Site icon Vistara News

Pathaan Movie: ಜಾಕಿ ಚಾನ್ ಆನಿಮೇಟೆಡ್‌ನಿಂದ ʻಪಠಾಣ್‌ʼ ಕಾಪಿ ಮಾಡಿದ್ದೇನು? ಹೋಲಿಕೆ ಇದೆ ಅಂದ್ರು ನೆಟ್ಟಿಗರು!

Train scene in Pathaan lifted from old Jackie Chan

ಬೆಂಗಳೂರು: ಶಾರುಖ್‌ ಖಾನ್‌ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ʻಪಠಾಣ್‌ʼ ಸಿನಿಮಾ (Pathaan Movie) ವಿಶ್ವಾದ್ಯಂತ 1048.30 ಕೋಟಿ ರೂ. ಗಳಿಕೆ ಕಂಡಿದೆ. ಇದೀಗ ಪಠಾಣ್‌ ಸಿನಿಮಾದ ದೃಶ್ಯದ ಕುರಿತಾಗಿ ನೆಟ್ಟಿಗರು ಟ್ರೋಲ್‌ ಮಾಡಲು ಶುರು ಮಾಡಿದ್ದಾರೆ. ಹಳೆಯ ಜಾಕಿ ಚಾನ್ ಆನಿಮೇಟೆಡ್ ಶೋ ದೃಶ್ಯ ಹಾಗೂ ಪಠಾಣ್‌ ಸಿನಿಮಾದ ರೈಲಿನ ಸೀಕ್ವೆನ್ಸ್‌ ದೃಶ್ಯ ಒಂದೇ ರೀತಿ ಇವೆ ಎನ್ನಲಾಗುತ್ತಿದೆ. ಜಾಕಿ ಚಾನ್ ಆನಿಮೇಟೆಡ್ ಶೋನಿಂದ ʻಪಠಾಣ್‌ʼ ಸಿನಿಮಾ ದೃಶ್ಯವನ್ನು ಕದ್ದಿದೆ ಎಂದು ನೆಟ್ಟಿಗರು ಟ್ರೋಲ್‌ ಮಾಡಲು ಶುರು ಮಾಡಿದ್ದಾರೆ.

ಜಾಕಿ ಚಾನ್ ಅಡ್ವೆಂಚರ್ಸ್ ಶೋ 2000 ರಿಂದ 2005 ರವರೆಗೆ ಜನಪ್ರೀಯವಾಗಿತ್ತು. ಪಠಾಣ್‌ ಸಿನಿಮಾದ ರೈಲು ಸೀಕ್ವೆನ್ಸ್‌ನಲ್ಲಿ ಸಲ್ಮಾನ್ ಖಾನ್‌ ಮತ್ತು ಶಾರುಖ್ ಖಾನ್‌ ಚಲಿಸುವ ರೈಲಿನಲ್ಲಿ ಸೇತುವೆಯಿಂದ ತಪ್ಪಿಸಿಕೊಳ್ಳಲು ಹಿಮ್ಮುಖವಾಗಿ ಓಡಿ ತಪ್ಪಿಸಿಕೊಳ್ಳುತ್ತಾರೆ. ಬಳಿಕ ರೈಲಿನ ಬೋಗಿಗಳು ಒಂದೊಂದೆ ಸೇತುವೆಯಲ್ಲಿ ಬೀಳುವ ದೃಶ್ಯಗಳು ಪಠಾಣ್‌ ಸಿನಿಮಾದಲ್ಲಿದೆ. ಇದೇ ಸನ್ನಿವೇಶ ಕೂಡ ಜಾಕಿ ಚಾನ್ ಆನಿಮೇಟೆಡ್ ಶೋನಲ್ಲಿಯೂ ಇದೆ. ವಿಡಿಯೊವನ್ನು ನೆಟ್ಟಿಗರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಈ ದೃಶ್ಯ ಜಾಕಿ ಚಾನ್ ಆನಿಮೇಟೆಡ್ ಶೋನಲ್ಲಿ ಇದೆ ಎಂಬುದಾಗಿ ಟ್ರೋಲ್‌ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲದೇ ಪಠಾಣ್‌ ಸಿನಿಮಾದ ಶಾರುಖ್‌ ಲುಕ್‌ ಅನ್‌ಚಾರ್ಟೆಡ್ ಸಿರೀಸ್‌ನ ನಾಥನ್ ಡ್ರೇಕ್‌ನಿಂದ ಪ್ರೇರಿತವಾಗಿದೆ ಎಂದು ಟ್ರೋಲ್‌ ಮಾಡಿದ್ದರು. ಇದೀಗ ಮತ್ತೆ ಟ್ರೈನ್‌ ಸೀಕ್ವೆನ್ಸ್‌ ಬಗ್ಗೆ ಚರ್ಚೆಗಳು ಆಗುತ್ತಿವೆ. ಸಿನಿಮಾ ಕೆಲವು ದೃಶ್ಯಗಳು ಫಾಸ್ಟ್ ಅಂಡ್ ಫ್ಯೂರಿಯಸ್ ಮತ್ತು ಮಿಷನ್: ಇಂಪಾಸಿಬಲ್ ಫ್ರಾಂಚೈಸಿಗಳಿಂದ ಸ್ಫೂರ್ತಿ ಪಡೆದಿವೆ ಎಂದು ಹಲವಾರು ಅಭಿಮಾನಿಗಳು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Pathaan Movie: 52 ವರ್ಷದ ಬಳಿಕ ಬಾಂಗ್ಲಾದೇಶದಲ್ಲಿ ಮೊದಲ ಹಿಂದಿ ಸಿನಿಮಾ ʻಪಠಾಣ್‌ʼ ಬಿಡುಗಡೆ: ರಿಲೀಸ್‌ ಡೇಟ್‌ ಇಲ್ಲಿದೆ!

ಆದಿತ್ಯ ಚೋಪ್ರಾ ಅವರು ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ನಿರ್ಮಿಸಿದ್ದಾರೆ. ಇದರಲ್ಲಿ ಜಾನ್ ಅಬ್ರಹಾಂ, ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೇ ಮೇ 12ರಂದು ಬಾಂಗ್ಲಾದೇಶದಲ್ಲಿ ಬಿಡುಗಡೆಯಾಗಲಿದೆ.

ಬಾಂಗ್ಲಾದೇಶದಲ್ಲಿ ಪಠಾಣ್‌ ಬಿಡುಗಡೆ

ಆದಿತ್ಯ ಚೋಪ್ರಾ ಅವರು ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ನಿರ್ಮಿಸಿದ್ದಾರೆ. ಇದರಲ್ಲಿ ಜಾನ್ ಅಬ್ರಹಾಂ, ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೇ ಮೇ 12ರಂದು ಬಾಂಗ್ಲಾದೇಶದಲ್ಲಿ ಬಿಡುಗಡೆಯಾಗಲಿದೆ. 1971ರ ನಂತರ ಬಾಂಗ್ಲಾದೇಶದಲ್ಲಿ ಬಿಡುಗಡೆಯಾದ ಮೊದಲ ಹಿಂದಿ ಚಲನಚಿತ್ರ ಪಠಾಣ್‌ ಆಗಿದೆ. ಇದರಲ್ಲಿ ಶಾರುಖ್​ ಖಾನ್​ RAW (Research and Analysis Wing)ನ ಏಜೆಂಟ್​ ಆಗಿ ಕಾಣಿಸಿಕೊಂಡಿದ್ದಾರೆ. ಭಯೋತ್ಪಾದಕರನ್ನು ಹತ್ತಿಕ್ಕುವ ಕಥೆ ಇದರಲ್ಲಿದ್ದು, ಜಾನ್​ ಅಬ್ರಾಹಂ ಅವರು ಭಯೋತ್ಪಾದಕನ ಮುಖಂಡನ ಪಾತ್ರ ವಹಿಸಿದ್ದಾರೆ. ಪಠಾಣ್​ ಬಿಡುಗಡೆಯಾಗುತ್ತಿದ್ದಂತೆ ಅತ್ಯಂತ ಯಶಸ್ವಿಯಾಗಿ ಓಡುತ್ತಿದೆ. ಅದರಲ್ಲು ಶಾರುಖ್​ ಖಾನ್​ಗಂತೂ ಅದೆಷ್ಟೋ ವರ್ಷಗಳ ನಂತರದ ಯಶಸ್ಸು ಇದು.


Exit mobile version