Site icon Vistara News

UI Film | ಶೂಟಿಂಗ್‌ಗೆ ಕಿಕ್ ಸ್ಟಾರ್ಟ್: ಅಶ್ವಮೇಧ ಯಾಗಕ್ಕೆ ಸಿದ್ಧರಾದ ಉಪ್ಪಿ

UI Film

ಬೆಂಗಳೂರು : ಕೊಂಬಿರುವ ಕುದುರೆಯನ್ನು ಏರಿ ಅಶ್ವಮೇಧ ಯಾಗ ಹೊರಡಲು ಬುದ್ಧಿವಂತ ಸಿದ್ಧರಾಗಿದ್ದಾರೆ. ಹೌದು ಭಾರತೀಯ ಚಿತ್ರರಂಗದಲ್ಲೇ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ನಿರ್ದೇಶಕ ರಿಯಲ್‌ ಸ್ಟಾರ್‌ ಉಪೇಂದ್ರ ಯುಐ (UI Film) ಸಿನಿಮಾದ ಶೂಟಿಂಗ್ ಶುರು ಮಾಡಿದ್ದಾರೆ.

ಯುಐ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದ್ದು, ಉಪ್ಪಿ ಆ್ಯಕ್ಷನ್ ಕಟ್ ಹೇಳುತ್ತಿದ್ದಂತೆ ಇಡೀ ಯುಐ ಸೆಟ್‌ ಖುಷಿ ಪಟ್ಟಿದೆ. ವರ್ಷಗಳ ನಂತರ ನಿರ್ದೇಶನದತ್ತ ಮುಖ ಮಾಡಿರುವ ಉಪ್ಪಿ, ಜತೆಗೆ ಈ ಚಿತ್ರದಲ್ಲಿ ಯುವ ತಂತ್ರಜ್ಞರು‌ ಕೆಲಸ ಮಾಡುತ್ತಿದ್ದಾರೆ, ಉಪ್ಪಿ ಕ್ಯಾಪ್‌ ಹಾಕಿ, ಮೈಕ್‌ ಹಿಡಿದು ನಿರ್ದೇಶನಕ್ಕೆ ಇಳಿದರು ಅಂದರೆ ಹೊಸ ಇತಿಹಾಸ ಸೃಷ್ಠಿಸುವ ಸಿನಿಮಾ ಅಂತಲೇ ಇರಬೇಕು ಎಂದು ಅರ್ಥ.

ಇದನ್ನೂ ಓದಿ | UI : ಬುದ್ಧಿಯ ಬಿರುಗಾಳಿಯತ್ತ ರಿಯಲ್‌ ಸ್ಟಾರ್‌ ಉಪೇಂದ್ರ

ತರ್ಲೆ ನನ್ಮಗ, ಆಪರೇಷನ್ ಅಂತ, ಶ್..!, ಓಂ, ಉಪ್ಪಿ-2, ಸೂಪರ್ ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಉಪ್ಪಿ 2 ನಂತರ ಬುದ್ಧಿವಂತನ ನಿರ್ದೇಶನದಲ್ಲಿ ಯಾವ ಸಿನಿಮಾ ಕೂಡ ತೆರೆಗೆ ಬರಲಿಲ್ಲ.

ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಯುಐ ಚಿತ್ರಕ್ಕೆ ಅದ್ಧೂರಿಯಾಗಿ ಮುಹೂರ್ತ ನೆರವೇರಿತ್ತು. ಈ ಚಿತ್ರಕ್ಕೆ ಅದ್ಧೂರಿ ವೆಚ್ಚದಲ್ಲಿ ಟಗರು, ಸಲಗ ಖ್ಯಾತಿಯ ಕೆ.ಪಿ. ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆ ನಿರ್ಮಾಣ ಮಾಡುತ್ತಿದೆ.

ಗಡಿಯಾರದ ತರಹ ಇರುವ ಮೆದುಳಿನ ಪೋಸ್ಟರ್‌ ಈ ಹಿಂದೆ ರಿವೀಲ್‌ ಮಾಡಿದ್ದರು. ಬ್ರೇನ್ ಜತೆ ʼಬುದ್ಧಿವಂತನ ಬಿರುಗಾಳಿʼ ಎಂದು ಟೈಟಲ್ ಕೊಟ್ಟು ಪೋಸ್ಟರ್ ರಿಲೀಸ್ ಮಾಡಿ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗುವಂತೆ ಮಾಡಿದ್ದರು. ಈ ಬಾರಿ ಅವರು ಬರುತ್ತಿರುವುದು ಪ್ಯಾನ್‌ ಇಂಡಿಯಾ ಸಿನಿಮಾದೊಂದಿಗೆ. ಉಪೇಂದ್ರ ನಿರ್ದೇಶನದಲ್ಲಿ ಕೆಜಿಎಫ್‌, ಪುಷ್ಪ, ಆರ್‌ಆರ್‌ಆರ್‌ ನಂತರ ಮತ್ತೊಂದು ಮೆಗಾ ಸಿನಿಮಾ ದಕ್ಷಿಣದಿಂದ ಎದ್ದುಬರಲಿದೆ.

ಯಾವಾಗಲೂ ಹೊಸತನ ಮತ್ತು ಕ್ರಿಯೇಟಿವ್‌ ಕಂಟೆಂಟ್‌ ಮೂಲಕ ತೆರೆ ಮೇಲೆ ಬರುವ ಉಪ್ಪಿ ಅವರ ಆಟ ಈ ಬಾರಿ ಹೇಗಿರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ | Director ಉಪೇಂದ್ರ Returns: ಪಾನ್‌ ಇಂಡಿಯಾ ಸಿನಿಮಾಕ್ಕೆ ಜೂ.3ರಂದು ಮುಹೂರ್ತ

Exit mobile version