Site icon Vistara News

Lucky Man Movie | ಲಕ್ಕಿ ಮ್ಯಾನ್‌ ಚಿತ್ರಕ್ಕೆ ಯು ಸರ್ಟಿಫಿಕೇಟ್‌: ಅಡ್ವಾನ್ಸ್ ಬುಕ್ಕಿಂಗ್‌ ಓಪನ್‌!

Lucky Man Movie

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಲಕ್‌ನಂತೆಯೇ (Lucky Man Movie) ಇದ್ದ ಪುನೀತ್ ರಾಜಕುಮಾರ್‌ ನಟನೆಯ ಲಕ್ಕಿ ಮ್ಯಾನ್‌ ಚಿತ್ರ ಸೆಪ್ಟೆಂಬರ್‌ 9 ಕ್ಕೆ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ. ನಟ ಪುನೀತ್‌ ರಾಜ್‌ಕುಮಾರ್‌ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾಗೆ ʻಯುʼ ಸರ್ಟಿಫಿಕೇಟ್‌ ಬಂದಿದೆ. ಇದೇ ಶುಕ್ರವಾರ (ಸೆ.9) ಪುನೀತ್ ರಾಜಕುಮಾರ್‌ ಅಭಿಮಾನಿಗಳ ಪಾಲಿಗೆ ದೇವಮಾನವನಾಗಿ ಲಕ್ಕಿ ಮ್ಯಾನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್‌ ಕೂಡ ಶುರುವಾಗಿದೆ.

ಇತ್ತೀಚೆಗಷ್ಟೇ ಟ್ರೈಲರ್‌ ಹಾಗೂ ಆಡಿಯೊ ಬಿಡುಗಡೆ ಆಗಿತ್ತು. ರಿಲೀಸ್‌ ಆಗಿರುವ ಟೀಸರ್‌ನಲ್ಲಿ ಪುನೀತ್‌ ಅವರು ಹೇಳಿರುವ ಡೈಲಾಗ್‌ ವೈರಲ್‌ ಕೂಡ ಆಗಿತ್ತು. ಪುನೀತ್ ರಾಜಕುಮಾರ್‌ ಧ್ವನಿಯಲ್ಲಿ ಹಾಡಿರುವ ಹಾಡು ಹಾಗೂ ಡ್ಯಾನ್ಸ್‌ ಕಿಂಗ್‌ ಪ್ರಭುದೇವ ಜತೆ ಅಪ್ಪು ಡ್ಯಾನ್ಸ್‌ ಚಮತ್ಕಾರ ನೋಡಲು ಎಲ್ಲ ಸೆಟ್‌ ಆಗಿದೆ ಎಂದು ಈ ಹಿಂದೆ ಚಿತ್ರತಂಡ ಹೇಳಿಕೊಂಡಿತ್ತು.

ಇದನ್ನೂ ಓದಿ | Lucky Man Movie | ಬಾಕ್ಸ್ ಆಫೀಸ್​ನಲ್ಲಿ ಹೊಸ ದಾಖಲೆ ಬರೆದ ಪವರ್ ಸ್ಟಾರ್ ಲಕ್ಕಿಮ್ಯಾನ್!

ನಾಗೇಂದ್ರ ಪ್ರಸಾದ್‌ ನಿರ್ದೇಶನ ಮಾಡಿದ್ದು, ಪಿ ಆರ್ ಮೀನಾಕ್ಷಿ ಸುಂದರಂ ಹಾಗೂ ಆರ್‌. ಸುಂದರ್‌ ಕಾಮರಾಜ್ ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ರೋಶನಿ ಪ್ರಕಾಶ್, ಪುನೀತ್ ರಾಜ್ ಕುಮಾರ್ ಮತ್ತು ಪ್ರಭುದೇವ ನಟಿಸಿರುವ ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚುತ್ತಿದೆ.

ಡಾರ್ಲಿಂಗ್‌ ಕೃಷ್ಣ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ದಿಲ್‌ ಪಸಂದ್‌, ಲವ್‌ ಬರ್ಡ್ಸ್‌, ಶುಗರ್‌ ಫ್ಯಾಕ್ಟರಿ, ಲಕ್ಕಿ ಮ್ಯಾನ್‌, ಮಿಸ್ಟರ್‌ ಬ್ಯಾಚುಲರ್‌ ಚಿತ್ರಗಳು ಕೈಯಲ್ಲಿದೆ. ತಮ್ಮ ಹುಟ್ಟುಹಬ್ಬದಂದು ನಿರ್ದೇಶಕ ಶಶಾಂಕ್‌ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಕೃಷ್ಣ ನಾಯಕನಾಗಿರುವ ಈ ಚಿತ್ರವನ್ನು ಶಶಾಂಕ್‌ ನಿರ್ದೇಶಿಸುವ ಜತೆಗೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ.

ಇದನ್ನೂ ಓದಿ | Lucky Man Movie | ನಟ ಪುನೀತ್ ರಾಜಕುಮಾರ್ ಅಭಿನಯದ ಲಕ್ಕಿ ಮ್ಯಾನ್ ಸಿನಿಮಾದ ಟೀಸರ್ ಔಟ್‌

Exit mobile version