Site icon Vistara News

UI : ಬುದ್ಧಿಯ ಬಿರುಗಾಳಿಯತ್ತ ರಿಯಲ್‌ ಸ್ಟಾರ್‌ ಉಪೇಂದ್ರ

uI

ಬೆಂಗಳೂರು : ಬುದ್ಧಿವಂತನ ಬಿರುಗಾಳಿಗೆ ಮುಹೂರ್ತ ಫಿಕ್ಸ್‌ ಆಗಿದೆ. ಈಗಾಗಲೇ ಮೆದುಳಿಗೆ ಕೈ ಹಾಕಿದ್ದಾರೆ ಉಪ್ಪಿ. ಗಡಿಯಾರದ ತರಹ ಇರುವ ಮೆದುಳಿನ ಪೋಸ್ಟರ್‌ ರಿವೀಲ್‌ ಮಾಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶನ ಮಾಡುತ್ತಿರುವ ಸಿನಿಮಾದ ಬಗ್ಗೆ ದಿನದಿಂದ‌ ದಿನಕ್ಕೆ ಹೈಪ್ ಹೆಚ್ಚಾಗುತ್ತಿದೆ.

ಬ್ರೇನ್ ಜತೆ ʼಬುದ್ದಿವಂತನ ಬಿರುಗಾಳಿʼ ಅಂತ ಟೈಟಲ್ ಕೊಟ್ಟು ಪೋಸ್ಟರ್ ರಿಲೀಸ್ ಮಾಡಿ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗುವಂತೆ ಮಾಡಿದ್ದ ಚಿತ್ರತಂಡ ಇದೀಗ UI ಸಿನಿಮಾದ ಹೆಸರು ರಿವೀಲ್‌ ಮಾಡುವುದರ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ.

ಇದನ್ನೂ ಓದಿ | Director ಉಪೇಂದ್ರ Returns: ಪಾನ್‌ ಇಂಡಿಯಾ ಸಿನಿಮಾಕ್ಕೆ ಜೂ.3ರಂದು ಮುಹೂರ್ತ

ಇದು ಪ್ಯಾನ್​ ಇಂಡಿಯಾ ಚಿತ್ರ

ಕನ್ನಡದಲ್ಲಿ ಕೆಜಿಎಫ್ ನಂತರ ಪ್ಯಾನ್​ ಇಂಡಿಯಾ ಚಿತ್ರಗಳ ಪರ್ವ ಆರಂಭವಾಗುತ್ತಿದೆ. ಉಪ್ಪಿ ನಿರ್ದೇಶನದ ಈ ಚಿತ್ರ ಪ್ಯಾನ್​ ಇಂಡಿಯಾ ಎಂಬ ಮಾಹಿತಿಯನ್ನು ಚಿತ್ರತಂಡ ನೀಡಿದೆ. ಬಹುಭಾಷೆಯಲ್ಲಿ ತಯಾರಾಗುತ್ತಿರುವ ಈ ಸಿನೆಮಾದ ಟೈಟಲ್ ಕುತೂಹಲಕಾರಿಯಾಗಿದೆ. ಜನರು ಈಗಾಗಲೇ ಚಿತ್ರಕಥೆ, ಮೇಕಿಂಗ್‌ ತಲೆ ಕೆಡಿಸಿಕೊಂಡಿದ್ದಾರೆ. ಕೆ. ಪಿ. ಶ್ರೀಕಾಂತ್ ಅವರ ವೀನಸ್ ಎಂಟರ್ಟೈನರ್ಸ್ ಸಹಯೋಗದೊಂದಿಗೆ ಜಿ. ಮನೋಹರನ್ ಅವರ ಲಹರಿ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ.

ಸುಮಾರು 7 ವರ್ಷಗಳ ನಂತರ ಉಪೇಂದ್ರ ನಿರ್ದೇಶನಕ್ಕೆ ಇಳಿದಿದ್ದು, ಎರಡು ಸೂಪರ್ ಹಿಟ್ ಚಿತ್ರಗಳನ್ನು ಇಂಡಸ್ಟ್ರಿಗೆ ಕೊಟ್ಟ ಕೆ.ಪಿ. ಶ್ರೀಕಾಂತ್ ಉಪ್ಪಿಯ ಹೊಸ ಕನಸಿಗೆ ಸಾಥ್ ನೀಡಿದ್ದಾರೆ. ಜನರಿಗೆ ಮನರಂಜನೆ ನೀಡಲು ಈ ಜೋಡಿ ಸಿದ್ದವಾಗಿದೆ. ಈ ಹಿಂದೆ ಹತ್ತು ಚಿತ್ರಗಳ ನಿರ್ದೇಶನ ಮಾಡಿದ್ದಾರೆ ರಿಯಲ್ ಸ್ಟಾರ್. ಇದು ಅವರ ಡೈರೆಕ್ಷನ್ನಲ್ಲಿ ಮೂಡಿಬರಲಿರುವ 11ನೇ ಚಿತ್ರವಾಗಿದೆ. ಉಪ್ಪಿ 2 ಸಿನಿಮಾ 2015ರಲ್ಲಿ ರಿಲೀಸ್ ಆಗಿದ್ದು, ಉಪ್ಪಿ ಅಭಿನಯಿಸಿ, ನಿರ್ದೇಶಿಸಿದ ಕೊನೆಯ ಸಿನಿಮಾ ಆಗಿತ್ತು.

ಇದನ್ನೂ ಓದಿ | ವರಮಹಾಲಕ್ಷ್ಮಿ ಹಬ್ಬಕ್ಕೆ Raghavendra Storesಗೆ ಬನ್ನಿ: ʼನವರಸʼ ಸವಿಯಲು ಸಿದ್ಧರಾಗಿ

Exit mobile version