Site icon Vistara News

Upasana Kamineni: ‘ಆರ್‌ಆರ್‌ಆರ್’ ಚಿತ್ರದ ನಟ ರಾಮ್‌ ಚರಣ್‌ ಅರ್ಧಾಂಗಿ ಉಪಾಸನಾರ ಆಸ್ತಿ ಎಷ್ಟಿದೆ ಗೊತ್ತಾ?

Upasana Kamineni

#image_title

ಹೈದರಾಬಾದ್‌: ದಕ್ಷಿಣ ಭಾರತದ ಪ್ರಸಿದ್ಧ ನಟರಲ್ಲಿ ಒಬ್ಬರು ರಾಮ್‌ ಚರಣ್‌. ಆರ್‌ಆರ್‌ಆರ್‌ ಸಿನಿಮಾ ಮೂಲಕ ಪೂರ್ತಿ ವಿಶ್ವವೇ ಭಾರತದತ್ತ ತಿರುಗಿನೋಡುವಂತೆ ಮಾಡಿದ್ದ ಈ ನಟ ಇತ್ತೀಚೆಗಷ್ಟೇ ತಂದೆಯಾಗಿದ್ದಾರೆ. ಅವರ ಪತ್ನಿ ಉಪಾಸನಾ ಕಮಿನೇನಿ (Upasana Kamineni) ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಂದ ಹಾಗೆ ಈ ಉಪಾಸನಾ ಅವರ ಬಳಿ ಎಷ್ಟು ಆಸ್ತಿ ಇದೆ ಗೊತ್ತಾ?

ರಾಮ್‌ ಚರಣ್‌ ಮತ್ತು ಉಪಾಸನಾ ಅವರ ಒಟ್ಟಾರೆ ಆಸ್ತಿ ಮೌಲ್ಯ 2500 ಕೋಟಿ ರೂ. ಅದರಲ್ಲಿ ಉಪಾಸನಾ ಅವರ ಪಾಲೇ 1130 ಕೋಟಿ ರೂ. ಇದೆ. ಉಪಾಸನಾ ಅವರ ತಾಯಿಯ ತಂದೆ ಅಂದರೆ ಅವರ ಅಜ್ಜ ಭಾರತದ ಪ್ರಸಿದ್ಧ ಉದ್ಯಮಿಗಳಲ್ಲಿ ಒಬ್ಬರು. ಅಪೋಲೋ ಹಾಸ್ಪಿಟಲ್ಸ್‌ನ ಚೇರ್‌ಮೆನ್‌ ಅವರು. ಅವರು ಬರೋಬ್ಬರಿ 21,000 ಕೋಟಿ ರೂ. ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ.

ಇದನ್ನೂ ಓದಿ: Ram Charan: ನಟ ರಾಮ್‌ ಚರಣ್‌, ಉಪಾಸನಾ ದಂಪತಿಗೆ ಹೆಣ್ಣು ಮಗು ಜನನ
ಉಪಾಸನಾ ಅವರು ಅಪೋಲೋ ಹಾಸ್ಪಿಟಲ್ಸ್‌ನ ಉಪಾಧ್ಯಕ್ಷರಾಗಿದ್ದಾರೆ. ಹಾಗೆಯೇ ಅವರ ತಾಯಿ ಶೋಭನಾ ಅವರು ಅಪೋಲೋದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದಾರೆ. ಇಂಟರ್‌ನ್ಯಾಶನಲ್‌ ಬಿಸಿನೆಸ್‌ ಮಾರ್ಕೆಟಿಂಗ್‌ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿರುವ ಉಪಾಸನಾ ಅವರು ತಮ್ಮ ವಿದ್ಯಾಭ್ಯಾಸ ಮುಗಿಸಿದ ತಕ್ಷಣವೇ ಕುಟುಂಬದ ವ್ಯವಹಾರಕ್ಕೆ ಕೈ ಹಾಕಿದರು. ಅಪೋಲೋ ಆಸ್ಪತ್ರೆಗಳ ಹಿರಿಯ ಹುದ್ದೆಯಲ್ಲಿರುವುದಷ್ಟೇ ಅಲ್ಲದೆ ಅವರು ಬಿ ಪಾಸಿಟಿವ್‌ ಹೆಸರಿನ ಪತ್ರಿಕೆಯ ಪ್ರಧಾನ ಸಂಪಾದಕಿಯೂ ಹೌದು.

ವಿಮಾ ಕಂಪನಿಗಳ ಬಗ್ಗೆ ನಿಮಗೆ ಮಾಹಿತಿ ಇದ್ದಿದ್ದೇ ಆದರೆ ಟಿಪಿಎ ಹೆಸರನ್ನು ಕೇಳಿರುತ್ತೀರಿ. ಇದೊಂದು ಕುಟುಂಬ ಆರೋಗ್ಯ ವಿಮಾ ಕಂಪನಿ. ಈ ಕಂಪನಿಗೂ ಕೂಡ ಉಪಾಸನಾ ಅವರೇ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದಾರೆ. ಅಂದ ಹಾಗೆ ಉಪಾಸನಾ ಅವರ ತಂದೆಯೂ ಕೂಡ ಒಬ್ಬ ಉದ್ಯಮಿಯೇ. ಅನಿಲ್‌ ಕಾಮಿನೇನಿ ಹೆಸರಿನ ಅವರು ಕೆಇಐ ಗ್ರೂಪ್‌ನ ಸಂಸ್ಥಾಪಕರು. ಈ ಕಂಪನಿಯ ಮಂಡಳಿಯಲ್ಲೂ ಉಪಾಸನಾ ಇದ್ದಾರೆ.

Exit mobile version