Site icon Vistara News

Top 10 Indian Movies 2022 | ಕೆಜಿಎಫ್‌, ಕಾಂತಾರವನ್ನು ಹಿಂದಿಕ್ಕಿದ ಬ್ರಹ್ಮಾಸ್ತ್ರ!

Top 10 Indian Movies 2022

ಬೆಂಗಳೂರು: 2022ರ ಭಾರತೀಯ ಚಲನಚಿತ್ರಗಳಲ್ಲಿ ಅತಿ ಹೆಚ್ಚು ಗೂಗಲ್‌ ಸರ್ಚ್‌ ಮಾಡಿರುವ ಟಾಪ್‌ 10 ಸಿನಿಮಾಗಳ ಪಟ್ಟಿ (Top 10 Indian Movies 2022 ) ಅನಾವರಣಗೊಂಡಿದೆ. 2022ರ ಕಳೆದ 12 ತಿಂಗಳುಗಳಲ್ಲಿ ʻಬ್ರಹ್ಮಾಸ್ತ್ರ-1ʼ ಗೂಗಲ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಸಿನಿಮಾವಾಗಿ ಹೊರಹೊಮ್ಮಿದೆ. ಅಯಾನ್ ಮುಖರ್ಜಿಯವರ ಬ್ರಹ್ಮಾಸ್ತ್ರ-1 ದಕ್ಷಿಣ ಭಾರತದ ಹಿಟ್‌ ಸಿನಿಮಾಗಳಾದ ಕೆಜಿಎಫ್-2, ಆರ್‌ಆರ್‌ಆರ್, ಕಾಂತಾರ ಮತ್ತು ದಿ ಕಾಶ್ಮೀರ್ ಫೈಲ್‌ಗಳಂತಹ ಜನಪ್ರಿಯ ಬ್ಲಾಕ್‌ಬಸ್ಟರ್‌ ಚಿತ್ರಗಳನ್ನು ಹಿಂದಿಕ್ಕಿದೆ.

‘ಬ್ರಹ್ಮಾಸ್ತ್ರ’ ಫ್ಯಾಂಟಸಿ ಕೆಟಗರಿ ಸಿನಿಮಾ. ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ಮೌನಿ ರಾಯ್ ನಟಿಸಿದ ಬ್ರಹ್ಮಾಸ್ತ್ರ ವಿಶ್ವಾದ್ಯಂತ ₹400 ಕೋಟಿ ರೂ. ಹೆಚ್ಚು ಗಳಿಕೆ ಕಂಡಿದೆ. ಭಾರತೀಯ ಚಲನಚಿತ್ರಗಳ ಪೈಕಿ ಗೂಗಲ್‌ ಸರ್ಚ್‌ನಲ್ಲಿ ಬ್ರಹ್ಮಾಸ್ತ್ರ ಸಿನಿಮಾ ಮೊದಲ ಸ್ಥಾನ ಪಡೆದುಕೊಂಡಿದೆ. ಯಶ್ ಅಭಿನಯದ ಕನ್ನಡ ಬ್ಲಾಕ್‌ಬಸ್ಟರ್ ʻಕೆಜಿಎಫ್ 2ʼ ಸಿನಿಮಾ ಗೂಗಲ್‌ ಸರ್ಚ್‌ನಲ್ಲಿ ಎರಡನೇ ಸ್ಥಾನ ಪಡೆದುಕೊಂಡರೆ, ʻದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಇದನ್ನೂ ಓದಿ | Actress Ramya | ಗೋಡೆಯಲ್ಲಿ ಅರಳಿದ ಸ್ಯಾಂಡಲ್‌ವುಡ್‌ ಪದ್ಮಾವತಿ : ಬಾದಲ್ ಕೈ ಚಳಕದ ವಿಡಿಯೊ ಇಲ್ಲಿದೆ!

2022ರ ಭಾರತೀಯ ಚಲನಚಿತ್ರಗಳಲ್ಲಿ ಅತಿ ಹೆಚ್ಚು ಗೂಗಲ್‌ ಸರ್ಚ್‌ ಮಾಡಿರುವ ಸಿನಿಮಾಗಳ ಪಟ್ಟಿ

  1. ಬ್ರಹ್ಮಾಸ್ತ್ರ-1
  2. K.G.F-2
  3. ದಿ ಕಾಶ್ಮೀರ್‌ ಫೈಲ್ಸ್‌
  4. ಆರ್‌ಆರ್‌ಆರ್‌
  5. ಕಾಂತಾರ ಸಿನಿಮಾ
  6. ಪುಷ್ಪಾ: ದಿ ರೈಸ್
  7. ವಿಕ್ರಮ್
  8. ಲಾಲ್ ಸಿಂಗ್ ಛಡ್ಡಾ
  9. ದೃಶ್ಯಂ-2 ಹಿಂದಿ
  10. ಥಾರ್: ಲವ್‌ ಆ್ಯಂಡ್‌ ಥಂಡರ್
Top 10 Indian Movies 2022

ಸೌತ್‌ ಸಿನಿಮಾಗಳು ಕೂಡ ಟಾಪ್‌ ಪಟ್ಟಿಯಲ್ಲಿ ಇದ್ದು, ʻRRRʼ ಸಿನಿಮಾ ನಾಲ್ಕನೇ ಸ್ಥಾನ, ಕನ್ನಡದ ಹಿಟ್ ʻಕಾಂತಾರʼ 5ನೇ ಸ್ಥಾನ, ಮತ್ತು ಅಲ್ಲು ಅರ್ಜುನ್‌ ನಟನೆಯ ʻಪುಷ್ಪ: ದಿ ರೈಸ್ʼ 6ನೇ ಸ್ಥಾನ, ಕಮಲ್ ಹಾಸನ್ ಅವರ ತಮಿಳು ಸಿನಿಮಾ ʻವಿಕ್ರಮ್ʼ 7ನೇ ಸ್ಥಾನದಲ್ಲಿದೆ. ತೆಲುಗಿನ ಹಿಟ್ ʻಪುಷ್ಪ: ದಿ ರೈಸ್ʼ ಇದು ಕಳೆದ ವರ್ಷ ಬಿಡುಗಡೆಯಾಗಿದ್ದರೂ 2022ರ ಗೂಗಲ್‌ ಸರ್ಚ್‌ನ ಟ್ರೆಂಡ್‌ಗಳಲ್ಲಿ ಪ್ರಾಬಲ್ಯ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ | Kantara movie | ವಿಶ್ವಾದ್ಯಂತ ಕಾಂತಾರ ಸಿನಿಮಾ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಹೀಗಿದೆ

ದಕ್ಷಿಣ ಭಾರತ ಸಿನಿಮಾಗಳದೇ ಮೇಲುಗೈ
ದಕ್ಷಿಣದ ಐದು ಸಿನಿಮಾಗಳ ಮುಂದೆ ಕೇವಲ ನಾಲ್ಕು ಹಿಂದಿ ಚಲನಚಿತ್ರಗಳು ಟಾಪ್‌ 10ರಲ್ಲಿ ಸ್ಥಾನ ಪಡೆದಿವೆ. ʻಬ್ರಹ್ಮಾಸ್ತ್ರʼ ಮತ್ತು ʻದಿ ಕಾಶ್ಮೀರ್ ಫೈಲ್ಸ್ʼ ಜತೆಗೆ, ಅಮೀರ್ ಖಾನ್ ಅವರ ʻಲಾಲ್ ಸಿಂಗ್ ಛಡ್ಡಾʼ ಮತ್ತು ಅಜಯ್ ದೇವಗನ್ ಅವರ ʻದೃಶ್ಯಂ 2ʼ ಸಹ ಟಾಪ್ 10ರಲ್ಲಿ ಸ್ಥಾನ ಪಡೆದಿವೆ.

ಹಾಲಿವುಡ್‌ನಲ್ಲಿ ʻಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್ʼ ಮತ್ತು ʻಮಲ್ಟಿವರ್ಸ್ ಆಫ್ ಮ್ಯಾಡ್‌ನೆಸ್‌ ಡಾಕ್ಟರ್ ಸ್ಟ್ರೇಂಜ್ʼ ಎರಡೂ ಸಿನಿಮಾಗಳು ಥಾರ್-4 ಗಿಂತ ಹೆಚ್ಚಿನದಾಗಿ ಬ್ಯುಸಿನೆಸ್‌ನಲ್ಲಿ ಸಕ್ಸೆಸ್‌ ಕಂಡಿದ್ದರೂ, ಮಾರ್ವೆಲ್ಸ್ ಥಾರ್: ಥಾರ್: ಲವ್‌ ಆ್ಯಂಡ್‌ ಥಂಡರ್‌ ಸಿನಿಮಾ ಜನರನ್ನು ರೀಚ್‌ ಆಗುವಲ್ಲಿ ಯಶಸ್ವಿಯಾಗಿದೆ.

ಕಳೆದ ವರ್ಷ ನಟ ಸೂರ್ಯ ಅವರ ತಮಿಳಿನ ʻಜೈ ಭೀಮ್ʼ ಸಿನಿಮಾ ಗೂಗಲ್‌ ಸರ್ಚ್‌ನಲ್ಲಿ ಅಗ್ರಸ್ಥಾನ ಪಡೆದುಕೊಂಡಿತ್ತು. ಈ ವರ್ಷ ಕಮರ್ಷಿಯಲ್‌ ಹಾಗೂ ದೊಡ್ಡ-ಬಜೆಟ್ ಸಿನಿಮಾಗಳು ಹೆಚ್ಚಾಗಿ ಸ್ಥಾನ ಪಡೆದುಕೊಂಡಿದೆ. ʻಲಾಲ್ ಸಿಂಗ್ ಛಡ್ಡಾʼ ಸಿನಿಮಾ ಹೊರತುಪಡಿಸಿ ಅಗ್ರ ಸ್ಥಾನದಲ್ಲಿರುವ ಟಾಪ್‌ 10ರಲ್ಲಿ ಕಾಣಸಿಗುವ ಸಿನಿಮಾಗಳು ಕಮರ್ಷಿಲ್‌ ಆಗಿ ಸಕ್ಸೆಸ್‌ ಕಂಡ ಸಿನಿಮಾಗಳಾಗಿವೆ.

ಇದನ್ನೂ ಓದಿ | Brahmastra Review | ಬಾಲಿವುಡ್ ವಿರುದ್ಧ ಮತ್ತೊಮ್ಮೆ ಬಾಯ್ಕಾಟ್ ‘ಬ್ರಹ್ಮಾಸ್ತ್ರ’

Exit mobile version