ಬೆಂಗಳೂರು: 2023ರಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದೆ ಸ್ಯಾಂಡಲ್‌ವುಡ್. 2024ರಲ್ಲಿ ಕೂಡ ದೊಡ್ಡ ಬಜೆಟ್ ಸಿನಿಮಾದಿಂದ ಹಿಡಿದು, ಸಣ್ಣ ಬಜೆಟ್‌ಗಳ ಸಿನಿಮಾಗಳು ಬಿಡುಗಡೆಯಾಗಲಿದೆ. 2024ರ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ ಇಲ್ಲಿದೆ.
ರಾಯಲ್
2024ರಲ್ಲಿ ಬಿಡುಗಡೆಯಾಗಲಿರುವ ಆಕ್ಷನ್-ಡ್ರಾಮಾ ಚಲನಚಿತ್ರವಾಗಿದೆ. ಸಿನಿಮಾವನ್ನು ದಿನಕರ್ ತೂಗುದೀಪ ನಿರ್ದೇಶಿಸಿದ್ದಾರೆ. ಜಯಣ್ಣ ಫಿಮ್ಸ್ ಅಡಿಯಲ್ಲಿ ನಿರ್ಮಿಸಲಾಗಿದೆ. ಚಿತ್ರದಲ್ಲಿ ವಿರಾಟ್ ಮತ್ತು ಸಂಜನಾ ಆನಂದ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸಂಕೇತ್ ಛಾಯಾಗ್ರಹಣ, ಚರಣ್ ರಾಜ್ ಸಂಗೀತವಿದೆ.
ಅದೊಂದಿತ್ತು ಕಾಲ
ನಟ ವಿನಯ್ ರಾಜಕುಮಾರ್ ಅಭಿನಯದ “ಅದೊಂದಿತ್ತು ಕಾಲ’ ಸಿನಿಮಾ ತೆರೆಗೆ ಬರಲು ತಯಾರಾಗುತ್ತಿದೆ. ಚಿತ್ರದ ಆಡಿಯೋ ಹಕ್ಕನ್ನು ಎ2 ಆಡಿಯೋ ಸಂಸ್ಥೆ ಭರ್ಜರಿ ಬೆಲೆಗೆ ಖರೀದಿಸಿದೆ. ಈ ಮೂಲಕ ಚಿತ್ರತಂಡ ಖುಷಿಯಾಗಿದೆ. 1990ರಿಂದ 2006ರವರೆಗಿನ ಕಾಲಘಟ್ಟದಲ್ಲಿ ನಡೆಯುವ ಪಯಣದ ಹೆಜ್ಜೆ ಗುರುತುಗಳು ಈ ಚಿತ್ರದಲ್ಲಿವೆ.ಭುವನ್ ಸಿನಿಮಾಸ್ ಮೂಲಕ ಸುರೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ನಾಯಕಿ ಅದಿತಿ ಪ್ರಭುದೇವ. ‘ತೊಂಭತ್ತರ ದಶಕದಲ್ಲಿನ ವಾತಾವರಣ ಹೇಗಿತ್ತು, ಈಗಿನ ಕಾಲದ ಜನಜೀವನ ಹೇಗಿದೆ ಇವೆರಡರ ಮಿಶ್ರಣವೇ ಈ ಚಿತ್ರ. ವಿನಯ್‌ರಾಜ್‌ಕುಮಾರ್ ಅವರು ಸಿನಿಮಾ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಒಬ್ಬ ವ್ಯಕ್ತಿಯೊಬ್ಬನ ಸಾಧನೆಯ ಕತೆಯಾಗಿದೆ.
ಇದನ್ನೂ ಓದಿ: Upcoming Movies 2024: 2024ರ ಬಹು ನಿರೀಕ್ಷಿತ ಬಾಲಿವುಡ್ ಚಲನಚಿತ್ರಗಳಿವು!
ಲವ್ ಲಿ
ಇದೊಂದು ಕಮರ್ಶಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದೆ. ರೌಡಿಸಂ ಕಥಾಹಂದರವನ್ನು ಹೊಂದಿದೆ. ವಸಿಷ್ಠ ಸಿಂಹ ಅವರಿಗೆ ನಾಯಕಿಯಾಗಿ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ನಟಿಸುತ್ತಿದ್ದಾರೆ. ಕೊರಿಯನ್ ವೆಬ್ ಸಿರೀಸ್, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಸ್ಟೆಫಿ ಪಟೇಲ್‌ಗೆ ಇದು ಮೊದಲ ಕನ್ನಡ ಸಿನಿಮಾ. ಮಾಸ್ಟರ್ ಆನಂದ್ ತ್ರಿ ವಂಶಿಕಾ ಕೂಡ ಲವ್ ಲಿ ಚಿತ್ರತಂಡ ಸೇರಿಕೊಂದ್ದಾರೆ. ಸುಬ್ಬುಲಕ್ಷ್ಮಿ ಸಂಸಾರ ಧಾರಾವಾಹಿ ಖ್ಯಾತಿಯ ಸಮೀಕ್ಷಾ ಲವ್ ಲಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ. ಚಿತ್ರವನ್ನು ಎಂ.ಆರ್ ರವೀಂದ್ರ ಕುಮಾರ್ ನಿರ್ಮಿಸುತ್ತಿದ್ದು, ಅಶ್ವಿನ್ ಕೆನಡಿ ಛಾಯಾಗ್ರಹಣವಿದೆ. ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಸಿನಿಮಾಕ್ಕಿದೆ.
ʻಕೆ.ಡಿ’
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಹಾಗೂ ನಿರ್ದೇಶಕ ಪ್ರೇಮ್ ಕಾಂಬಿನೇಶನ್ ಇರುವ ʻಕೆ.ಡಿ’ ಸಿನಿಮಾದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ನಟಿಸಿದ್ದಾರೆ. ಈ ಹಿಂದೆ ಚಿತ್ರತಂಡ ರವಿಚಂದ್ರನ್ ಅವರ ಲುಕ್ ಹಂಚಿಕೊಂಡಿತ್ತು. ರವಿಚಂದ್ರನ್ ಅವರ ಸಿನಿಮಾ ಫಸ್ಟ್ ಲುಕ್‌ನಲ್ಲಿ ಹಣೆಯಲ್ಲಿ ವಿಭೂತಿ, ಕಪ್ಪು ಶರ್ಟ್ ಮತ್ತು ಪ್ಯಾಂಟ್‌ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಕಥೆ 1970ರ ದಶಕದಲ್ಲಿ ಸಾಗಲಿದೆ ಎಂದು ಹೇಳಲಾಗುತ್ತಿದೆ. ಟೈಟಲ್ ಟೀಸರ್‌ನಲ್ಲಿ ಧ್ರುವ ಸರ್ಜಾ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ‘ಕೆವಿಎನ್ ಪ್ರೊಡಕ್ಷನ್ಸ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿದೆ.
ಪೆಪೆ ಸಿನಿಮಾ
ರಾಘವೇಂದ್ರ ರಾಜ್ ಕುಮಾರ್ ಮಗ ವಿನಯ್ ರಾಜ್‌ಕುಮಾರ್ (Vinay Rajkumar) ಅಭಿನಯದ ಪೆಪೆ ಸಿನಿಮಾ ಹಲವಾರು ಅಪ್‌ಡೇಟ್‌ಗಳನ್ನು ಹಂಚಕೊಂಡಿದೆ. ಶ್ರೀಲೇಶ್ ಎಸ್ ನಾಯರ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್ ಕುಂದರ್ ನಟಿಸಿದ್ದಾರೆ. ಮಯೂರ್ ಪಟೇಲ್, ಯಶ್ ಶೆಟ್ಟಿ, ಬಾಲ ರಾಜ್ ವಾಡಿ, ಮೆದಿನಿ ಕೆಳಮನೆ, ಅರುಣಾ ಬಾಲರಾಜ್, ನವೀನ್ ಡಿ ಪಡಿಲ್ ಒಳಗೊಂಡ ತಾರಾಬಳಗವಿದೆ. ‘ಪೆಪೆ’ ಚಿತ್ರಕ್ಕೆ ಅಭಿಷೇಕ್ ಜಿ ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನವಿದೆ.ಡಾ. ರವಿವರ್ಮಾ, ಚೇತನ್ ಡಿಸೋಜಾ, ಡಿಫ್ರೆಂಟ್ ಡ್ಯಾನಿ, ನರಸಿಂಹ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದ್ದಾರೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರದಲ್ಲಿ ‘ಪೆಪೆ’ ಸಿನಿಮಾವನ್ನು ಸೆರೆ ಹಿಡಿಯಲಾಗಿದೆ. ಉದಯ್ ಸಿನಿ ವೆಂಚರ್, ದೀಪ ಫಿಲಂಸ್ ಬ್ಯಾನರ್ ನಡಿ ಉದಯ್ ಶಂಕರ್ ಮತ್ತು ಶ್ರೀರಾಮ್ ಬಿ ಎಮ್ ಕೋಲಾರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: New Year 2024: ಹೊಸ ವರ್ಷ ಸ್ವಾಗತಿಸಲು ಪ್ರವಾಸಕ್ಕೆ ಹೊರಡುವಿರಾ? ಇಲ್ಲಿದೆ ಪಟ್ಟಿ!
ಗಜರಾಮ
ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರು ಅನೇಕ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಅವರ ಪುತ್ರ ರಾಜವರ್ಧನ್ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹೀರೊ ಆಗಿ ಅವರು ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿರುವ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ರತಿ ಚಿತ್ರದಲ್ಲೂ ಬೇರೆ ಬೇರೆ ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚುತ್ತಿರುವ ರಾಜವರ್ಧನ್ ಕೈಯಲ್ಲಿ ಹಲವು ಪ್ರಾಜೆಕ್ಟ್ ಗಳಿವೆ. ಅವುಗಳಲ್ಲಿ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾ ‘ಗಜರಾಮ’. ಈ ಚಿತ್ರದ ಕೆಲಸಗಳು ಭರದಿಂದ ಸಾಗಿವೆ. ಬಾಂಡ್ ರವಿ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್ ಅಡಿಯಲ್ಲಿ ನರಸಿಂಹಮೂರ್ತಿ ‘ಗಜರಾಮ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ವಾಮನ
ಶೋಕ್ದಾರ್ ಖ್ಯಾತಿಯ ಧನ್ವೀರ್ ಗೌಡ ನಟಿಸುತ್ತಿರುವ ವಾಮನ ಸಿನಿಮಾ 2024ರಲ್ಲಿ ತೆರೆಗೆ ಬರಲಿದೆ. ವಾಮನಿಗೆ ನಾಯಕಿಯಾಗಿ ಏಕ್ ಲವ್ ಯಾ ಖ್ಯಾತಿಯ ರೀಷ್ಮಾ ನಾಣಯ್ಯ (Reeshma Nanaiah) ಬಣ್ಣ ಹಚ್ಚಿದ್ದಾರೆ. ಶಂಕರ್ ರಾಮನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾವನ್ನು ಚೇತನ್ ಕುಮಾರ್ ನಿರ್ಮಾಣ ಮಾಡಿದ್ದಾರೆ.
ಲಿಲ್ಲಿ
ಲಿಲ್ಲಿ 2024 ರಲ್ಲಿ ಬಿಡುಗಡೆಯಾಗಲಿರುವ ಸಿನಿಮಾ. ವೈಜ್ಞಾನಿಕ-ಕಾಲ್ಪನಿಕ ಸಿನಿಮಾಗೆ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರದ ನಿರ್ದೇಶಕ ವಿಜಯ್ ಎಸ್ ಗೌಡ, ಎಸ್ ಸುಬ್ರಮಣಿ ಮತ್ತು ನಾಗರಾಜ್ ನಿರ್ಮಿಸಿದ್ದಾರೆ. ವೀರೇಶ್ ಗೌಡ ಸಂಗೀತ ಸಂಯೋಜಿಸಿದ್ದು, ವಿಲಿಯಂ ಡೇವಿಡ್ ಛಾಯಾಗ್ರಹಣ ನಿರ್ವಹಿಸಿದ್ದಾರೆ.
ಫೈರ್ ಫ್ಲೈ
ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ (Niveditha Shivarajkumar) ನಿರ್ಮಾಣದ ಫೈರ್ ಫ್ಲೈ ಸಿನಿಮಾ 2024ರಲ್ಲಿ ತೆರೆಗೆ ಬರಲಿದೆ. ಶ್ರೀ ಮುತ್ತು ಸಿನಿ ಸರ್ವೀಸ್‌ನಡಿ ಹೊಸಪ್ರತಿಭೆಗಳಿಗೆ ಅವಕಾಶ ನೀಡಲೆಂದು ಆರಂಭಿಸಿರುವ ಈ ನಿರ್ಮಾಣ ಸಂಸ್ಥೆಯ ಚೊಚ್ಚಲ ಕೊಡುಗೆ ಫೈರ್ ಫ್ಲೈ ಸಿನಿಮಾ. ಫೈರ್ ಫ್ಲೈʼ ಸಿನಿಮಾ ಜೂನ್ 15ರಂದು ಸೆಟ್ಟೇರಿತ್ತು. ಬೆಂಗಳೂರಿನ ಕಾಡು ಮಲ್ಲೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಸರಳವಾಗಿ ಮುಹೂರ್ತ ನೆರವೇರಿತ್ತು. ಶಿವರಾಜ್ ಕುಮಾರ್ ದಂಪತಿಯು ಮಗಳ ಚೊಚ್ಚಲ ನಿರ್ಮಾಣ ಸಿನಿಮಾಗೆ ಶುಭ ಹಾರೈಸಿದ್ದರು. ಫೈರ್ ಫ್ಲೈ ಸಿನಿಮಾವನ್ನು ಯುವ ನಟ ವಂಶಿ ನಿರ್ದೇಶನ ಮಾಡುತ್ತಿದ್ದಾರೆ. ಪೂರ್ಣ ಪ್ರಮಾಣದ ನಾಯಕರಾಗಿಯೂ ಈ ಮೂಲಕ ವಂಶಿ ಕನ್ನಡಕ್ಕೆ ಪರಿಚಯ ಆಗುತ್ತಿದ್ದಾರೆ. ಚಿತ್ರಕ್ಕೆ ಅಭಿಲಾಶ್ ಕಳತ್ತಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಕೊಡ್ತಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.