Site icon Vistara News

Triptii Dimri: ʻನ್ಯಾಶನಲ್‌ ಕ್ರಶ್‌ʼ ತೃಪ್ತಿ ಡಿಮ್ರಿಯ ಡ್ಯಾನ್ಸ್‌ ಫುಲ್‌ ವೈರಲ್‌!

Triptii also danced to Bole Chudiyan in the video

ಬೆಂಗಳೂರು: ಅನಿಮಲ್‌ ಸಿನಿಮಾ ಮೂಲಕ ತೃಪ್ತಿ ಡಿಮ್ರಿ (Triptii Dimri) ಅವರು ನ್ಯಾಶನಲ್‌ ಕ್ರಶ್‌ ಎಂಬ ಬಿರುದನ್ನು ಪಡೆದಿದ್ದಾರೆ. ಇದೀಗ ನಟಿ ಇನ್‌ಸ್ಟಾ ಸ್ಟೋರಿಯಲ್ಲಿ ರೀಲ್ಸ್‌ಗಳನ್ನು ಹಂಚಿಕೊಂಡಿದ್ದಾರೆ. ಬೋಲೆ ಚುಡಿಯನ್ ಮತ್ತು ಘಾಗ್ರಾ ಸಾಂಗ್‌ಗೆ ಡ್ಯಾನ್ಸ್‌ ಮಾಡುತ್ತಿರುವ ವಿಡಿಯೊ ವೈರಲ್‌ ಆಗಿದೆ. ಮೊದಲ ಹಾಡು ಕರಣ್ ಜೋಹರ್ ಅವರ ನಿರ್ದೇಶನದ ಕಭಿ ಖುಷಿ ಕಭಿ ಗಮ್‌ನಿಂದ ಆದರೆ, ಎರಡನೇ ಹಾಡು ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಅವರ ಯೇ ಜವಾನಿ ಹೈ ದೀವಾನಿಯಲ್ಲಿದೆ. ಈ ವಿಡಿಯೊ ತೃಪ್ತಿ ಅವರ ಸ್ನೇಹಿತರ ಮದುವೆಯ ಕ್ಷಣಗಳು ಎಂದು ಹೇಳುತ್ತಿದ್ದಾರೆ.

ಸಾಜಿದ್ ಅಲಿ ನಿರ್ದೇಶನದ ಲೈಲಾ ಮಜ್ನು ಚಿತ್ರದಲ್ಲಿ ತೃಪ್ತಿ ಡಿಮ್ರಿ ʻಲೈಲಾʼ ಎಂಬ ಪಾತ್ರವನ್ನು ನಿರ್ವಹಿಸಿದ್ದರು. 2017 ರ ʻಬಾಯ್ಸ್ʼ ಚಿತ್ರದಲ್ಲೂ ನಟಿಸಿದ್ದಾರೆ. ಕಳೆದ ವರ್ಷ, ನಟಿ ನೆಟ್‌ಫ್ಲಿಕ್ಸ್‌ನ ಕ್ವಾಲಾದಲ್ಲಿ ಬಾಬಿಲ್ ಖಾನ್ ಜತೆ ನಟಿಸಿದ್ದರು.

ತೃಪ್ತಿ ಡಿಮ್ರಿಯ ಬೆತ್ತಲೆ ಸೀನ್‌ ನೋಡಿ ಆಘಾತಕ್ಕೆ ಒಳಗಾದ ಪೋಷಕರು

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ (Triptii Dimri) ʼಅನಿಮಲ್‌ʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿತ್ತು. ಈ ಚಿತ್ರದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್, ತೃಪ್ತಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಹೆಚ್ಚಾಗಿ ಸಿನಿಮಾದಲ್ಲಿ ಸೌಂಡ್‌ ಮಾಡಿದ್ದು ನಟಿ ತೃಪ್ತಿ ಡಿಮ್ರಿ ಅವರ ಬೆತ್ತಲೆ ಸೀನ್‌. ಸಿನಿಮಾ ಸಕ್ಸೆಸ್‌ಗೆ ಹಲವಾರು ಕಾರಣಗಳಿದ್ದು, ಅವುಗಳಲ್ಲಿ ರಣಬೀರ್ ಕಪೂರ್ ಅವರ ಜತೆ ತೃಪ್ತಿ ಡಿಮ್ರಿ ನಗ್ನವಾಗಿರುವ ಲಿಪ್-ಲಾಕ್ ದೃಶ್ಯ ಕೂಡ ಪ್ರಮುಖ ಕಾರಣ ಎನ್ನಲಾಗುತ್ತಿದೆ. ತೃಪ್ತಿ ಡಿಮ್ರಿ ಈ ಬೋಲ್ಡ್‌ ದೃಶ್ಯವನ್ನು ಕಂಡು ಅವರ ತಂದೆ ತಾಯಿ ಆಘಾತಕ್ಕೆ ಒಳಗಾಗಿದ್ದರು ಎಂದು ನಟಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಇದನ್ನೂ ಓದಿ: Triptii Dimri: ತೃಪ್ತಿ ಡಿಮ್ರಿಯ ಬೆತ್ತಲೆ ಸೀನ್‌ ನೋಡಿ ಆಘಾತಕ್ಕೆ ಒಳಗಾದ ಪೋಷಕರು

ರಣಬೀರ್ ಕಪೂರ್ ಅಭಿನಯದ ಅನಿಮಲ್ ಚಿತ್ರದಲ್ಲಿ ಅಭಿನಯಿಸಿದ ಬಳಿಕ ನಟಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ಅವರು ನ್ಯಾಶನಲ್‌ ಕ್ರಶ್ ಎಂದು ಕರೆಸಿಕೊಳ್ಳುತ್ತಿದ್ದಾರೆ. ಹೆಚ್ಚಾಗಿ ಸಿನಿಮಾದಲ್ಲಿ ಸೌಂಡ್‌ ಮಾಡಿದ್ದು ನಟಿ ತೃಪ್ತಿ ಡಿಮ್ರಿ ಅವರ ಬೆತ್ತಲೆ ಸೀನ್‌. ಈ ಬಗ್ಗೆ ನಟಿ ಮಾತನಾಡಿ “ ಈ ದೃಶ್ಯ ನೋಡಿದ ಕೂಡಲೇ ನನ್ನ ತಂದೆ ತಾಯಿ ಆಘಾತಕ್ಕೆ ಒಳಗಾದರು. ಇಂತಹ ದೃಶ್ಯ ನಾವು ಯಾವುದೇ ಸಿನಿಮಾಗಳಲ್ಲಿ ನೋಡಿಲ್ಲ ಮತ್ತು ನೀನು ಅದನ್ನು ಮಾಡಿದ್ದೀಯಾ. ಹಾಗೆ ಮಾಡಬಾರದಿತ್ತು .ಆದರೂ ಪರವಾಗಿಲ್ಲ. ಪೋಷಕರಾಗಿ ನಮಗೆ ಈ ಬಗ್ಗೆ ತಿಳಿದಿದೆʼʼಎಂದು ನನಗೆ ಸಪೋರ್ಟ್‌ ಮಾಡಿದರು. ʻಈ ದೃಶ್ಯ ಆದ ಮೇಲೆ ಕೂಡ ನಾನು ಅವರಿಗೆ ಹೇಳಿದೆ. ನಾನು ಯಾವುದೇ ತಪ್ಪು ಮಾಡುತ್ತಿಲ್ಲ ಎಂದು. ನಾನು ನಿರ್ವಹಿಸುವ ಪಾತ್ರಕ್ಕೆ ನಾನು 100ರಷ್ಟು ಪ್ರಾಮಾಣಿಕನಾಗಿರುತ್ತೇನೆʼʼಎಂದಿದ್ದರು.

ಚಿತ್ರದಲ್ಲಿ ತೃಪ್ತಿ ಡಿಮ್ರಿ ಅವರು ʻಜೋಯಾʼ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರದ ತೃಪ್ತಿ ಡಿಮ್ರಿ ಅಭಿನಯವನ್ನು ವಿಮರ್ಶಕರು ಮತ್ತು ಪ್ರೇಕ್ಷಕರು ಶ್ಲಾಘಿಸಿದ್ದಾರೆ. ಇತ್ತೀಚಿನ ಮಾಧ್ಯಮದ ಸಂದರ್ಶನವೊಂದರಲ್ಲಿ “ಜೋಯಾʼ ತಮ್ಮ ಬೋಲ್ಡ್‌ ಸೀನ್‌ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಮಾತ್ರವಲ್ಲ ಬೋಲ್ಡ್‌ ಸೀನ್‌ ದೃಶ್ಯಗಳ ಚಿತ್ರೀಕರಣದ ಸಮಯದಲ್ಲಿ ರಣಬೀರ್‌ ಕಪೂರ್‌ ಅವರು ಹೇಗೆ ತಮಗೆ ಸಪೋರ್ಟಿವ್‌ ಆಗಿದ್ದರು ಎಂಬದನ್ನು ಬಹಿರಂಗಪಡಿಸಿದ್ದರು.

Exit mobile version