Site icon Vistara News

Tollywood News | ನಿರ್ಮಾಪಕನ ವಿರುದ್ಧ ಬೆತ್ತಲಾಗಿ ಪ್ರತಿಭಟನೆ ನಡೆಸಿದ ಟಾಲಿವುಡ್‌ ನಟಿ!

Tollywood News

ಬೆಂಗಳೂರು: ಟಾಲಿವುಡ್‌ನಲ್ಲಿ ನಿರ್ಮಾಪಕ (Tollywood News) ಮೋಸ ಮಾಡಿದ್ದಾನೆಂದು ತೆಲುಗು ನಟಿ ಬೆತ್ತಲಾಗಿ ಪ್ರತಿಭಟನೆ ನಡೆಸಿದ್ದಾರೆ. ನಿರ್ಮಾಪಕ ಬನ್ನಿ ವಾಸು ವಿರುದ್ಧ ನಟಿ ಸುನಿತಾ ಬೋಯಾ ಗೀತಾ ಆರ್ಟ್ಸ್‌ ಕಚೇರಿ ಎದರು ಬೆತ್ತಲಾಗಿದ್ದಾರೆ. ಇದೀಗ ನಟಿ ಪ್ರತಿಭಟನೆ ಮಾಡಿರುವ ಫೋಟೊ ಮತ್ತು ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ನಿರ್ಮಾಪಕ ಬನ್ನಿ ವಾಸು ಅವರ ನಿರ್ಮಾಣದ ಧಾರಾವಾಹಿಯಲ್ಲಿ ನಟಿ ನಟಿಸುತ್ತಿದ್ದರಂತೆ. ಅವರಿಗೆ ಕೋಡಬೇಕಾದ ಹಣವನ್ನು ನಿರ್ಮಾಪಕ ಪಾವತಿಸಿದ ಕಾರಣ ನಟಿ ಈ ರೀತಿ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಕಚೇರಿ ಮುಂದೆ ಪ್ರತಿಭಟನೆ ನಡೆಸಿರುವ ನಟಿ ಸುನಿತಾ ಬೋಯಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ನಂತರ ಪೊಲೀಸರು ಆಕೆಗೆ ಬಟ್ಟೆ ಹಾಕಿ ಸಮಾಧಾನದ ಮಾತುಗಳನ್ನು ಆಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ | Telugu Film | ಹೊಸ ನಿಯಮ ಜಾರಿಗೆ ತಂದ ಟಾಲಿವುಡ್‌: ಇದು ಕಾಂತಾರ ಎಫೆಕ್ಟ್‌, ವೈರಲ್‌ ಆಯ್ತು ಪ್ರೆಸ್‌ ನೋಟ್‌!

ಬನ್ನಿ ವಾಸು ಅವರು ಗೀತಾ ಆರ್ಟ್ಸ್ ಮೂಲಕ ತಮ್ಮ ಸಿನಿಮಾ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅಲ್ಲು ಅರ್ಜುನ್ ಅವರೊಂದಿಗೆ ಬನ್ನಿ ವಾಸು ಅವರ ನಿಕಟತೆ ಅವರನ್ನು ವಿತರಕ ಮತ್ತು ನಿರ್ಮಾಪಕರಾಗಿ ಎತ್ತರಕ್ಕೆ ಬೆಳೆಯಲು ಕಾರಣವಾಯಿತು ಎಂಬ ಮಾತುಗಳು ಕೇಳಿ ಬಂದಿವೆ.

ಇದನ್ನೂ ಓದಿ | Actor Mahesh Babu | ಟಾಲಿವುಡ್‌ ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ತಂದೆ ಆಸ್ಪತ್ರೆಗೆ ದಾಖಲು!

Exit mobile version