ಇತ್ತೀಚೆಗೆ, ನಟಿ ಅಮೀಶಾ ಪಟೇಲ್ (Ameesha Patel) ಒಟಿಟಿಯಲ್ಲಿ ಸಲಿಂಗ ಕಾಮದ ಸಿನಿಮಾ, ವೆಬ್ ಸಿರೀಸ್‌ಗಳೇ ಹೆಚ್ಚಾಗಿವೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಅವರ ಈ ಮಾತಿಗೆ ಉರ್ಫಿ ಜಾವೇದ್ (Urfi Javed) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉರ್ಫಿ ಜಾವೇದ್ ಅವರು ಅಮೀಷಾ ಅವರ ಗದರ್ 2 ಸಿನಿಮಾದ ಪ್ರಚಾರ ಸಂದರ್ಶನದ ಕ್ಲಿಪ್ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿ ನಟಿಗೆ ತಿರುಗೇಟು ನೀಡಿದ್ದಾರೆ.
ಅಮೀಶಾ ಪಟೇಲ್ ನಟಿಸಿರುವ ‘ಗದರ್ 2’ ಸಿನಿಮಾ ಆಗಸ್ಟ್ 11ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ಪ್ರಚಾರದ ಸಲುವಾಗಿ ಅವರು ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಒಟಿಟಿ ಬಗ್ಗೆ ಅಮೀಶಾ ಪಟೇಲ್ ಸಲಿಂಗ ಕಾಮದ ಸಿನಿಮಾ, ವೆಬ್ ಸಿರೀಸ್‌ಗಳೇ ಹೆಚ್ಚಾಗಿವೆ ಎಂದು ಅಭಿಪ್ರಾಯ ಸೂಚಿಸಿದ್ದಾರೆ. ಅಮೀಶಾ ಪಟೇಲ್ ಸಂದರ್ಶನಲ್ಲಿ ʻಜನರು ಒಳ್ಳೆಯ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ. ಅಜ್ಜ-ಅಜ್ಜಿಯ ಜತೆ ಮೊಮ್ಮಕ್ಕಳು ಕುಳಿತು ನೋಡಬಹುದಾದ ಸಿನಿಮಾ ಮಾಡುವ ಯುಗ ಈಗಿಲ್ಲ. ಒಟಿಟಿ ಪ್ಲ್ಯಾಟ್‌ಫಾರ್ಮ್ ಖಂಡಿತವಾಗಿಯೂ ನಿಮಗೆ ಅಂತಹ ಒಳ್ಳೆಯ ಸಿನಿಮಾ ನೀಡುವುದಿಲ್ಲ. ಸಲಿಂಗಕಾಮ, ಗೇ-ಲೆಸ್ಬಿಯಾನಿಸಂಗಳೆ ತುಂಬಿಕೊಂಡಿದೆ. ನಿಮ್ಮ ಮಕ್ಕಳ ಕಣ್ಣುಗಳನ್ನು ನೀವು ಮುಚ್ಚಬೇಕಾದ ದೃಶ್ಯಗಳು ಈಗ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಅಂಥದ್ದನ್ನು ನೋಡದ ರೀತಿಯಲ್ಲಿ ಟಿವಿಗೆ ಚೈಲ್ಡ್ ಲಾಕ್ ಹಾಕಬೇಕಿದೆ. ಇಂಥದ್ದನ್ನೆಲ್ಲ ನೀವು ನಿಮ್ಮ ಮಕ್ಕಳೊಂದಿಗೆ ನೋಡಲು ಬಯಸುವುದಿಲ್ಲ’ ಎಂದು ಅಮೀಶಾ ಪಟೇಲ್ ಹೇಳಿದ್ದರು. ಅವರ ಈ ಹೇಳಿಕೆಗೆ ನಟಿ ಉರ್ಫಿ ಜಾವೇದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾಜಿ ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ಈ ವಿಡಿಯೊ ಕ್ಲಿಪ್ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿ ಹೀಗೆ ಬರೆದಿದ್ದಾರೆ, “ವಾಸ್ತವವಾಗಿ ಸಲಿಂಗಕಾಮ ಎಂದರೇನು? ನಿಮ್ಮ ಮಕ್ಕಳನ್ನು ಅದರಿಂದ ದೂರವಿಡುವುದೇ? ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಶಿಕ್ಷಣ ಪಡೆಯದೆ ಸೆಲೆಬ್ರಿಟಿಗಳು ಮಾತನಾಡುವುದು ನನಗೆ ನಿಜವಾಗಿಯೂ ಬೇಸರ ತಂದಿದೆ! 25 ವರ್ಷಗಳಿಂದ ಕೆಲಸ ಸಿಗದ ಕಾರಣ ಅವರು ಇಂಥ ವ್ಯಕ್ತಿಯಾಗಿ ಪರಿವರ್ತನೆಗೊಂಡಿದ್ದಾರೆ’ ಎಂದು ಉರ್ಫಿ ಜಾವೇದ್ ಅವರು ಅಮೀಶಾ ಪಟೇಲ್ಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: Cheque Bounce Case: ರಾಂಚಿ ಕೋರ್ಟ್‌ಗೆ ‘ಗದರ್ 2’ ಚಿತ್ರದ ನಟಿ ಅಮೀಶಾ ಪಟೇಲ್ ಸರೆಂಡರ್!
ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಿದೆ. ʻʻನಿಮಗೆ ಒಟಿಟಿ ಇಷ್ಟವಿಲ್ಲದಿದ್ದರೆ, ಅದನ್ನು ಸ್ವಿಚ್ ಆಫ್ ಮಾಡಿʼʼ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಸಲಿಂಗ ಕಾಮದಲ್ಲಿ ಸೆಕ್ಸಿಸಮ್ ಕೂಡ ಇದೆ. ಮಕ್ಕಳು ಮತ್ತು ಅಜ್ಜಿಯರು ಅದನ್ನು ನೋಡುವುದಿಲ್ಲ. ಸಲಿಂಗಕಾಮವನ್ನು ಏಕೆ ದೂಷಿಸುತ್ತೀರಿ, ” ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ಅಮೀಷಾ ತಮ್ಮ ಹಿಟ್ ಚಿತ್ರವಾದ ಗದರ್ ಸೀಕ್ವೆಲ್‌ನೊಂದಿಗೆ ಮತ್ತೆ ಕಮ್‌ಬ್ಯಾಕ್ ಆಗಿದ್ದಾರೆ. ಸನ್ನಿ ಡಿಯೋಲ್ ಜತೆ ನಟಿ ತೆರೆ ಹಂಚಿಕೊಂಡಿದ್ದಾರೆ. ಗದರ್ 2 ಇದೇ ಆಗಸ್ಟ್ 11ರಂದು ಬಿಡುಗಡೆಯಾಗಲಿದೆ.