Actor Taylor Lautner | ವೈವಾಹಿಕ ಜೀವನಕ್ಕೆ ಕಾಲಿಟ್ಟ ʻಟ್ವಿಲೈಟ್ ಸಾಗಾʼ ಖ್ಯಾತಿಯ ನಟ ಟೇಲರ್ ಲೌಟ್ನರ್! Yashaswi Devadiga 2 years ago ʻಟ್ವಿಲೈಟ್ ಸಾಗಾʼ (The Twilight Saga) ಫಿಲ್ಮ್ ಸಿರೀಸ್ ಖ್ಯಾತಿಯ ನಟ ಟೇಲರ್ ಲೌಟ್ನರ್ ತಮ್ಮ ಬಹುಕಾಲದ ಗೆಳತಿ ಟೇಲರ್ ಡೋಮ್ ಅವರನ್ನು ವಿವಾಹವಾಗಿದ್ದಾರೆ.ಅಮೆರಿಕದ ಕ್ಯಾಲಿಫೋರ್ನಿಯಾದ ಪಾಸೊ ರೋಬಲ್ಸ್ನಲ್ಲಿ ಕಳೆದ ವರ್ಷ ನವೆಂಬರ್ನಲ್ಲಿ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಇದೀಗ ಕುಟುಂಬದವರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಕ್ಯಾಲಿಫೋರ್ನಿಯಾದ ಎಪೋಚ್ ಎಸ್ಟೇಟ್ ವೈನ್ಸ್ನಲ್ಲಿ ಮದುವೆಯಾಗಿದ್ದಾರೆ. 2018ರಲ್ಲಿಯೇ ಜೋಡಿ ಡೇಟಿಂಗ್ ಶುರು ಮಾಡಿತ್ತು. ಟೇಲರ್ ಡೋಮ್ ಹಾಲಿವುಡ್ ನಟಿ ಅಲ್ಲ ಬದಲಾಗಿ ಆರೋಗ್ಯ ಕಾರ್ಯಕರ್ತೆ ಎಂಬುದು ವಿಶೇಷ. ಆರೋಗ್ಯ ಸಂಬಂಧಿತ ಪೋಸ್ಟ್ಗಳನ್ನು ಟೇಲರ್ ಡೋಮ್ ಆಗಾಗ ಇನ್ಸ್ಟಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.ವರದಿ ಪ್ರಕಾರ ದಿ ಕೆಲ್ಲಿ ಕ್ಲಾರ್ಕ್ಸನ್ ಶೋನಲ್ಲಿ (the kelly clarkson) ಟೇಲರ್ ಡೋಮ್ ಅವರು ಟ್ವಿಲೈಟ್ ಸಾಗಾ ಸಿನಿಮಾ ಮೂಲಕ ನಟ ಟೇಲರ್ ಲೌಟ್ನರ್ ಬಿಗ್ ಫ್ಯಾನ್ ಆಗಿದ್ದೆ ಎಂದು ಹೇಳಿಕೊಂಡಿದ್ದರು. ಇದನ್ನೂ ಓದಿ | ವಿವಾಹ ಪೂರ್ವ ಲೈಂಗಿಕತೆ ಅವರವರ ವೈಯಕ್ತಿಕ ಆಯ್ಕೆ ಎಂದ ನಟಿ ದಿಯಾ ಮಿರ್ಜಾ