ಬೆಂಗಳೂರು: ಹಲವು ವರ್ಷಗಳ ನಂತರ ಉಪಾಸನಾ (Upasana) ಮಡಿಲಿಗೆ ಮಗು ಬರುತ್ತಿದೆ. ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೊನಿಡೇಲಾ ಅವರು ಅಮ್ಮಂದಿರ ದಿನಾಚರಣೆ ದಿನ ವಿಶೇಷವಾದ ಪೋಸ್ಟ್ ಶೇರ್ ಮಾಡಿದ್ದಾರೆ. ಇದರಲ್ಲಿ ಉಪಾಸನಾ ಅವರು ಮೊದಲಬಾರಿಗೆ ಬೇಬಿ ಬಂಪ್ ತೋರಿಸಿದ್ದಾರೆ. ಕಪ್ಪು ಉಡುಪಿನಲ್ಲಿ ತನ್ನ ಬೇಬಿ ಬಂಪ್ ತೋರಿಸುವ ಫೋಟೊವನ್ನು ಹಂಚಿಕೊಂಡ ಉಪಾಸನಾ ತಾಯ್ತನದ ಕುರಿತಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.
ರಾಮ್ ಚರಣ್ ಮತ್ತು ಉಪಾಸನಾ 5 ವರ್ಷಗಳ ಕಾಲ ಪ್ರೀತಿಸಿ ಬಳಿಕ ಮದುವೆಯಾಗಿದ್ದಾರೆ. ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಉಪಾಸನಾ ತಾಯಂದಿರ ದಿನ ಕುರಿತು ಪೋಸ್ಟ್ ಹಂಚಿಕೊಂಡು ʻ“ಸರಿಯಾದ ಕಾರಣಗಳಿಗಾಗಿ ನಾನು ಮಾತೃತ್ವವನ್ನು ಸ್ವೀಕರಿಸಲು ಹೆಮ್ಮೆಪಡುತ್ತೇನೆ. ಸಮಾಜದ ನಿರೀಕ್ಷೆಗಳಿಗೆ ಅನುಗುಣವಾಗಿ ಅಥವಾ ಹೊಂದಿಕೊಳ್ಳಲು ನಾನು ತಾಯಿಯಾಗಿಲ್ಲ. ನನ್ನ ಮಗ/ಮಗಳು ಅರ್ಹಪಡುವ ಎಲ್ಲಾ ಪ್ರೀತಿಯನ್ನು ನೀಡಲು ನಾನು ಭಾವನಾತ್ಮಕವಾಗಿ ಸಿದ್ಧವಾಗಿರುವಾಗ ತಾಯಿಯಾಗಿದ್ದೇನೆ. ನನ್ನ ಮೊದಲ ತಾಯಂದಿರ ದಿನವನ್ನು ಆಚರಿಸುತ್ತಿದ್ದೇನೆʼʼ ಎಂದು ಬರೆದುಕೊಂಡಿದ್ದಾರೆ.
ನಟಿ ಸಮಂತಾ ಕೂಡ ಈ ಪೋಸ್ಟ್‌ಗೆ “ಹ್ಯಾಪಿ ಮದರ್ಸ್ ಡೇ ಬ್ಯೂಟಿಫುಲ್ ” ಎಂದು ಕಮೆಂಟ್ ಮಾಡಿದ್ದಾರೆ. ಹೊಸ ತಾಯಿ, ನಟಿ ಕಾಜಲ್ ಅಗರ್ವಾಲ್ ಕೂಡ “ಹ್ಯಾಪಿ ಮದರ್ಸ್ ಡೇ ಲವ್ಲಿ ಮಮ್ಮಿ” ಎಂದು ಕಮೆಂಟ್ ಮಾಡಿದ್ದಾರೆ. ಉಪಾಸನಾ ಅವರ ಪೋಸ್ಟ್‌ನ ಕಾಮೆಂಟ್‌ನಲ್ಲಿ “ಪ್ರೀತಿಯ ನಿಮಗೆ ತುಂಬಾ ಸಂತೋಷವಾಗಿದೆ” ಎಂದು ಬರೆಯಲಾಗಿದೆ.
ಇದನ್ನೂ ಓದಿ: Ram Charan: ಸ್ನೇಹಿತರಿಂದ ಉಪಾಸನಾರಿಗೆ ಭರ್ಜರಿ ಗಿಫ್ಟ್: ಅಲ್ಲು ಅರ್ಜುನ್ ಪೋಸ್ಟ್‌ನಲ್ಲಿ ಏನಿದೆ?
ಉಪಾಸನಾ ಪೋಸ್ಟ್
ತಾಯಿಯಾಗಲು ಉತ್ಸುಕರಾಗಿರುವ ಬಗ್ಗೆ ಹೇಳಿಕೊಂಡ ಉಪಾಸನಾ
ಸಂದರ್ಶನದಲ್ಲಿ, ಉಪಾಸನಾ ಅವರು ತಾಯಿಯಾಗಲು ಉತ್ಸುಕರಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. “ನಾನು ತುಂಬಾ ಉತ್ಸುಕನಾಗಿದ್ದೇನೆ. ಸಮಾಜ ಬಯಸಿದಾಗ ನಾವು ಮಗುವನ್ನು ಪಡೆಯಬೇಕೆಂಬ ನಿರ್ಧಾರ ಮಾಡಿದ್ದಲ್ಲ. ನಮ್ಮ ಮದುವೆಯಾದ ಹತ್ತು ವರ್ಷಗಳ ನಂತರ, ನಾವು ಈಗ ಮಗುವನ್ನು ಪಡೆಯಬೇಕೆಂಬ ನಿರ್ಧಾರಕ್ಕೆ ಬಂದಿದ್ದೇವೆ. ನಾವಿಬ್ಬರೂ ಅಭಿವೃದ್ಧಿ ಹೊಂದುತ್ತಿರುವ ಕಾರಣ ಇದು ಅತ್ಯುತ್ತಮ ಸಮಯ ಎಂದು ನಾನು ಭಾವಿಸುತ್ತೇನೆ. ನಾವಿಬ್ಬರೂ ಆರ್ಥಿಕವಾಗಿ ಸುರಕ್ಷಿತರಾಗಿದ್ದೇವೆ. ನಮ್ಮ ಮಕ್ಕಳನ್ನು ನಾವೇ ನೋಡಿಕೊಳ್ಳಬಹುದು. ಇದು ನಮ್ಮ ಪರಸ್ಪರ ನಿರ್ಧಾರವಾಗಿತ್ತು. ಹೊರಗಿನ ಸಮಾಜದಿಂದಾಗಲಿ, ನಮ್ಮ ಕುಟುಂಬದಿಂದಾಗಲಿ ಯಾವುದೇ ಒತ್ತಡ ನಮಗಿರಲಿಲ್ಲ. ಎಂದು ಉಪಾಸನಾ ಹೇಳಿದ್ದರು.
ಇತ್ತೀಚೆಗೆ, ರಾಮ್ ಚರಣ್ ಆರ್‌ಆರ್‌ಆರ್ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಇದ್ದಾಗ ಉಪಾಸನಾ ಕೂಡ ಇದ್ದರು. ಆಸ್ಕರ್ ಅಭಿಯಾನದ ಭಾಗವಾಗಿ ಅಮೆರಿಕದಲ್ಲಿ ಪ್ರವಾಸದಲ್ಲಿದ್ದಾಗ, ಉಪಾಸನಾ ಕೂಡ ಜತೆಗಿದ್ದರು.