Site icon Vistara News

Tunisha Sharma; ತುನಿಶಾ ಶರ್ಮಾ ಇದ್ದ ಸ್ಟುಡಿಯೊ ಬೆಂಕಿಗೆ ಆಹುತಿ: ಹೆಚ್ಚಾಯ್ತು ಅನುಮಾನ!

Tunisha Sharma was filming before death destroyed by massive fire

ಬೆಂಗಳೂರು: ಕಿರುತೆರೆ ನಟಿ ತುನಿಶಾ ಶರ್ಮಾ (Tunisha Sharma) ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಭಜನ್‌ಲಾಲ್ ಸ್ಟುಡಿಯೊಸ್ ಮೇ 13ರಂದು ಶನಿವಾರ ನಸುಕಿನಲ್ಲಿ ಬೆಂಕಿಗೆ ಆಹುತಿಯಾಗಿದೆ. ತುನಿಶಾ ಶರ್ಮಾ ಕಳೆದ ವರ್ಷ ಡಿಸೆಂಬರ್ 24ರಂದು ಆತ್ಮಹತ್ಯೆ ಮಾಡಿಕೊಂಡಾಗ ಸಹ-ನಟ ಮತ್ತು ಮಾಜಿ ಗೆಳೆಯ ಶೀಜಾನ್ ಖಾನ್ ಅವರೊಂದಿಗೆ ಇದೇ ಸ್ಟುಡಿಯೊಯೊದಲ್ಲಿ ʻಅಲಿ ಬಾಬಾ: ದಾಸ್ತಾನ್-ಇ-ಕಾಬೂಲ್ʼ ಚಿತ್ರದ ಚಿತ್ರೀಕರಣದಲ್ಲಿದ್ದರು. ಇದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿದೆ. ಅಷ್ಟರಲ್ಲೇ ಈ ಸ್ಟುಡಿಯೊಗೆ ಬೆಂಕಿ ಬಿದ್ದಿರುವುದು ಅನುಮಾನ ಹೆಚ್ಚಲು ಕಾರಣ ಆಗಿದೆ.

ಅಗ್ನಿಶಾಮಕ ದಳದ ಅಧಿಕಾರಿಗಳ ಪ್ರಕಾರ, ʻʻಮುಂಬೈನ ಹೊರವಲಯದಲ್ಲಿರುವ ಕಮಾನ್‌ನಲ್ಲಿರುವ ಭಜನ್‌ಲಾಲ್ ಸ್ಟುಡಿಯೊದಲ್ಲಿ ಮೇ 12ರ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಪಿಟಿಐ ಪ್ರಕಾರ, ಮೇ 13ರ ಮುಂಜಾನೆ 4 ಗಂಟೆಯ ಹೊತ್ತಿಗೆ ಬೆಂಕಿಯನ್ನು ನಂದಿಸಲಾಗಿದೆ ಎಂದು ವಸಾಯಿ-ವಿರಾರ್ ಸಿಟಿ ಮುನ್ಸಿಪಲ್ ಕಾರ್ಪೊರೇಶನ್‌ನ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Tunisha Sharma Death Case | ತುನಿಶಾ ಆತ್ಮಹತ್ಯೆಗೆ ಶರಣಾಗಿದ್ದ ಸ್ಥಳದಲ್ಲಿ ಪೂಜೆ ಮಾಡಿ, ಚಿತ್ರೀಕರಣ ಆರಂಭಿಸಿದ ಧಾರಾವಾಹಿ ತಂಡ

ಹಿಂದಿಯ ‘ಅಲಿಬಾಬಾ’ ಧಾರಾವಾಹಿಯಲ್ಲಿ ಶೀಜಾನ್​ ಖಾನ್​ ಮತ್ತು ತುನಿಶಾ ಶರ್ಮಾ ಅವರು ಜತೆಯಾಗಿ ನಟಿಸುತ್ತಿದ್ದರು. ಇಬ್ಬರ ನಡುವೆ ಸಾಕಷ್ಟು ಆಪ್ತತೆ ಬೆಳೆದಿತ್ತು. ಪರಸ್ಪರ ಪ್ರೀತಿಸುತ್ತಿದ್ದ ಅವರು ಕೆಲವು ವಿಡಿಯೊಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 2022ರ ಡಿಸೆಂಬರ್​ 24ರಂದು ನೇಣು ಬಿಗಿದ ಸ್ಥಿತಿಯಲ್ಲಿ ತುನಿಶಾ ಶರ್ಮಾ ಅವರ ಮೃತದೇಹ ಪತ್ತೆ ಆಗಿತ್ತು. ತುನಿಶಾ ಶರ್ಮಾ ಕುಟುಂಬದವರ ಆರೋಪದ ಮೇರೆಗೆ ಶೀಜಾನ್ ಖಾನ್​ ಅವರನ್ನು ಬಂಧಿಸಲಾಗಿತ್ತು. 70 ದಿನ ಜೈಲಿನಲ್ಲಿದ್ದ ಅವರಿಗೆ ಈ ವರ್ಷ ಮಾರ್ಚ್ 4ರಂದು​ ಜಾಮೀನು ಸಿಕ್ಕಿತು.

ಡಿಸೆಂಬರ್‌ 24ರಂದು ತುನಿಶಾ ಶರ್ಮಾ ವಸಾಯಿಯಲ್ಲಿ ಶೂಟಿಂಗ್‌ ಸೆಟ್‌ನ ಕೋಣೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಡಿ.24ರಂದು ಮಧ್ಯಾಹ್ನ ಊಟದ ಬಳಿಕ ತುನಿಶಾ ಮತ್ತು ಶಿಜಾನ್​ ಮಧ್ಯೆ ಮೇಕಪ್​ ಕೋಣೆಯಲ್ಲಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆದಿದೆ. ಅದಾದ ಬಳಿಕ ಇಬ್ಬರೂ ಸ್ವಲ್ಪ ಕ್ರೋಧಗೊಂಡಂತೆ ಕಂಡಿದ್ದರು ಎಂದು ಸೆಟ್​​ನಲ್ಲಿ ಇದ್ದವರೆಲ್ಲ ಹೇಳಿದ್ದಾಗಿ ಪೊಲೀಸರು ಕೋರ್ಟ್​​ಗೆ ವರದಿ ಸಲ್ಲಿಸಿದ್ದರು.

Exit mobile version