Site icon Vistara News

Totapuri Movie | ನವರಸ ನಾಯಕ ಜಗ್ಗೇಶ್ ಅಭಿನಯದ ತೋತಾಪುರಿ ಸಿನಿಮಾ ಸೆ.30ಕ್ಕೆ ತೆರೆಗೆ

Totapuri Movie

ಬೆಂಗಳೂರು : ನವರಸ ನಾಯಕ ಜಗ್ಗೇಶ್ ಹಾಗೂ ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ತೋತಾಪುರಿ ಭಾಗ-1 (Totapuri Movie) ಸೆ.30ಕ್ಕೆ ವಿಶ್ವಾದ್ಯಂತ ತೆರೆ ಕಾಣಲಿದೆ. ಡೈರೆಕ್ಟರ್ ವಿಜಯಪ್ರಸಾದ್ ಹಾಸ್ಯಭರಿತ ತೋತಾಪುರಿ ಚಿತ್ರವನ್ನು ಎರಡು ಭಾಗದಲ್ಲಿ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಟ್ರೈಲರ್ ಹಾಗೂ ಹಾಡುಗಳಿಂದ ಮೆಚ್ಚುಗೆ ಪಡೆದಿರುವ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದೆ.

ತೋತಾಪುರಿ ಪಾರ್ಟ್-1ನಲ್ಲಿ ಒಂದು ಕಂಟೆಂಟ್ ಇದ್ದರೇ, ಎರಡನೇ ಪಾರ್ಟ್‌ನಲ್ಲಿ ಮತ್ತೊಂದಷ್ಟು ಹಾಸ್ಯ ತುಂಬಿರುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಆದರೆ ಇವರೆಡೂ ಸಿನಿಮಾ ಒಟ್ಟಿಗೆ ಬರುತ್ತಿಲ್ಲ. ಈ ಚಿತ್ರದಲ್ಲಿ ತಾರಾಗಣ, ತಾಂತ್ರಿಕತೆ ಮತ್ತು ಬೇರೆ ಬೇರೆ ಭಾಷೆಗಳಲ್ಲಿ ಗುರುತಿಸಿಕೊಂಡಿರುವ ʻಡಾಲಿ ಧನಂಜಯ್‌ʼʼ ಈ ಸಿನಿಮಾದ ಮತ್ತೊಂದು ಆಕರ್ಷಣೆ.

ನವರಸನಾಯಕ ಜಗ್ಗೇಶ್, ಅದಿತಿ ಪ್ರಭುದೇವ, ಸುಮನ್ ರಂಗನಾಥ್, ಡಾಲಿ ಧನಂಜಯ್, ದತ್ತಣ್ಣ, ವೀಣಾ ಸುಂದರ, ಹೇಮಾದತ್ ಸೇರಿದಂತೆ ಇನ್ನೂ ಅನೇಕರು ಅಭಿನಯಸಿದ್ದಾರೆ. ಈ ಸಿನಿಮಾಗೆ ಅನೂಪ್‌ ಸೀಳಿನ್‌ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ | Varamahalakshmi Festival | ಸ್ಯಾಂಡಲ್‌ವುಡ್‌ ಪೋಸ್ಟರ್‌ ಧಮಾಕಾ: ತೋತಾಪುರಿ ರಿಲೀಸ್‌ ಡೇಟ್‌ ಫಿಕ್ಸ್‌

Exit mobile version