Site icon Vistara News

Urfi Javed: ಹಿಂದು ಯುವಕನ ಜತೆ ಉರ್ಫಿ ಜಾವೇದ್‌ ನಿಶ್ಚಿತಾರ್ಥ? ಹೋಮಕುಂಡದ ಬಳಿ ಕುಳಿತು ಪೂಜೆ ಮಾಡಿದ ನಟಿ!

Uorfi Javed Engagement

ಬೆಂಗಳೂರು: ಉರ್ಫಿ ಜಾವೇದ್ (Urfi Javed) ತಮ್ಮ ಉಡುಗೆ ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಆದರೀಗ ನಟಿ ವೈಯಕ್ತಿಕ ವಿಚಾರಗಳಿಗೆ ಸುದ್ದಿಯಾಗಿದ್ದಾರೆ. ಅಷ್ಟೇ ಅಲ್ಲದೇ ಉರ್ಫಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪೂರಕವೆಂಬಂತೆ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ನಿಗೂಢ ವ್ಯಕ್ತಿಯೊಂದಿಗೆ ಹೋಮಕುಂಡದ ಬಳಿ ಕುಳಿತು ಪೂಜೆ ಸಮಾರಂಭದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.

ವೈರಲ್ ಚಿತ್ರದಲ್ಲಿ, ಉರ್ಫಿ ನಿಗೂಢ ವ್ಯಕ್ತಿಯೊಂದಿಗೆ ಹೋಮಕುಂಡದ ಬಳಿ ಕುಳಿತು ಪೂಜೆ ಸಮಾರಂಭದಲ್ಲಿ ಭಾಗಿಯಾಗಿರುವುದು ಕಾಣಬಹುದು. ಆಕೆಯ ಸಹೋದರಿ ಉರುಸಾ ಹಂಚಿಕೊಂಡ ಫೋಟೊದಲ್ಲಿ, ಉರ್ಫಿ ನೀಲಿ ಸಲ್ವಾರ್ ಕಮೀಜ್ ಧರಿಸಿ ತಲೆಯ ಮೇಲೆ ದುಪಟ್ಟಾ ಧರಿಸಿದ್ದರು. ಫೋಟೋದಲ್ಲಿರುವ ವ್ಯಕ್ತಿ ಪ್ಯಾಟು, ಶರ್ಟ್ ಧರಿಸಿದ್ದಾರೆ. ಆದರೆ, ಅವರ ಮುಖವನ್ನು ಹಾರ್ಟ್ ಸಿಂಬಲ್‌ನಿಂದ ಮುಚ್ಚಿಡಲಾಗಿದೆ. ಈ ಜೋಡಿ ಪವಿತ್ರ ಹೋಮ ಕುಂಡದ ಮುಂದೆ ಕುಳಿತು ಅರ್ಚಕರು ಹೇಳಿದಂತೆ ಮಾಡುತ್ತಿದ್ದಾರೆ. ಹೀಗಾಗಿ ಉರ್ಫಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ನೆಟ್ಟಿಗರು ನಂಬಿದ್ದಾರೆ. ಆದಾಗ್ಯೂ, ಉರ್ಫಿ ಅಥವಾ ಅವರ ಕುಟುಂಬದವರು ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ. ಹೀಗಾಗಿ ಆದಷ್ಟು ಬೇಗ ಈ ಬಗ್ಗೆ ಅವರು ವಿವರಗಳನ್ನು ಹಂಚಿಕೊಳ್ಳುತ್ತಾರೆ ಎನ್ನಲಾಗಿದೆ.

ಉರ್ಫಿ ಅವರ ಫ್ಯಾಷನ್ ಆಯ್ಕೆಗಳ ಬಗ್ಗೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಮಾತನಾಡಿದ್ದಾರೆ. ಇತ್ತೀಚೆಗೆ, ಕರೀನಾ ಕಪೂರ್ ಅವರನ್ನು ‘ಧೈರ್ಯಶಾಲಿ’ ಎಂದು ಎಂತಲೂ ಹೇಳಿದ್ದರು. ಉರ್ಫಿ ಕುರಿತು ಅಶ್ಲೀಲತೆ ಮತ್ತು ನಗ್ನತೆಯನ್ನು ಉತ್ತೇಜಿಸುವ ಆರೋಪವಿದೆ. ನಟಿ ಖ್ಯಾತ ಧಾರಾವಾಹಿಗಳಾದ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಮತ್ತು ಕಸೌಟಿ ಜಿಂದಗಿ ಕೇ ಸೇರಿದಂತೆ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಅವರಿಗೆ ಹೆಸರು ತಂದುಕೊಟ್ಟಿದ್ದು ಮಾತ್ರ ಬಿಗ್ ಬಾಸ್ ಒಟಿಟಿ ವೇದಿಕೆ. ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ, ಉರ್ಫಿ ಜಾವೇದ್ ಸ್ಪ್ಲಿಟ್ಸ್‌ವಿಲ್ಲಾದ 14 ನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Urfi Javed: ಬಿಗ್‌ ಬಾಸ್‌ ಕಣ್ಣುಗಳನ್ನೇ ಕದ್ದು ಬಿಟ್ರಾ ಅಂದ್ರು ನೆಟ್ಟಿಗರು; ಉರ್ಫಿ ಹೊಸ ಅವತಾರ!

ತಂದೆಯಿಂದಲೇ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳಕ್ಕೊಳಗಾದ ಉರ್ಫಿ ಜಾವೇದ್‌

ಹ್ಯೂಮನ್ಸ್ ಆಫ್ ಬಾಂಬೆಯಲ್ಲಿ ನೀಡಿದ ಸಂದರ್ಶನವೊಂದನ್ನು “ʻಲಖನೌದಲ್ಲಿ ಬೆಳೆದಿದ್ದು ನಾನು. ನಾನು ಯಾವಾಗಲಾದರೂ ಕ್ರಾಪ್ ಟಾಪ್‌ಗಳನ್ನು ಧರಿಸಿದ್ದರೆ ಅದರ ಮೇಲೆ ಜಾಕೆಟ್‌ಗಳನ್ನು ಹಾಕಿಕೊಳ್ಳುತ್ತಿದ್ದೆ. ಮನೆಯಲ್ಲಿ ಅಂತಹ ಬಟ್ಟೆಗಳನ್ನು ನನಗೆ ಧರಿಸಲು ಬಿಡದೇ ಇದ್ದಾಗ, ಕಾರಣವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ತನ್ನ ತಂದೆ ತನ್ನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಂದಿಸುತ್ತಿದ್ದರು. ನಾನು ಪ್ರಜ್ಞೆ ಕಳೆದುಕೊಳ್ಳುವವರೆಗೂ ನನ್ನನ್ನು ಹೊಡೆಯುತ್ತಿದ್ದರು. ನಾನು ಆತ್ಮಹತ್ಯೆಗೂ ಪ್ರಯತ್ನಿಸಿದೆ ಎಂದುʼʼ ಉರ್ಫಿ ಜಾವೇದ್ ಹೇಳಿಕೊಂಡಿದ್ದರು.

ನನ್ನ ತಂದೆ ಕೂಡ ‘ಅವಳು ಪೋರ್ನ್ ಸ್ಟಾರ್’ ಅಂತಿದ್ದರು. ನನ್ನ ತಂದೆ ಇದೆಲ್ಲದರಿಂದ ಲಾಭ ಪಡೆದುಕೊಳ್ಳಲು ಹೀಗೆ ಹೇಳುತ್ತಿದ್ದರು. ಪೋರ್ನ್ ಸೈಟ್ ನವರು 50 ಲಕ್ಷ ರೂ. ಕೇಳುತ್ತಿದ್ದಾರೆ ಎಂದು ಎಲ್ಲರಿಗೂ ಹೇಳುತ್ತಿದ್ದರು. ಅವರು ನಮ್ಮ ಸಂಬಂಧಿಕರಿಗೆ ತಿಳಿಸಿದರು. ಮನೆಯಲ್ಲಿ ಅವರು ನನ್ನನ್ನು ಹೊಡೆಯುತ್ತಿದ್ದರಿಂದ ನಾನು ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ‘ಇಲ್ಲಿ ನಾನೇ ಬಲಿಪಶು, ಯಾಕೆ ಹೊಡೆಯುತ್ತಿದ್ದೀಯಾ?’ ಎನ್ನುವಷ್ಟು ಗೊಂದಲದಲ್ಲಿದ್ದೆ. ಎರಡು ವರ್ಷಗಳ ಕಾಲ ಅದನ್ನು ಸಹಿಸಿಕೊಂಡೆ. ಸಂಬಂಧಿಕರಿಂದ, ನನ್ನ ಸ್ವಂತ ತಂದೆಯಿಂದ ತಪ್ಪಿಸಿಕೊಳ್ಳಲು ಮನೆಯಿಂದ ಓಡಿ ಹೋದೆ. ಆಗ ನನಗೆ 17 ವರ್ಷ ಎಂದು ಹೇಳಿದ್ದರು.

Exit mobile version