Site icon Vistara News

Upcoming Web Series: ನೆಚ್ಚಿನ ವೆಬ್‌ಸಿರೀಸ್‌ಗಳ ರಿಲೀಸ್ ಡೇಟ್ ಅನೌನ್ಸ್;‌ ಮಾರ್ಕ್‌ ಮಾಡಿಕೊಳ್ಳಿ

ott

ott

ನವದೆಹಲಿ: ವೀಕ್ಷಕರಿಗೆ ಭರಪೂರ ಮನೋರಂಜನೆ ನೀಡಲು ಒಟಿಟಿ ಫ್ಲಾಟ್‌ಫಾರ್ಮ್‌ಗಳು ಸಜ್ಜಾಗಿವೆ. ನೆಟ್‌ಫ್ಲಿಕ್ಸ್‌, ಡಿಸ್ನಿ ಹಾಟ್‌ಸ್ಟಾರ್‌, ಅಮೇಜಾನ್‌ ಪ್ರೈಮ್‌ ವಿಡಿಯೊ ಮುಂತಾದ ಒಟಿಟಿ ಫ್ಲಾಟ್‌ಫಾರ್ಮ್‌ಗಳು ಬಹು ನಿರೀಕ್ಷಿತ ವೆಬ್‌ ಸೀರಿಸ್‌, ಸಿನಿಮಾಗಳ ಸ್ಟ್ರೀಮಿಂಗ್‌ಗೆ (Upcoming Web Series) ತಯಾರಾಗಿದ್ದು ಆ ಕುರಿತಾದ ವಿವರ ಇಲ್ಲಿದೆ.

ಚೂನಾ (ನೆಟ್‌ಫ್ಲಿಕ್ಸ್‌)

ಬಹು ನಿರೀಕ್ಷಿತ ಹಿಂದಿ ಟಿವಿ ಸೀರಿಸ್‌ ʼಚೂನಾʼ (Choona) ಸೆಪ್ಟಂಬರ್‌ 29ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಪುಷ್ಪೇಂದ್ರನಾಥ್‌ ಮಿಶ್ರ ನಿರ್ದೇಶನದ ಈ ಸೀರಿಸ್‌ನಲ್ಲಿ ಜಿಮ್ಮಿ ಶೇರ್‌ಗಿಲ್‌, ಆಶಿಮ್‌ ಗುಲಾಟಿ, ಅರ್ಷದ್‌ ವಾರ್ಸಿ, ಚಂದನ್‌ ರಾಯ್‌, ಮೋನಿಕಾ ಪನ್ವಾರ್‌ ಮತ್ತಿತರರು ನಟಿಸಿದ್ದಾರೆ. ದರೋಡೆಯ ಸುತ್ತ ನಡೆಯುವ ಕಥೆಯನ್ನೊಳಗೊಂಡ ಈ ಸೀರಿಸ್‌ ಈಗಾಗಲೇ ಕುತೂಹಲ ಮೂಡಿಸಿದೆ.

ಲೋಕಿ ಸೀಸನ್‌ 2 (ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌)

ಇನ್ನೊಂದು ಬಹು ನಿರೀಕ್ಷಿತ ಅಮೇರಿಕನ್‌ ಟಿವಿ ಸೀರಿಸ್‌ ಲೋಕಿ ಸೀಸನ್‌ 2 (Loki season 2) ಅಕ್ಟೋಬರ್‌ 5ರಿಂದ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ಮಾರ್ವೆಲ್‌ ಕಾಮಿಕ್ಸ್‌ ಆಧಾರದಲ್ಲಿ ಈ ಸೀರಿಸ್‌ ತಯಾರಿಸಲಾಗಿದೆ. ಟಾಮ್ ಹಿಡ್ಲ್ಸ್ಟನ್, ಸೋಫಿಯಾ ಡಿ ಮಾರ್ಟಿನೊ, ಗುಗು ಎಂಬಾತಾ-ರಾ, ವುನ್ಮಿ ಮೊಸಾಕು, ಯುಜೀನ್ ಕಾರ್ಡೆರೊ, ರಾಫೆಲ್ ಕ್ಯಾಸಲ್, ತಾರ ಸ್ಟ್ರಾಂಗ್, ಕೇಟ್ ಡಿಕಿ, ಲಿಜ್ ಕಾರ್ ಮತ್ತಿತರರು ನಟಿಸಿದ್ದಾರೆ. ಇದರಲ್ಲಿ ಒಟ್ಟು 6 ಎಪಿಸೋಡ್‌ಗಳು ಇರಲಿವೆ.

ಸುಲ್ತಾನ್‌ ಆಫ್‌ ಡೆಲ್ಲಿ (ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌)

ಬಾಲಿವುಡ್‌ನ ಯಶಸ್ವಿ ನಿರ್ದೇಶಕ ಮಿಲನ್‌ ಲುಥಾರಿಯಾ ನಿರ್ದೇಶನದ ಗ್ಯಾಂಗ್‌ಸ್ಟರ್‌ ಡ್ರಾಮಾ ಸುಲ್ತಾನ್‌ ಆಫ್‌ ಡೆಲ್ಲಿ (Sultan Of Delhi) ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಅಕ್ಟೋಬರ್‌ 13ರಿಂದ ವೀಕ್ಷಣೆಗೆ ಲಭ್ಯ. ಅರ್ನಬ್‌ ರಾಯ್‌ ಅವರ ಸುಲ್ತಾನ್‌ ಆಫ್‌ ದಿಲ್ಲಿ ಪುಸ್ತಕದ ಆಧಾರದಲ್ಲಿ ಈ ಸೀರಿಸ್‌ ತಯಾರಿಸಲಾಗಿದೆ. ಅರ್ಜುನ್‌ ಭಾಟಿಯಾ ಕಥೆಯನ್ನು ಈ ಸೀರಿಸ್‌ ಹೇಳಲಿದೆ. ತಾಹಿರ್‌ ರಾಜ್‌ ಬಾಸಿನ್‌, ಮೌನಿ ರಾಯ್‌, ಅಂಜುಮನ್‌ ಶರ್ಮಾ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇಂಡಿಯನ್‌ ಪೊಲೀಸ್‌ ಫೋರ್ಸ್‌ (ಪ್ರೈಮ್‌ ವಿಡಿಯೊ)

ಬಾಲಿವುಡ್‌ನ ಯಶಸ್ವಿ ನಿರ್ದೇಶಕ ರೋಹಿತ್‌ ಶೆಟ್ಟಿ ಮತ್ತು ಸುಶ್ವಂತ್‌ ಪ್ರಕಾಶ್‌ ಆಕ್ಷನ್‌ ಕಟ್‌ ಹೇಳಿರುವ ‘ಇಂಡಿಯನ್‌ ಪೊಲೀಸ್‌ ಫೋರ್ಸ್‌’ (Indian Police Force) ಸೀರಿಸ್‌ ದೀಪಾವಳಿಗೆ ಅಮೆಜಾನ್ ಪ್ರೈಮ್‌ ವಿಡಿಯೊ ಮೂಲಕ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದು ದಿಲ್ಲಿಯ ಐಪಿಎಸ್‌ ಅಧಿಕಾರಿ ಎಸ್‌.ಪಿ.ಕಬೀರ್ ಮಲಿಕ್‌ ಅವರ ಜೀವನವನ್ನು ಆಧರಿಸಿದೆ. ಸಿದ್ಧಾರ್ಥ್‌ ಮಲ್ಹೋತ್ರ, ಶಿಲ್ಪಾ ಶೆಟ್ಟಿ, ವಿವೇಕ್‌ ಒಬೇರಾಯ್‌ ಮತ್ತಿತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಎಕೊ (ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌)

ನವೆಂಬರ್‌ 25ರಂದು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ʼಎಕೊʼ (Echo) ಮಾರ್ವೆಲ್‌ ಸೀರಿಸ್‌ ಪ್ರಸಾರ ಆರಂಭವಾಗಲಿದೆ. ಅಲಾಕ್ವಾ ಕಾಕ್ಸ್, ಜಾನ್ ಮೆಕ್ಲಾರ್ನಾನ್, ವಿನ್ಸೆಂಟ್ ಡಿ’ಒನೊಫ್ರಿಯೊ, ಚಾರ್ಲಿ ಕಾಕ್ಸ್, ಚಾಸ್ಕೆ ಸ್ಪೆನ್ಸರ್, ಟ್ಯಾಂಟೂ ಕಾರ್ಡಿನಲ್, ಡೆವೆರಿ ಜೇಕಬ್ಸ್, ಕೋಡಿ ಲೈಟ್ನಿಂಗ್, ಗ್ರಹಾಂ ಗ್ರೀನ್ ಮತ್ತಿತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Lady Super Star: ʼಜವಾನ್‌ʼ ನಯನತಾರಾ ಶ್ರೀಮಂತ ನಟಿ! ಆಸ್ತಿ ಮೌಲ್ಯ ಎಷ್ಟು?

ಈ ಸಿರೀಸ್‌ ಟ್ರೈಲರ್‌ ಕೂಡ ಜನಮನ್ನಣೆ ಗಳಿಸಿದ್ದು, ಜನ ಸಿರೀಸ್‌ ರಿಲೀಸ್‌ಗೆ ಕಾಯುತ್ತಿದ್ದಾರೆ. ಸಸ್ಪೆನ್ಸ್‌ ಥ್ರಿಲ್ಲರ್‌ ವೆಬ್‌ ಸಿರೀಸ್‌ ಇದಾಗಿದ್ದು, ರಿಲೀಸ್‌ ಆಗುವತನಕ ಕಾಯಲೇಬೇಕಾಗಿದೆ.

Exit mobile version