ಬೆಂಗಳೂರು: ಕೆಲವು ದಿನಗಳ ಹಿಂದೆ ತಮನ್ನಾ (Tamannaah Bhatia) ಧರಿಸಿರುವ ವಜ್ರದ ಉಂಗುರದ ಬಗ್ಗೆ ಸಾಕಷ್ಟು ಗಾಸಿಪ್ಗಳು ಹಬ್ಬಿದ್ದವು. 3 ವರ್ಷಗಳ ಹಿಂದೆ ರಾಮ್ ಚರಣ್ ಪತ್ನಿ ಉಪಾಸನಾ ವಜ್ರದ ಉಂಗುರವನ್ನು ತಮನ್ನಾಗೆ (Tamannaah Bhatia) ಉಡುಗೊರೆಯಾಗಿ ನೀಡಿದ್ದರು ಎಂದು ವರದಿಯಾಗಿತ್ತು. ಆದರೆ, ಅಸಲಿ ವಿಚಾರ ತಿಳಿದ ಬಳಿಕ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಏಕೆಂದರೆ ಅದು ಡೈಮಂಡ್ ಆಗಿರಲೇ ಇಲ್ಲ! ಈ ವಿಚಾರವನ್ನು ತಮನ್ನಾ ಹೇಳಿಕೊಂಡಿದ್ದಾರೆ.”ಸೈರಾ ನರಸಿಂಹ ರೆಡ್ಡಿ” ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಕಂಡಿತ್ತು. ಸಿನಿಮಾ ಸಕ್ಸಸ್ ಖುಷಿಯಲ್ಲಿ 2 ಕೋಟಿ ರೂ. ಬೆಲೆ ಬಾಳುವ ವಜ್ರದ ಉಂಗುರವನ್ನು ಉಪಾಸನಾ ಕೊಟ್ಟಿದ್ದಾರೆ ಎನ್ನಲಾಗಿತ್ತು. ಅದು ಡೈಮಂಡ್ ರಿಂಗ್ ಅಲ್ಲ ಎಂಬುದನ್ನು ತಮನ್ನಾ ಸ್ಪಷ್ಟಪಡಿಸಿದ್ದಾರೆ.
2019ರಲ್ಲಿ ರಿಲೀಸ್ ಆದ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾ
ತಮನ್ನಾ ಅವರು ಡೈಮಂಡ್ ಉಂಗುರ ಧರಿಸಿ ಕುಳಿತ ಫೋಟೊ ವೈರಲ್ ಆಗಿತ್ತು. ಇದರ ಬೆಲೆ 2 ಕೋಟಿ ರೂ. ಎಂದು ಹೇಳಲಾಗಿತ್ತು. 2019ರಲ್ಲಿ ರಿಲೀಸ್ ಆದ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ತಮನ್ನಾ ನಟಿಸಿದ್ದರು. ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ರಾಮ್ ಚರಣ್. ಚಿತ್ರದಲ್ಲಿನ ಅದ್ಭುತ ನಟನೆಗೆ ಈ ಉಂಗುರವನ್ನು ಉಪಾಸನಾ ಅವರು ತಮನ್ನಾಗೆ ನೀಡಿದ್ದರು ಎಂದು ಹೇಳಲಾಗಿತ್ತು. ಆದರೆ, ಈ ಉಂಗುರ ಉಪಾಸನಾ ಕೊಟ್ಟಿದ್ದು ಅಲ್ಲವೇ ಅಲ್ಲ. ಇದೊಂದು ಬಾಟಲ್ ಓಪನರ್.
‘ಇದನ್ನು ಹೇಳಲು ನನಗೆ ಬೇಸರ ಇದೆ. ಬಾಟಲ್ ಓಪನರ್ ಜತೆ ನಾವು ಫೋಟೊಶೂಟ್ ಮಾಡುತ್ತಿದ್ದೆವು. ನಿಜವಾದ ಡೈಮಂಡ್ ಅಲ್ಲ’ ಎಂದು ಬರೆದುಕೊಂಡಿರುವ ತಮನ್ನಾ, ಹೆಣ್ಣುಮಕ್ಕಳು ಫೋಟೊ ಕ್ಲಿಕ್ಕಿಸಿಕೊಳ್ಳಲು ಇಷ್ಟಪಡುತ್ತಾರೆ ಎಂಬರ್ಥ ಬರುವ ಹ್ಯಾಶ್ಟ್ಯಾಗ್ ಹಾಕಿದ್ದಾರೆ.
ಇದನ್ನೂ ಓದಿ: Tamanna Bhatia : ಮಾಜಿ ಪ್ರೇಮಿ ಜತೆ ಸೆಕ್ಸ್ ಮಾಡಿದ್ದು ಹೌದಾ ಅಲ್ಲವಾ? ವಿಜಯ್ ವರ್ಮಾಗೆ ತಮನ್ನಾ ಪ್ರಶ್ನೆ!
ತಮನ್ನಾ ನಟನೆಯ ‘ಲಸ್ಟ್ ಸ್ಟೋರಿಸ್ 2’ ಸಿನಿಮಾ ಇತ್ತೀಚೆಗೆ ತೆರೆಗೆ ಬಂತು. ಈ ವೆಬ್ ಸೀರಿಸ್ನಲ್ಲಿ ತಮನ್ನಾ ಹಾಗೂ ವಿಜಯ್ ವರ್ಮಾ ಒಟ್ಟಾಗಿ ನಟಿಸಿದ್ದಾರೆ. ತಮನ್ನಾ ನಟನೆಯ, ನೆಲ್ಸನ್ ದಿಲೀಪ್ಕುಮಾರ್ ಬರೆದು ನಿರ್ದೇಶಿಸಿದ ‘ಜೈಲರ್’ ಸಿನಿಮಾ ಇದೇ ಆಗಸ್ಟ್ 10ರಂದು ಬಿಡುಗಡೆಯಾಗಲಿದೆ. ʻಜೈಲರ್ ಮುತ್ತುವೇಲ್ ಪಾಂಡಿಯನ್ʼ ಪಾತ್ರದಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ತಮನ್ನಾ ಭಾಟಿಯಾ ಪ್ರಮುಖ ಪಾತ್ರದಲ್ಲಿದ್ದಾರೆ.
ಜಾಕಿ ಶ್ರಾಫ್, ಶಿವರಾಜ್ಕುಮಾರ್, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ ರವಿ ಮತ್ತು ವಿನಾಯಕನ್ ಕೂಡ ‘ಜೈಲರ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಜೈಲರ್ ಚಿತ್ರದಲ್ಲಿ ಜಾಫರ್ ಸಾದಿಕ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.