ಬೆಂಗಳೂರು: ಈ ವಾರ ಚಿತ್ರಮಂದಿರಗಳಲ್ಲಿ ಸಲ್ಮಾನ್ ಖಾನ್ ಅಭಿನಯದ ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಸಿನಿಮಾ ಬಿಡುಗಡೆಗೊಳ್ಳುತ್ತಿದೆ. ಇದರ ಜತೆ ಕನ್ನಡದ ಹಲವು ಸಿನಿಮಾಗಳು (Upcoming Movies) ಪೈಪೋಟಿ ನೀಡುತ್ತಿವೆ. ಒಟ್ಟು ಎಂಟು ಸಿನಿಮಾಗಳು ತೆರೆಗೆ ಅಪ್ಪಳಿಸಲಿವೆ. ಅವುಗಳಲ್ಲಿ ಬಿಸಿಲು ಕುದುರೆ’, ‘ಚಾಂದಿನಿ ಬಾರ್’, ‘ಇಂಗ್ಲಿಷ್ ಮಂಜ’, ‘ಮಾವು ಬೇವು’, ‘ಮಗಳೇ’, ‘ನನ್ನಾಕಿ’, ‘ನೋಡದ ಪುಟಗಳು’, ‘ರಂಜಾನ್’ ಸಿನಿಮಾಗಳು ತೆರೆಕಾಣುತ್ತಿವೆ. ಕಳೆದ ವಾರವಷ್ಟೇ ರಮೇಶ್ ಅರವಿಂದ್ ಅಭಿನಯದ `ಶಿವಾಜಿ ಸುರತ್ಕಲ್-2′ ಕಳೆದ ವಾರವಷ್ಟೇ ಬಿಡುಗಡೆಗೊಂಡಿದೆ. ಈ ಸಿನಿಮಾ ಕೂಡ ಪ್ರದರ್ಶನ ಕಾಣುತ್ತಿದೆ. ಇದೀಗ ಪ್ರೇಕ್ಷಕರಿಗೆ ಯಾವ ಸಿನಿಮಾ ನೋಡಲಿ ಬಿಡಲಿ ಎನ್ನುವ ಕುತೂಹಲ ಹೆಚ್ಚಾಗಿದೆ.
ತಮಿಳಿನ ‘ಎನ್ನೈ ಮುಗದಾನ್’, ‘ಯಾತಿಸೈ’ ಚಿತ್ರಗಳು ಏಪ್ರಿಲ್ 21ರಂದು ಬಿಡುಗಡೆ ಆಗುತ್ತಿವೆ. ತೆಲುಗಿನಲ್ಲಿ ‘ಹೆಲೋ ಮೀರಾ’, ‘ವಿರೂಪಾಕ್ಷ’ ಸಿನಿಮಾಗಳು ತೆರೆಕಾಣುತ್ತಿವೆ. ಇಂಗ್ಲಿಷ್ನ ‘ಇವಿಲ್ ಡೆಡ್ ರೈಸ್’ ಸಿನಿಮಾ ಕೂಡ ಪೈಪೋಟಿ ನೀಡುತ್ತಿದೆ.
`ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ‘ ಸಿನಿಮಾ
`ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ‘ ಸಿನಿಮಾದಲ್ಲಿ ಪೂಜಾ ಸಲ್ಮಾನ್ ಪ್ರೇಯಸಿ ಪಾತ್ರದಲ್ಲಿ ನಟಿಸಿದ್ದಾರೆ. ಪೂಜಾ ಮತ್ತವರ ಕುಟುಂಬವನ್ನು ರೌಡಿಗಳಿಂದ ರಕ್ಷಿಸಲು ಸಲ್ಮಾನ್ ರೌಡಿಗಳೊಂದಿಗೆ ಕುಸ್ತಿಯಾಡುವ ದೃಶ್ಯಗಳನ್ನು ಸಿನಿಮಾದ ಟ್ರೈಲರ್‌ನಲ್ಲಿ ನೋಡಬಹುದಾಗಿದೆ. ಫರ್ಹಾದ್ ಸಾಮ್ಜಿ ನಿರ್ದೇಶನದ ಈ ಚಿತ್ರದಲ್ಲಿ ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಶೆಹನಾಜ್ ಗಿಲ್, ಪಾಲಕ್ ತಿವಾರಿ, ವಿಜೇಂದರ್ ಸಿಂಗ್, ರಾಘವ್ ಜುಯಲ್, ಜಸ್ಸಿ ಗಿಲ್, ಭೂಮಿಕಾ ಚಾವ್ಲಾ ಮತ್ತು ಸಿದ್ಧಾರ್ಥ್ ನಿಗಮ್ ಸೇರಿ ಅನೇಕರು ನಟಿಸಿದ್ದಾರೆ.
ಇದನ್ನೂ ಓದಿ: Kannada New Movie: ಸುಚೇಂದ್ರ ಪ್ರಸಾದ್ ನಿರ್ದೇಶನದ ಮಾವು-ಬೇವು ಸಿನಿಮಾ ಮೆಚ್ಚಿದ ಕವಿ ಬಿ.ಆರ್. ಲಕ್ಷ್ಮಣರಾವ್
ಸುಚೇಂದ್ರ ಪ್ರಸಾದ್ ನಿರ್ದೇಶನದ ಮಾವು ಬೇವು
‘ಮಾವು ಬೇವು’ ಆಲ್ಬಮ್‌ನ ಗೀತೆಗಳನ್ನು ಇಟ್ಟುಕೊಂಡು ಅದಕ್ಕೆ ಹೊಂದುವ, ಸುಂದರ ಕಥಾಹಂದರ ಹೆಣೆದಿರುವ ಹಿರಿಯ ನಟ ಸುಚೇಂದ್ರ ಪ್ರಸಾದ್ (Kannada New Movie) ಅವರು ಅದೇ ಹೆಸರಿನಲ್ಲಿ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಶ್ರೀಸಾಯಿ ಗಗನ ಪ್ರೊಡಕ್ಷನ್ಸ್ ಅಡಿಯಲ್ಲಿ ಶ್ರೀ ಎಸ್. ರಾಜಶೇಖರ ಅವರ ನಿರ್ಮಾಣ ಮಾಡಿದ್ದಾರೆ. ಕೆನಡಾದಲ್ಲಿ ನೆಲೆಸಿರುವ ದೀಪಕ್ ಪರಮಶಿವಯ್ಯ ಅವರು ಚಿತ್ರದಲ್ಲಿ ಪುಟ್ಟ ಪಾತ್ರ ಮಾಡುವುದರ ಜತೆಗೆ ಸಂಗೀತ ಸಂಯೋಜನೆ ಕೂಡ ಮಾಡಿದ್ದಾರೆ. ನಾಗರಾಜ ಆದ್ವಾನಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಎರಡು ತಾಸಿಗಿಂತ ಕೊಂಚ ಹೆಚ್ಚಿರುವ ಈ ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ಗಾಯಕಿ ಚೈತ್ರಾ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಡ್ಯಾನಿ ಕುಟ್ಟಪ್ಪ ಪ್ರಮುಖ ಪಾತ್ರದಲ್ಲಿದ್ದು, ನೀನಾಸಂ ಸಂದೀಪ್, ಗಾಯಕಿ ಚೈತ್ರಾ, ಸುಪ್ರಿಯಾ ಎಸ್.ರಾವ್, ರಂಜಿತಾ, ಸಿತಾರ ಚಕ್ರವರ್ತಿ, ರಂಜನ್ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.