ಬೆಂಗಳೂರು : ಕಾಂತಾರ ಸಿನಿಮಾ (Kantara Movie) 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ತಮಿಳುನಾಡಿನಲ್ಲಿ 6ನೇ ವಾರವೂ ಸಿನಿಮಾ 150 ಸ್ಕ್ರೀನ್ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಹಿಂದಿ ಬೆಲ್ಟ್ನಲ್ಲಿ 50 ಕೋಟಿ ಕ್ಲಬ್ ಸೇರಿದೆ. ಹೀಗೆ ಕನ್ನಡ ಸೇರಿದಂತೆ ಹಲವ ಭಾಷೆಗಳಲ್ಲಿ ಕಾಂತಾರ ಬಿಡುಗಡೆಗೊಂಡಿದೆ. ತುಳುನಾಡಿನ ಆರಾಧ್ಯ ದೈವದ ಕುರಿತಾದ ಸಿನಿಮಾ ಇದಾಗಿದ್ದರಿಂದ, ಇದೀಗ ತುಳುವಿಗೂ ಡಬ್ ಮಾಡುತ್ತಿದೆ ಚಿತ್ರತಂಡ.
ಗುರುವಾರ ನವೆಂಬರ್ 3ರಂದು ರಿಷಬ್ ಶೆಟ್ಟಿ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಈ ಕುರಿತು ಮಾತನಾಡಿದ ರಿಷಬ್ ʻʻಕಾಂತಾರ ಸಿನಿಮಾವನ್ನು ತುಳು ಭಾಷೆಗೆ ಮಾಡಬೇಕು ಎಂಬುದು ನಿರ್ಮಾಪಕರ ಆಸೆ. ಹಾಗಾಗಿ ಈ ಚಿತ್ರವನ್ನು ತುಳುವಿಗೆ ಡಬ್ ಮಾಡಲಾಗುತ್ತದೆ. ಈಗಾಗಲೇ ಸಿನಿಮಾ ಎಲ್ಲ ಕಡೆ ಪ್ರದರ್ಶನ ಕಂಡಿದೆ. ಗೆಲುವು ಸಾಧಿಸಿದೆ. ಇದೆಲ್ಲ ಸಾಧ್ಯವಾಗಿದ್ದು ದೈವದ ಕಾರಣದಿಂದ. ಹಾಗಾಗಿ ಈ ಸಿನಿಮಾವನ್ನು ತುಳುವನಲ್ಲಿ ಡಬ್ ಮಾಡಲು ಯೋಚನೆ ಮಾಡಿದ್ದೇವೆʼʼ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | Kantara movie | ಪಂಜುರ್ಲಿ ದೈವದ ರೀಲ್ಸ್ ವಿವಾದ: ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಹಾಕಿದ ಯುವತಿ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿನ ಗರುಡ ಮಾಲ್ನಲ್ಲಿ ನವೆಂಬರ್ 2ರಂದು ಸಿನಿಮಾ ವೀಕ್ಷಿಸಿದ್ದರು. ವಿಶ್ವದೆಲ್ಲೆಡೆ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದನ್ನೂ ಓದಿ | Kantara Movie | ಎಬಿಡಿ ವಿಲಿಯರ್ಸ್ ಭೇಟಿ ಮಾಡಿದ ಕಾಂತಾರದ ಹೀರೊ ರಿಷಬ್ ಶೆಟ್ಟಿ