನ್, ಮೀನಾಕ್ಷಿ ಚೌಧರಿ, ಸುರಭಿ ಪುರಾಣಿಕ್, ಹರ್ಷ ವರ್ಧನ್ ಸೇರಿದಂತೆ ಹಲವರು ಇದ್ದಾರೆ.
ಇದನ್ನೂ ಓದಿ: Bhama Kurup: ಡಿವೋರ್ಸ್ ಆದ ಬೆನ್ನಲ್ಲೇ ಹೆಣ್ಣು ಮಕ್ಕಳಿಗೆ ಮದುವೆ ಬೇಕಾ? ಎಂದು ಪೋಸ್ಟ್ ಮಾಡಿದ ʻಶೈಲೂʼ ನಟಿ!
ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವಿ. ವಂಶಿ ಕೃಷ್ಣಾ ರೆಡ್ಡಿ, ಪ್ರಮೋದ್ ಉಪ್ಪಲಪತಿ ಮತ್ತು ವಿಕ್ರಮ್ ರೆಡ್ಡಿ ನಿರ್ಮಿಸಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.