Site icon Vistara News

The Kerala Story: ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಿಷೇಧ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ತೆರಿಗೆ ಮುಕ್ತ

UP Govt Makes The Kerala Story Tax-Free

ಉತ್ತರ ಪ್ರದೇಶ: ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ‘ದಿ ಕೇರಳ ಸ್ಟೋರಿ’ಯನ್ನು (The Kerala Story) ರಾಜ್ಯದಲ್ಲಿ ತೆರಿಗೆ ಮುಕ್ತಗೊಳಿಸಿದೆ. ಮಮತಾ ಬ್ಯಾನರ್ಜಿ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ಚಲನಚಿತ್ರವನ್ನು ನಿಷೇಧಿಸಿದ ಒಂದು ದಿನದ ನಂತರ ಈ ಕ್ರಮವನ್ನು ಯೋಗಿ ಆದಿತ್ಯನಾಥ್‌ ಅವರು ಜಾರಿಗೆ ತಂದಿದ್ದಾರೆ.

‘ದಿ ಕೇರಳ ಸ್ಟೋರಿ’ಯನ್ನು ತೆರಿಗೆ ಮುಕ್ತಗೊಳಿಸುವುದು ಉತ್ತಮ ನಿರ್ಧಾರ. ಉತ್ತರ ಪ್ರದೇಶದ ಜನರು ಈ ಚಿತ್ರವನ್ನು ನೋಡಬೇಕು. ನಮ್ಮ ಸಹೋದರಿಯರು ಹೇಗೆ ಅನುಭವಿಸಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ನಾವೂ ಹೋಗಿ ಚಿತ್ರ ನೋಡುತ್ತೇವೆ. ಪಶ್ಚಿಮ ಬಂಗಾಳ ಜನರು ಈ ಚಿತ್ರದ ನಿಷೇಧವನ್ನು ಒಪ್ಪುವುದಿಲ್ಲ ಎಂದು ಯುಪಿ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ʼʼ ಹೇಳಿಕೆ ನೀಡಿದ್ದಾರೆ.

ಮತ್ತೊಂದೆಡೆ, ‘ದಿ ಕೇರಳ ಸ್ಟೋರಿ’ ಚಿತ್ರದ ಸಿಬ್ಬಂದಿಗೆ ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್ ಈ ಬಗ್ಗೆ ಮಾಹಿತಿ ನೀಡಿದ್ದು, ʻʻನಮ್ಮ ತಂಡದ ಸಿಬ್ಬಂದಿಯೊಬ್ಬರಿಗೆ, ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆʼʼಎಂದು ಹೇಳಿಕೆ ನೀಡಿದ್ದಾರೆ. ಯಾರಿಗೆ ಬೆದರಿಕೆ ಕರೆಗಳು ಬರುತ್ತವೆಯೋ ಅವರು ಹೊರಗೆ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಹೇಳಿದ್ದಾರೆ .ಆದರೂ ಈ ಬಗ್ಗೆ ಯಾವುದೇ ಎಫ್‌ಐಆರ್ ದಾಖಲಾಗದ ಕಾರಣ ಇನ್ನೂ ಲಿಖಿತ ದೂರಿಗಾಗಿ ಕಾಯುತ್ತಿದ್ದಾರೆ ಪೊಲೀಸರು.

ಇದನ್ನೂ ಓದಿ: The Kerala Story: ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ಸಿನಿಮಾಕ್ಕೆ ನಿಷೇಧ; ಮಮತಾ ಬ್ಯಾನರ್ಜಿ ಆದೇಶ

ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಿಷೇಧ

ದಿ ಕೇರಳ ಸ್ಟೋರಿ (The Kerala Story) ಸಿನಿಮಾವನ್ನು ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಿಷೇಧಿಸಲಾಗಿದೆ (The Kerala Story Ban in West Bengal). ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ಪ್ರದರ್ಶನ ರದ್ದುಗೊಳಿಸುತ್ತಿರುವುದಾಗಿ ಮೇ 9ರಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (CM Mamata Banerjee) ಘೋಷಣೆ ಮಾಡಿದ್ದಾರೆ. ದಿ ಕೇರಳ ಸ್ಟೋರಿ ಟ್ರೈಲರ್‌ ಬಿಡುಗಡೆಯಾದಾಗಿನಿಂದಲೂ ವಿವಾದ ಸೃಷ್ಟಿಸಿದೆ. ಕೇರಳದ ಸಾವಿರಾರು ಹಿಂದು/ಕ್ರಿಶ್ಚಿಯನ್ ಹುಡುಗಿಯರನ್ನು ಸಿರಿಯಾ-ಅಫ್ಘಾನಿಸ್ತಾನಕ್ಕೆ ಕರೆದುಕೊಂಡು ಇಸ್ಲಾಮ್​ಗೆ ಮತಾಂತರ ಮಾಡುವ, ಲವ್​ ಜಿಹಾದ್​ಗೆ ಒಳಪಡಿಸುವ, ಐಸಿಸ್ ಭಯೋತ್ಪಾದನಾ ಸಂಘಟನೆಗೆ ಸೇರಿಸುವ ಕತೆಗಳನ್ನು ಒಳಗೊಂಡಿರುವ ದಿ ಕೇರಳ ಸ್ಟೋರಿ ಮೇ 5ರಂದು ದೇಶಾದ್ಯಂತ ಬಿಡುಗಡೆಯಾಗಿದೆ.

ಇನ್ನು ತಮಿಳುನಾಡಿನ ಹಲವು ಮಲ್ಟಿಪ್ಲೆಕ್ಸ್​ಗಳಲ್ಲಿ ಈಗಾಗಲೇ ʻದಿ ಕೇರಳ ಸ್ಟೋರಿʼ ಚಿತ್ರ ಪ್ರದರ್ಶನ ಸ್ಥಗಿತಗೊಂಡಿದೆ. ವಿವಾದಿತ ಸಿನಿಮಾವನ್ನು ನಾವು ಪ್ರದರ್ಶನ ಮಾಡುವುದಿಲ್ಲ ಎಂದು ರಾಜ್ಯದ ವಿವಿಧ ಮಲ್ಟಿಪ್ಲೆಕ್ಸ್​​ಗಳ ಮಾಲೀಕರು ಹೇಳಿದ್ದಾರೆ ಎಂದು ತಮಿಳುನಾಡು ಥಿಯೇಟರ್​ ಮತ್ತು ಮಲ್ಟಿಪ್ಲೆಕ್ಸ್​ ಮಾಲೀಕರ ಸಂಘದ ಅಧ್ಯಕ್ಷ ಎಂ.ಸುಬ್ರಹ್ಮಣಿಯಂ ಅವರು ಭಾನುವಾರ ಹೇಳಿಕೆ ಬಿಡುಗಡೆ ಮಾಡಿದ್ದರು. ಇನ್ನೊಂದೆಡೆ ಈ ಸಿನಿಮಾವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಮಧ್ಯಪ್ರದೇಶದಲ್ಲಿ ತೆರಿಗೆ ಮುಕ್ತ ಎಂದು ಘೋಷಿಸಲಾಗಿದೆ.

Exit mobile version