ಬೆಂಗಳೂರು: ದಕ್ಷಿಣ ಭಾರತದ ಭಾಷೆಗಳಲ್ಲಿ ಸಾಲು ಸಾಲು ಸಿನಿಮಾಗಳು (Upcoming Film) ಬಿಡುಗಡೆಯಾಗುತ್ತಿವೆ. ಪ್ರತಿ ಭಾಷೆಯಲ್ಲೂ ಮೂರರಿಂದ ನಾಲ್ಕು ಸಿನಿಮಾಗಳು ಬಿಡುಗಡೆಗೊಳ್ಳುತ್ತಿವೆ. ತೆಲುಗಿನಲ್ಲಿ ಆರು ಸಿನಿಮಾಗಳು, ತಮಿಳಿನಲ್ಲಿ ಎಂಟು ಹಾಗೂ ಮಲಯಾಳಂನಲ್ಲಿ ಆರು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಕರ್ನಾಟಕದಲ್ಲಿ ಇಷ್ಟೂ ಸಿನಿಮಾಗಳ ಜತೆ ಶರಣ್ ಅಭಿನಯದ ಗುರುಶಿಷ್ಯರು ಪೈಪೋಟಿಗೆ ಇಳಿದಿದೆ.
ಸ್ಯಾಂಡಲ್‌ವುಡ್ ಸಿನಿಮಾಗಳು
“ಗುರು ಶಿಷ್ಯರು” ಅಂದ ಕೂಡಲೇ ದ್ವಾರಕೇಶ್ ನಟನೆಯ ಹಳೇ ಸಿನಿಮಾ ನೆನಪಿಗೆ ಬರುತ್ತದೆ. ಈಗ ಮತ್ತೊಮ್ಮೆ ಅದೇ ಶೀರ್ಷಿಕೆ ಮೂಲಕ ಸಿನಿಮಾ ಬಿಡುಗಡೆಗೊಳ್ಳುತ್ತಿದೆ. ಸೆ.23ಕ್ಕೆ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ. ಗ್ರಾಮೀಣ ಕ್ರೀಡೆ ಖೋ ಖೋ ಆಟವನ್ನು ಆಧರಿಸಿದ ಈ ಸಿನಿಮಾದಲ್ಲಿ ಶರಣ್ ಪಿಟಿ ಮಾಸ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಈ ವಾರ ಗುರು ಶಿಷ್ಯರು ಸಿನಿಮಾ ಸೇರಿ ನಾಲ್ಕು ಸಿನಿಮಾಗಳು ತೆರೆಗೆ ಬರಲಿವೆ. ಅದರಲ್ಲಿ ಸ್ವಚ್ಛ ಕರ್ನಾಟಕ, ರಾಜ ರಾಣಿ ರೋರರ್ ರಾಕೆಟ್, ಧಮ್ ರಿಲೀಸ್ ಆಗುತ್ತಿದೆ.
ಇದನ್ನೂ ಓದಿ | IMDb top 10 films | ಜನಪ್ರಿಯ ಭಾರತೀಯ ಫಿಲಂಗಳ ರೇಟಿಂಗ್: ಮೊದಲ ಸ್ಥಾನದಲ್ಲಿ ಯಾವ ಸಿನಿಮಾ?
ಟಾಲಿವುಡ್ ಸಿನಿಮಾಗಳು
ಟಾಲಿವುಡ್‌ನಲ್ಲಿ ಬರೋಬ್ಬರಿ ಆರು ಸಿನಿಮಾಗಳು ರಿಲೀಸ್ ಆಗಲಿವೆ. ಸೆ.22ಕ್ಕೆ ʻಪಗಪಗʼ ಸಿನಿಮಾ ಬಿಡುಗಡೆಗೊಳ್ಳುತ್ತಿದೆ. ‘ಕೃಷ್ಣ ವೃಂಧ ವಿಹಾರಿ’, ‘ದೊಂಗಲುನ್ನಾರು ಜಾಗೃತ’, ‘ಅಲ್ಲುರಿ’, ‘ಸರವಂ ಸಿದ್ಧಂ’, ‘ಗುರುತುಂದಾ ಸೀತಾಕಾಲಂ’, ಸಿನಿಮಾಗಳು ಸೆಪ್ಟೆಂಬರ್ 23ರಂದು ಆಂಧ್ರ ಹಾಗೂ ತೆಲಂಗಾಣದಲ್ಲಿ ರಿಲೀಸ್ ಆಗುತ್ತಿವೆ. ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಹೆಸರು ಮಾಡಿದ್ದ ಕಾರ್ತಿಕೇಯ-2 ಸಿನಿಮಾ ತಮಿಳಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಚಟ್ಟಂಬಿ’, ‘ವೆಲ್ಲಾರಿ ಪಟ್ಟಣಂ’, ‘ಒರ್ಮಕಲಿಲ್’, ‘ಕೊಶಿಚ್ಯಂಟೆ ಪರಂಬು’, ‘ಕರ್ಮಸಾಗರಂ’ ಬಿಡುಗಡೆಯಾಗುತ್ತಿವೆ.
ಇದನ್ನೂ ಓದಿ | Guru Shishyaru | ಹಿರಿಯ ನಟ ಶ್ರೀನಿವಾಸಮೂರ್ತಿ ಮೊಮ್ಮಗ ಚಂದನವನಕ್ಕೆ ಎಂಟ್ರಿ: ಗುರು ಶಿಷ್ಯರು ಚಿತ್ರದಲ್ಲಿ ಅಭಿನಯ