Site icon Vistara News

Tunisha Sharma Death Case | ತುನಿಶಾ ಆತ್ಮಹತ್ಯೆಗೆ ಶರಣಾಗಿದ್ದ ಸ್ಥಳದಲ್ಲಿ ಪೂಜೆ ಮಾಡಿ, ಚಿತ್ರೀಕರಣ ಆರಂಭಿಸಿದ ಧಾರಾವಾಹಿ ತಂಡ

ಮುಂಬೈ: ಹಿಂದಿ ಕಿರುತೆರೆ ನಟಿ ತುನಿಶಾ ಶರ್ಮಾ ತಾನು ನಟಿಸುತ್ತಿದ್ದ ʼಆಲಿ ಬಾಬಾʼ ಧಾರಾವಾಹಿಯ ಸೆಟ್‌ನಲ್ಲೇ ಆತ್ಮಹತ್ಯೆಗೆ ಶರಣಾಗಿ (Tunisha Sharma Death Case) ತಿಂಗಳಾಗುತ್ತಾ ಬಂದಿತು. ಘಟನೆ ನಡೆದಾಗಿನಿಂದ ಸೆಟ್‌ನಲ್ಲಿ ಚಿತ್ರೀಕರಣವನ್ನು ಸ್ಥಗಿತಗೊಳಿಸಿದ್ದ ಚಿತ್ರತಂಡ ಇದೀಗ ಮತ್ತೆ ಸೆಟ್‌ಗೆ ವಾಪಸಾಗಿದೆ. ಈ ವಿಚಾರವನ್ನು ಧಾರಾವಾಹಿಯ ಇನ್ನೋರ್ವ ನಟಿಯಾಗಿರುವ ಸಯಂತಾನಿ ಘೋಷ್‌ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Tunisha Sharma | ಅಮ್ಮ-ಚಿಕ್ಕಪ್ಪನ ಕಾರಣಕ್ಕೆ ಮನ ನೊಂದಿದ್ದಳು ತುನಿಶಾ; ಶಿಜಾನ್ ಖಾನ್​​ ಸೋದರಿಯರು ಹೇಳಿದ ವಿಚಾರಗಳಿವು

“ಪೂರ್ತಿ ಸೆಟ್‌ಗೆ ಹೊಸದಾಗಿ ಬಣ್ಣ ಹೊಡೆಸಲಾಗಿದೆ. ಹೆಚ್ಚು ಲೈಟಿಂಗ್‌ಗಳನ್ನು ಹಾಕಲಾಗಿದೆ. ಹೊಸ ಹೊಸ ಸೆಟ್‌ ಹಾಕಿಸಿದ್ದಾರೆ. ತುನಿಶಾ ಆತ್ಮಹತ್ಯೆಗೆ ಶರಣಾದ ಸ್ಥಳದಲ್ಲಿ ಧಾರಾವಾಹಿಯ ತಂಡ ಪೂಜೆಯನ್ನೂ ಮಾಡಿಸಿದೆ. ಈಗ ನಾವು ಅಲ್ಲಿ ಚಿತ್ರೀಕರಣವನ್ನು ಮುಂದುವರಿಸುತ್ತಿದ್ದೇವೆ” ಎಂದು ಸಯಂತಾನಿ ಅವರು ಮಾಧ್ಯಮವೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ.


ತುನಿಶಾ ಸಾವಿನ ನಂತರ ಚಿತ್ರತಂಡವು ಚಿತ್ರೀಕರಣವನ್ನು ಬೇರೆಡೆಗೆ ಸ್ಥಳಾಂತರ ಮಾಡಿತ್ತು. ಆದರೆ ಧಾರಾವಾಹಿ ದೃಷ್ಟಿಯಲ್ಲಿ ಅದು ಚಿತ್ರೀಕರಣ ಸ್ಥಳ ಬದಲಾವಣೆ ಸಾಕಷ್ಟು ತೊಂದರೆಯನ್ನುಂಟುಮಾಡಿತ್ತು. ಈ ಸ್ಥಳದಲ್ಲಿ ಅದೆಷ್ಟೇ ಸಮಸ್ಯೆ ಇದ್ದರೂ ಇಲ್ಲಿಗೆ ಮರಳಲೇಬೇಕಾದ ಅವಶ್ಯಕತೆ ಇತ್ತು ಎಂದು ನಟಿ ಮಾಹಿತಿ ಕೊಟ್ಟಿದ್ದಾರೆ.

ಇದನ್ನೂ ಓದಿ: Tunisha Sharma Death | ಜೈಲಿನಲ್ಲಿ ತುನಿಶಾ ಹಂತಕ ಶೀಜಾನ್ ಖಾನ್ ಉದ್ದ ಕೂದಲಿಗೆ ಕತ್ತರಿ?

Exit mobile version