Site icon Vistara News

Trivikrama Movie | ಪ್ರೀ ರಿಲೀಸ್ ಇವೆಂಟ್‌ ಲಾಂಚ್‌ಗೆ ಬರಲಿದೆ ಸ್ಯಾಂಡಲ್‌ವುಡ್‌ ದಂಡು

Trivikrama Movie

ಬೆಂಗಳೂರು : ಕ್ರೇಜಿ ಪುತ್ರನ ಚೊಚ್ಚಲ ಸಿನಿಮಾಗೆ ಗ್ರ್ಯಾಂಡ್‌ ವೇದಿಕೆ ಸಿದ್ಧವಾಗಿದೆ. ವಿಕ್ರಮ್ ಅಲಿಯಾಸ್ ತ್ರಿವಿಕ್ರಮ ಸಿನಿಮಾ (Trivikrama Movie) ಪ್ರೀ ರಿಲೀಸ್ ಇವೆಂಟ್‌ ಲಾಂಚ್‌ಗೆ ಸ್ಯಾಂಡಲ್‌ವುಡ್‌ ದಂಡೇ ಬರಲಿದೆ.

ಸ್ಯಾಂಡಲ್‌ವುಡ್‌ ಕ್ರೇಜಿಸ್ಟಾರ್ ರವಿಚಂದ್ರನ್‌ ಅವರ ದ್ವಿತೀಯ ಪುತ್ರ ವಿಕ್ರಮ್‌ ತ್ರಿವಿಕ್ರಮ ಚಿತ್ರದ ಮೂಲಕ ಕಮಾಲ್‌ ಮಾಡಲು ಸಜ್ಜಾಗಿದ್ದಾರೆ. ವಿಕ್ರಮ್ ನಟನೆಯ ಚೊಚ್ಚಲ ಸಿನಿಮಾ ‘ತ್ರಿವಿಕ್ರಮ’ (Trivikrama Movie) ಜೂನ್ 24 ರಂದು ಬಿಡುಗಡೆಯಾಗಲಿದೆ. ಹೀಗಾಗಿ ಸಿನಿಮಾ ಬಿಡುಗಡೆಗೂ ಮುನ್ನ ಬೃಹತ್‌ ಸಮಾರಂಭ ಏರ್ಪಡಿಸಿದೆ ಚಿತ್ರತಂಡ.

ಇದನ್ನೂ ಓದಿ | Trivikrama: ವಿಕ್ರಮ್ ರವಿಚಂದ್ರನ್ ನಟನೆಯ ‘ತ್ರಿವಿಕ್ರಮ’ ಸಿನಿಮಾ ಡೇಟ್‌ ಅನೌನ್ಸ್!

ಜೂನ್ 19ರಂದು ಜರುಗುವ ಈ ಕಾರ್ಯಕ್ರಮಕ್ಕೆ ಚಂದನವನದ ತಾರೆಯರ ಹಿಂಡು ಸಾಕ್ಷಿಯಾಗಲಿದೆ. ಕ್ರೇಜಿಸ್ಟಾರ್ ಪುತ್ರನಿಗೆ ಶುಭ ಹಾರೈಸಲು ತಾರಾಲೋಕ ಸೃಷ್ಟಿಯಾಗಲಿದ್ದು, ರಂಗೀನ್ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್‌ ಸ್ಟಾರ್ಸ್‌ ಆಗಮಿಸಲಿದ್ದಾರೆ.

ಕ್ರೇಜಿಸ್ಟಾರ್‌ ರವಿಚಂದ್ರನ್, ಹ್ಯಾಟ್ರಿಕ್‌ ಹಿರೋ ಶಿವರಾಜ್‌ಕುಮಾರ್‌, ಡಾಲಿ ಧನಂಜಯ್‌, ನಿರ್ದೇಶಕ ಪ್ರೇಮ್‌, ರಕ್ಷಿತಾ ಪ್ರೇಮ್‌, ಶರಣ್‌, ನೀನಾಸಂ ಸತೀಶ್‌, ಲೂಸ್ ಮಾದ ಯೋಗಿ, ಅಜೇಯ್‌ ರಾವ್‌, ಡಾರ್ಲಿಂಗ್‌ ಕೃಷ್ಣ, ತಾರಾ, ಶೃತಿ, ವಸಿಷ್ಠ ಸಿಂಹ, ನಿಶ್ವಿಕಾ ನಾಯ್ಡು ಹಾಗೂ ಮನುರಂಜನ್‌ ಸೇರಿದಂತೆ ಇನ್ನೂ ಹಲವರು ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಭಾಗಿಯಾಗಲಿದ್ದಾರೆ.

ಜೂನ್ 19ರಂದು ನಾಯಂಡಹಳ್ಳಿ ಬಳಿಯಿರುವ ನಂದಿ ಲಿಂಕ್ಸ್‌ ಗ್ರೌಂಡ್‌ನಲ್ಲಿ ಕಾರ್ಯಕ್ರಮ ಜರುಗಲಿದೆ. ಸಾರ್ವಜನಿಕರಿಗೂ ಉಚಿತ ಅವಕಾಶ ಕಲ್ಪಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಈಗಾಗಲೇ ಹಾಡುಗಳ ಮೂಲಕ ಸದ್ದು ಮಾಡಿರುವ ‘ತ್ರಿವಿಕ್ರಮ’ ಟೀಂ, ಟ್ರೇಲರ್ ಮೂಲಕ ಸೌಂಡು ಮಾಡಲು ಸಜ್ಜಾಗಿದೆ. 19ರಂದು ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ‘ತ್ರಿವಿಕ್ರಮ’ ಟ್ರೇಲರ್ ಬಿಡುಗಡೆ ಮಾಡಲಿದೆ ಚಿತ್ರತಂಡ.

ಸಹನಾ ಮೂರ್ತಿ ತ್ರಿವಿಕ್ರಮನಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಸೋಮಣ್ಣ ಟಾಕೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ರಾಮ್ಕೋ ಸೋಮಣ್ಣ ಬಂಡವಾಳ ಹೂಡಿದ್ದು. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆಯಾಗಿರುವ ‘ಪ್ಲೀಸ್ ಮಮ್ಮಿ’, ‘ಹನಿ ಬನಿ ಫೀಲ್ ಮೈ ಲವ್’ ಹಾಗೂ ‘ಶಕುಂತಲಾ ಶೇಕ್ ಯುವರ್ ಬಾಡಿ ಪ್ಲೀಸ್’ ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಹವಾ ಕ್ರಿಯೇಟ್ ಮಾಡಿವೆ.

ತುಳಸಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ರೋಹಿತ್‌ ರಾಯ್‌, ಜಯಪ್ರಕಾಶ್‌, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನವಿದೆ. ಈ ಸಿನಿಮಾ ಜೂನ್ 24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಇದನ್ನೂ ಓTrivikrama: ತ್ರಿವಿಕ್ರಮ ಸಾಂಗ್‌ಗೆ ಹ್ಯಾಟ್ರಿಕ್‌ ಹೀರೊ ಭರ್ಜರಿ ಸ್ಟೆಪ್‌ದಿ |

Exit mobile version