ಮುಂಬಯಿ: ಬಾಲಿವುಡ್ನಲ್ಲಿ ಇನ್ನೂ ಬೆಳೆಯುತ್ತಿದ್ದ, ಕನಸು ಕಂಗಳ ನಟಿ, 20 ವರ್ಷದ ತನುಶಾ ಶರ್ಮಾ ಆತ್ಮಹತ್ಯೆ ಕೇಸ್ನಲ್ಲಿ ಶಿಜಾನ್ ಮೊಹಮ್ಮದ್ ಖಾನ್ ಎಂಬಾತನ ಬಂಧನವಾಗಿದ್ದು, ಎಫ್ಐಆರ್ ದಾಖಲಾಗಿದೆ. ‘ಅಲಿ ಬಾಬಾ ದಾಸ್ತಾನ್ ಇ ಕಾಬೂಲ್’ ಟಿವಿ ಸೀರಿಸ್ನ ಮುಖ್ಯಪಾತ್ರಧಾರಿ ತುನಿಶಾ ಶರ್ಮಾ ಶುಕ್ರವಾರ ಮಹಾರಾಷ್ಟ್ರದ ವಸಾಯಿಯಲ್ಲಿ ಇರುವ ಧಾರಾವಾಹಿ ಸೆಟ್ನಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲಿ ಬಾಬಾ ದಾಸ್ತಾನ್ ಇ ಕಾಬೂಲ್ ಸೀರೀಸ್ನಲ್ಲಿ ತುನಿಶಾ ಸಹನಟನಾಗಿರುವ ಶಿಜಾನ್ ಮೊಹಮ್ಮದ್ ಖಾನ್ ಮೇಕಪ್ ರೂಮಿನಲ್ಲಿರುವ ಶೌಚಗೃಹದಲ್ಲಿ ಆಕೆ ನೇಣುಬಿಗಿದುಕೊಂಡಿದ್ದಾಳೆ. ಜೆಜೆ ಆಸ್ಪತ್ರೆಯಲ್ಲಿ ಆಕೆಯ ಮೃತದೇಹದ ಪೋಸ್ಟ್ಮಾರ್ಟಮ್ ಮುಗಿದಿದ್ದು, ವರದಿ ಶೀಘ್ರವೇ ಬರಲಿದೆ.
ತುನಿಶಾ ಸಾಯುತ್ತಿದ್ದಂತೆ ಆಕೆಯ ತಾಯಿ ಶಿಜಾನ್ ವಿರುದ್ಧವೇ ಆರೋಪ ಮಾಡಿದ್ದರು. ನನ್ನ ಮಗಳು ಸಾಯಲು ಆತನೇ ಕಾರಣ ಎಂದು ವಾಲಿವ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಪೊಲೀಸರು ಶಿಜಾನ್ನನ್ನು ಅರೆಸ್ಟ್ ಮಾಡಿ ಎಫ್ಐಆರ್ ದಾಖಲು ಮಾಡಿದ್ದಾರೆ.
ತುನಿಶಾ ಶರ್ಮಾ ಮತ್ತು ಶಿಜಾನ್ ಮಧ್ಯೆ ಸಂಬಂಧ ಇತ್ತು ಎಂದೇ ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ. ‘ತುನಿಶಾ ಮತ್ತು ಶಿಜಾನ್ ನಡುವೆ ಪ್ರೀತಿಯಿತ್ತು. 15 ದಿನಗಳ ಹಿಂದಷ್ಟೇ ಶಿಜಾನ್ ಬ್ರೇಕಪ್ ಮಾಡಿಕೊಂಡಿದ್ದ. ಇದರಿಂದಾಗಿ ತುನಿಶಾ ತೀವ್ರವಾಗಿ ನೊಂದಿದ್ದಳು. ಖಿನ್ನತೆಗೆ ಒಳಗಾಗಿದ್ದಳು. ಹೀಗಾಗಿಯೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಪೊಲೀಸರು ತಿಳಿಸಿದ್ದಾರೆ. ಶಿಜಾನ್ ವಿಚಾರಣೆಯನ್ನು ಪ್ರಾರಂಭ ಮಾಡಿದ್ದಾರೆ.
ಇದನ್ನೂ ಓದಿ: ಗರ್ಭಿಣಿಯಾಗಿದ್ದರಾ ನಟಿ ತುನಿಶಾ ಶರ್ಮಾ?-ಆತ್ಮಹತ್ಯೆ ಕೇಸ್ನಲ್ಲಿ ಸಹನಟ ಶಿಜಾನ್ ಖಾನ್ ಅರೆಸ್ಟ್