ಬೆಂಗಳೂರು: ತೆಲುಗು ನಟ ನಾಗಾರ್ಜುನ್ ಬ್ರಹ್ಮಾಸ್ತ್ರ ಸಿನಿಮಾ ಭಾಗ ಒಂದರಲ್ಲಿ ಅನೀಶ್ ಶೆಟ್ಟಿ ಪಾತ್ರದ ಮೂಲಕ ಮಿಂಚಿದ್ದಾರೆ. ಈ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಇದೀಗ ಅವರ ಮುಂದಿನ ಚಿತ್ರ ಪ್ರವೀಣ್ ಸತ್ತಾರು ನಿರ್ದೇಶನದ ಥ್ರಿಲ್ಲರ್ ʻದಿ ಘೋಸ್ಟ್ʼ ಬಿಡುಗಡೆಗೆ ಸಜ್ಜಾಗುತ್ತಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಅಕ್ಟೋಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆದರೆ ಅದೇ ದಿನ ನಟ ಚಿರಂಜೀವಿ ನಟನೆಯ ʻಗಾಡ್ ಫಾದರ್ʼ ಕೂಡ ರಿಲೀಸ್ ಆಗುತ್ತಿದೆ. ಇದೀಗ ಪ್ರೇಕ್ಷಕರಲ್ಲಿ ಯಾವ ಸಿನಿಮಾ (Tollywood New Film) ನೋಡಬೇಕು ಎಂಬ ಕುತೂಹಲ ಹೆಚ್ಚಾಗಿದೆ.
ʻಗಾಡ್ ಫಾದರ್ʼ ಮಲಯಾಳಂನಲ್ಲಿ ಮೋಹನ್ ಲಾಲ್ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಮೆಗಾಸ್ಟಾರ್ ನಿಭಾಯಿಸಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ನಯನತಾರಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮೋಹನ್ ರಾಜಾ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಈ ಸಿನಿಮಾ ಕೂಡ ʻಗಾಡ್ಫಾದರ್ʼ ಸಿನಿಮಾ ವಿಜಯದಶಮಿ ಪ್ರಯುಕ್ತ ಅಕ್ಟೋಬರ್ 5ರಂದು ಬಿಡುಗಡೆಗೊಳ್ಳುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ತೆಲುಗು ಚಿತ್ರರಂಗದಲ್ಲಿ ಎರಡೂ ಸಿನಿಮಾಗಳು ಒಂದೇ ದಿನ ಕ್ಲ್ಯಾಶ್ ಆಗಲಿವೆ.
ಇದನ್ನೂ ಓದಿ | Chiranjeevi | ಮೆಗಾ ಸ್ಟಾರ್ ಹುಟ್ಟುಹಬ್ಬಕ್ಕೆ ಗಾಡ್ ಫಾದರ್ ಟೀಸರ್ ಔಟ್: ಫಿದಾ ಆದ ಫ್ಯಾನ್ಸ್!
ಈ ಬಗ್ಗೆ ಸಂದರ್ಶನವೊಂದರಲ್ಲಿ ಚಿರಂಜೀವಿ ಕುರಿತು ನಾಗಾರ್ಜುನ ಮಾತನಾಡಿ ʻಚಿರಂಜೀವಿ ಅವರನ್ನು ನೋಡಿ ಬೆಳೆದು ಬಂದವನು ನಾನು. ಜನರು ತುಂಬಾ ಅವರನ್ನು ಇಷ್ಟ ಪಡುತ್ತಾರೆ. ಒಂದೇ ದಿನ ಎರಡು ಸಿನಿಮಾಗಳು ಬಿಡುಗಡೆಗೊಳ್ಳುತ್ತಿರುವುದಕ್ಕೆ ಆತಂಕವೂ ಇದೆ. ಬಾಕ್ಸ್ ಆಫೀಸ್ ವಿಚಾರಕ್ಕೆ ಬಂದರೆ 40-50 ವರ್ಷಗಳಿಂದ ದಸರಾ ಸಮಯದಲ್ಲಿ ಒಟ್ಟಿಗೆ ಸಾಕಷ್ಟು ಸಿನಿಮಾಗಳು ತೆರೆ ಮೇಲೆ ಬರುತ್ತವೆ. ಆದರೆ ಯಾವ ಸಿನಿಮಾ ಚೆನ್ನಾಗಿರುತ್ತದೋ ಅದು ಗೆಲ್ಲುತ್ತದೆʼʼ ಎಂದು ಹೇಳಿದ್ದಾರೆ.
ಇದನ್ನೂ ಓದಿ | Chiranjeevi | ಮೆಗಾ ಸ್ಟಾರ್ ಹುಟ್ಟುಹಬ್ಬಕ್ಕೆ ಗಾಡ್ ಫಾದರ್ ಟೀಸರ್ ಔಟ್: ಫಿದಾ ಆದ ಫ್ಯಾನ್ಸ್!
ದಕ್ಷಿಣ ಭಾರತದ ಈ ಎರಡೂ ಸಿನಿಮಾಗಳಲ್ಲಿ ಬಾಲಿವುಡ್ ತಾರೆಯರು ಕಾಣಿಸಿಕೊಂಡಿರುವುದು ವಿಶೇಷ. ಅದರಲ್ಲಿ ಸೋನಾಲ್ ಚೌಹಾಣ್ ಮತ್ತು ಗುಲ್ ಪನಾಗ್ ಪ್ರಮುಖ ನಟಿಯರಾಗಿ ದಿ ಘೋಸ್ಟ್ನಲ್ಲಿ ನಟಿಸಿದ್ದಾರೆ. ಹಾಗೂ ಚಿರಂಜೀವಿ ಅಭಿನಯದ ಗಾಡ್ಫಾದರ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ.