Site icon Vistara News

Tunisha Sharma Death | ಶೀಜಾನ್ ಖಾನ್‌ಗೆ ಕೂದಲು ಕತ್ತರಿಸದಿರುವುದಕ್ಕೆ ಅವಕಾಶ ಕೊಟ್ಟ ನ್ಯಾಯಾಲಯ

ಮುಂಬೈ: ಮಾಡೆಲ್ ಮತ್ತು ಹಿಂದಿ ಕಿರುತೆರೆ ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ (Tunisha Sharma Death)ಸಂಬಂಧಪಟ್ಟಂತೆ ನ್ಯಾಯಾಂಗ ಬಂಧನದಲ್ಲಿರುವ ಸಹನಟ ಹಾಗೂ ಪ್ರಿಯಕರ ಶೀಜಾನ್ ಖಾನ್‌ಗೆ ನ್ಯಾಯಾಲಯ ಸಿಹಿ ಸುದ್ದಿ ಕೊಟ್ಟಿದೆ. ವೃತ್ತಿಯ ಕಾರಣಕ್ಕಾಗಿ ಉದ್ದ ಕೂದಲು ಬಿಟ್ಟಿರುವ ಅವರಿಗೆ ಒಂದು ತಿಂಗಳವರೆಗೆ ಕೂದಲು ಕತ್ತರಿಸದಿರುವುದಕ್ಕೆ ಅವಕಾಶವನ್ನು ಮಾಡಿಕೊಟ್ಟಿದೆ.

ಇದನ್ನೂ ಓದಿ: Tunisha Sharma | ಅಮ್ಮ-ಚಿಕ್ಕಪ್ಪನ ಕಾರಣಕ್ಕೆ ಮನ ನೊಂದಿದ್ದಳು ತುನಿಶಾ; ಶಿಜಾನ್ ಖಾನ್​​ ಸೋದರಿಯರು ಹೇಳಿದ ವಿಚಾರಗಳಿವು

ಶೀಜಾನ್ ಅವರು ‘ಆಲಿ ಬಾಬಾ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ಉದ್ದ ಕೂದಲಿರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಜೈಲಿನಲ್ಲಿ ಕೂದಲು ಕತ್ತರಿಸದೇ ಇರುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅವರ ಪರ ವಕೀಲರು ವಸಾಯಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ, ಒಂದು ತಿಂಗಳ ಕಾಲ ಶೀಜಾನ್ ಅವರಿಗೆ ಕೂದಲು ಕತ್ತರಿಸಲು ಒತ್ತಾಯಿಸಬೇಡಿ ಎಂದು ಥಾಣೆ ಕೇಂದ್ರೀಯ ಕಾರಾಗೃಹದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: Tunisha Sharma Death | ಜೈಲಿನಲ್ಲಿ ತುನಿಶಾ ಹಂತಕ ಶೀಜಾನ್ ಖಾನ್ ಉದ್ದ ಕೂದಲಿಗೆ ಕತ್ತರಿ?

ತುನಿಶಾ ಅವರು ಡಿ.24ರಂದು ಸೀರಿಯಲ್ ಸೆಟ್‌ನ ಬಾತ್‌ರೂಮಿನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಜಾನ್ ಅವರನ್ನು ಡಿ.25ರಂದು ಬಂಧಿಸಲಾಗಿತ್ತು. ನ್ಯಾಯಾಲಯವು ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸಿದೆ. ಈ ಸಮಯದಲ್ಲಿ ಅವರಿಗೆ ಮನೆಯ ಊಟ ನೀಡುವುದಕ್ಕೆ, ಅಸ್ತಮಾ ಇರುವ ಕಾರಣ ಇನ್ಹೆಲಾರ್ ಬಳಸುವುದಕ್ಕೆ, ಕೂದಲು ಕತ್ತರಿಸದಿರುವುದಕ್ಕೆ ಹಾಗೂ ಮನೆಯವರು ಅವರನ್ನು ಭೇಟಿ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಶೀಜಾನ್ ಪರ ವಕೀಲರು ಕಳೆದ ವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

Exit mobile version