Site icon Vistara News

Cinema News : ಸಿನಿಮಾಗಳ ಎರಡನೇ ಭಾಗಗಳು ಗಳಿಸಿದ್ದು ಎಷ್ಟು? ಯಾವುದು ಹಿಟ್‌? ಯಾವುದು ಫ್ಲಾಪ್‌?

cinema sequel

ಬೆಂಗಳೂರು: ಸಿನಿಮಾ ಯಶಸ್ಸು ಕಾಣುತ್ತದೆಯೋ ಇಲ್ಲವೋ ಎಂದು ಹೇಳುವುದಕ್ಕೆ ವಾರಗಟ್ಟಲೆ ಕಾಯಬೇಕಿಲ್ಲ. ಸಿನಿಮಾ ಬಿಡುಗಡೆಯಾಗಿ ಎರಡು ಮೂರು ದಿನಗಳಲ್ಲೇ ಅದರ ಹಣೆಬರಹ ಗೊತ್ತಾಗಿಬಿಡುತ್ತದೆ. ಸಿನಿಮಾ ಯಶಸ್ಸಿನ ಮೇಲೇ ಅದರ ಎರಡನೇ ಭಾಗವೂ ನಿಂತಿರುತ್ತದೆ ಎನ್ನುವುದು ಸುಳ್ಳಲ್ಲ. ಆ ರೀತಿಯಲ್ಲಿ ನಮ್ಮ ಸಿನಿಮಾ ಕ್ಷೇತ್ರದಲ್ಲಿ ಹಲವು ಸಿನಿಮಾಗಳು ಎರಡು, ಮೂರು ಭಾಗಗಳಲ್ಲಿ ಬಿಡುಗಡೆಯಾಗಿವೆ. ಆ ರೀತಿ ಬಿಡುಗಡೆಯಾದ ಎರಡನೇ ಭಾಗದ ಸಿನಿಮಾಗಳಲ್ಲಿ ಹೆಚ್ಚು ಗಳಿಕೆ ಕಂಡಿದ್ದು ಯಾವುವು ಎನ್ನುವುದರ ಬಗ್ಗೆ ಇಲ್ಲಿದೆ (Cinema News) ವಿವರ.

ಈ ಪಟ್ಟಿಯಲ್ಲಿ ಮೊದಲನೇ ಸಾಲಿನಲ್ಲಿ ನಿಲ್ಲುವುದು ಬಾಹುಬಲಿ: ದಿ ಕನ್‌ಕ್ಲೂಷನ್‌ ಸಿನಿಮಾ. ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಈ ಸಿನಿಮಾ 2017ರಲ್ಲಿ ಬಿಡುಗಡೆಯಾಯಿತು. ಬಾಹುಬಲಿ: ದಿ ಬಿಗಿನಿಂಗ್‌ ಸಿನಿಮಾದ ಮುಂದುವರಿದ ಭಾಗವಾದ ಈ ಸಿನಿಮಾ ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಸೀಕ್ವೆಲ್ ಆಗಿದೆ. ಚಿತ್ರವು ಜಾಗತಿಕವಾಗಿ 1,800 ಕೋಟಿ ರೂ. ಗಳಿಸಿತು.


ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವುದು ನಮ್ಮ ಸ್ಯಾಂಡಲ್‌ವುಡ್‌ನ ಕೆಜಿಎಫ್‌ 2 ಸಿನಿಮಾ. ಈ ಸಿನಿಮಾ ವಿಶ್ವಾದ್ಯಂತ 1200 ಕೋಟಿ ರೂ. ಗಳಿಸಿಕೊಂಡಿತು. ಪ್ರಶಾಂತ್‌ ನೀಲ್‌ ನಿರ್ದೇಶನದಲ್ಲಿ ಬಂದ ಈ ಸಿನಿಮಾದಲ್ಲಿ ನಟ ಯಶ್‌, ಸಂಜಯ್‌ ದತ್‌, ರವೀನಾ ಟಂಡನ್ ಮತ್ತು ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಪಟ್ಟಿಯ ಮೂರನೇ ಸ್ಥಾನದಲ್ಲಿರುವುದು ಅಕ್ಷಯ್‌ ಕುಮಾರ್‌ ಮತ್ತು ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ಚಿತ್ರ ‘2.0’. 2018ರಲ್ಲಿ ಬಿಡುಗಡೆಯಾದ ಈ ಸಿನಿಮಾ ಜಾಗತಿಕವಾಗಿ 720 ಕೋಟಿ ರೂ. ಅನ್ನು ಗಳಿಸುವುದರಲ್ಲಿ ಯಶಸ್ವಿಯಾಯಿತು.

ಇದನ್ನೂ ಓದಿ: Kamal Haasan: ʻ233ನೇʼ ಸಿನಿಮಾದ ಅಪ್‌ಡೇಟ್‌ ಹಂಚಿಕೊಂಡ ಕಮಲ್‌ ಹಾಸನ್‌!
ಸಲ್ಮಾನ್‌ ಖಾನ್‌ ಅವರ ಟೈಗರ್‌ ಜಿಂದಾ ಹೈ ಸಿನಿಮಾ 2017ರಲ್ಲಿ ಬಿಡುಗಡೆಯಾಯಿತು. ಆ ಸಿನಿಮಾ ಈ ಪಟ್ಟಿಯ ನಾಲ್ಕನೇ ಸ್ಥಾನದಲ್ಲಿದೆ. ಈ ಸಿನಿಮಾ ವಿಶ್ವಾದ್ಯಂತ ಒಟ್ಟು 565 ಕೋಟಿ ರೂ. ಬಾಚಿಕೊಳ್ಳುವಲ್ಲಿ ಯಶಸ್ವಿಯಾಯಿತು. ಆಮಿರ್‌ ಖಾನ್‌ ಅವರ ಧೂಮ್‌ 3 ಸಿನಿಮಾ ಬಿಡುಗಡೆಯಾಗಿ ಹತ್ತು ವರ್ಷಗಳೇ ಕಳೆದಿವೆ. ಆದರೂ ಆ ಸಿನಿಮಾಕ್ಕೆ ಈ ಪಟ್ಟಿಯಲ್ಲಿ ಐದನೇ ಸ್ಥಾನ ಸಿಕ್ಕಿದೆ. ಜಾನ್‌ ಅಬ್ರಾಹಂ ಮತ್ತು ಹೃತಿಕ್‌ ರೋಷನ್‌ ಕೂಡ ಕಾಣಿಸಿಕೊಂಡ ಈ ಸಿನಿಮಾ 100 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತಾದರೂ, ವಿಶ್ವಾದ್ಯಂತ 550 ಕೋಟಿ ರೂ. ಅನ್ನು ಗಳಿಸಿಕೊಂಡಿತು.


ಹೃತಿಕ್‌ ರೋಷನ್‌ ಅಭಿನಯದ ಕ್ರಿಶ್‌ 3 ಸಿನಿಮಾ ಭಾರತೀಯರ ಮನ ಮೆಚ್ಚಿದ ಸಿನಿಮಾವಾಗಿತ್ತು. ಈ ಸಿನಿಮಾ ಹೆಚ್ಚು ಗಳಿಕೆ ಕಂಡ ಸೀಕ್ವೆಲ್‌ಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. 2013ರ ನವೆಂಬರ್‌ 1ರಂದು ಬಿಡುಗಡೆಯಾದ ಈ ಸಿನಿಮಾ ಒಟ್ಟು 400 ಕೋಟಿ ರೂ. ಗಳಿಸಿತು. ಈ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ, ಕಂಗನಾ ರಣಾವತ್‌ ಮತ್ತು ವಿವೇಕ್‌ ಒಬೆರಾಯ್‌ ಕೂಡ ನಟಿಸಿದ್ದರು. ಅಜಯ್‌ ದೇವಗನ್‌ ನಟನೆಯ ದೃಶ್ಯಂ 2 ಸಿನಿಮಾ ಜನರಿಗೆ ಇಷ್ಟವಾದ ಸಿನಿಮಾ ಈ ಸಿನಿಮಾ ಜಾಗತಿಕವಾಗಿ 345 ಕೋಟಿ ರೂ. ಗಳಿಸುವ ಮೂಲಕ ಪಟ್ಟಿಯ ಏಳನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Viral News : ಮಳೆ ನೀರು ತುಂಬಿದ್ದ ರಸ್ತೆಯಲ್ಲಿ ಕೆಟ್ಟು ನಿಂತ ಕಾರು, ರಿಪೇರಿಗೆ ಬೇಕಾಯ್ತು 40 ಲಕ್ಷ ರೂಪಾಯಿ!
ಈ ವರ್ಷ ಏಪ್ರಿಲ್‌ನಲ್ಲಿ ಬಿಡುಗಡೆಯಾದ ಪೊನ್ನಿಯಿನ್‌ ಸೆಲ್ವನ್‌ 2 ಸಿನಿಮಾ ಪಟ್ಟಿಯ ಎಂಟನೇ ಸ್ಥಾನದಲ್ಲಿದೆ. ಈ ಸಿನಿಮಾ ಒಟ್ಟು 300 ಕೋಟಿ ರೂ. ಗಳಿಸಿಕೊಂಡಿದೆ. ಸಿನಿಮಾದಲ್ಲಿ ಐಶ್ವರ್ಯ ರೈ, ಕಾರ್ತಿ, ತ್ರಿಶಾ, ಜಯಂ ರವಿ, ಐಶ್ವರ್ಯ ಲಕ್ಷ್ಮಿ ಸೇರಿ ಅನೇಕರು ನಟಿಸಿದ್ದರು.

Exit mobile version