Site icon Vistara News

Upcoming Movies 2023: ಸೆಪ್ಟೆಂಬರ್‌ನಲ್ಲಿ ಜವಾನ್‌, ಸಲಾರ್‌ಗೆ ಪೈಪೋಟಿ ಕೊಡಲಿರುವ ಸಿನಿಮಾಗಳ ಪಟ್ಟಿ!

upcoming movies

ಸೆಪ್ಟೆಂಬರ್‌ ತಿಂಗಳಿನಲ್ಲಿ ಬಾಲಿವುಡ್‌ ಸೇರಿದಂತೆ (Upcoming Movies 2023) ಸೌತ್‌ ಚಿತ್ರರಂಗದಲ್ಲಿಯೂ ಹಲವು ಸಿನಿಮಾಗಳು ತೆರೆ ಕಾಣುತ್ತಿದೆ. ಖುಷಿ, ಜವಾನ್, ಜಾನೇ ಜಾನ್, ಸಲಾರ್, ಮತ್ತು ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ ಸೇರಿದಂತೆ ಹಲವಾರು ಚಿತ್ರಗಳು ಸೆಪ್ಟೆಂಬರ್‌ನಲ್ಲಿ ತೆರೆಕಾಣಲಿವೆ.

ಜವಾನ್

ಸೆಪ್ಟೆಂಬರ್ 7 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರಮಂದಿರಗಳಿಗೆ ಲಗ್ಗೆ ಇಡಲು ಸಿದ್ಧವಾಗಿದೆ. ಈ ಚಿತ್ರವನ್ನು ತಮಿಳು ನಿರ್ದೇಶಕ ಅಟ್ಲಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ, ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ರಿಧಿ ಡೋಗ್ರಾ ಮತ್ತು ಸುನಿಲ್ ಗ್ರೋವರ್ ಕೂಡ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ. ಜವಾನ್‌ನಲ್ಲಿ ಶಾರುಖ್ ಖಾನ್ ಅವರ ಜೈಲರ್ ಪಾತ್ರಕ್ಕೆ ಆಜಾದ್ ಎಂದು ಹೆಸರಿಡಲಾಗಿದೆ.‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಸಂಸ್ಥೆಯಡಿ ಗೌರಿ ಖಾನ್ ನಿರ್ಮಿಸುತ್ತಿದ್ದು, ಅಟ್ಲೀ ನಿರ್ದೇಶನದಲ್ಲಿ ಮೂಡಿಬಂದಿದೆ. ಚಿತ್ರದ ಮ್ಯೂಸಿಕ್‌ ರೈಟ್ಸ್‌ ಈಗಾಗಲೇ 36 ಕೋಟಿ ರೂ.ಗೆ ಮಾರಾಟವಾಗಿದೆ ಎಂದು ವರದಿಯಾಗಿದೆ.ಜವಾನ್‌ ಟ್ರೈಲರ್‌ನಲ್ಲಿ ಶಾರುಖ್ ಖಾನ್ ಪವರ್‌ಫುಲ್ ಡೈಲಾಗ್ ಕೇಳಿ ಫ್ಯಾನ್ಸ್ ಖುಷ್ ಆಗಿದ್ದಾರೆ.

ಇದನ್ನೂ ಓದಿ: Jawan Trailer: ಆಲಿಯಾ ಭಟ್‌ಗಾಗಿ ಬೇಡಿಕೆ ಇಟ್ಟ ವಿಲನ್‌ ಶಾರುಖ್‌; ʻಜವಾನ್‌ʼ ಖಡಕ್‌ ಡೈಲಾಗ್‌ಗೆ ಫ್ಯಾನ್ಸ್‌ ಫಿದಾ!

ಖುಷಿ

ಸಮಂತಾ ರುತ್ ಪ್ರಭು (Samantha) ಮತ್ತು ವಿಜಯ್ ದೇವರಕೊಂಡ (Vijay Devarakonda) ಕಾಂಬಿನೇಶನ್‌ ಸಿನಿಮಾವಾದ ಖುಷಿ ಸಿನಿಮಾ ಸೆಪ್ಟೆಂಬರ್‌ 1ರಂದು ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಿದೆ. 2018ರ ಮಹಾನಟಿ ಚಿತ್ರದ ನಂತರ ವಿಜಯ್‌ ಹಾಗೂ ಸ್ಯಾಮ್‌ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಖುಷಿ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸುತ್ತಿದ್ದಾರೆ. 

ಸಲಾರ್‌

ಆದಿಪುರುಷ’ ಚಿತ್ರದ ಸೋಲಿನ ನಂತರ, ಪ್ರಭಾಸ್ (Actor Prabhas) ತಮ್ಮ ಮುಂಬರುವ ಬಿಗ್-ಬಜೆಟ್ ಚಿತ್ರ ‘ಸಲಾರ್‌’ (Salaar Movie) ಮೇಲೆ ತಮ್ಮ ಭರವಸೆಯನ್ನು ಇಟ್ಟುಕೊಂಡಿದ್ದಾರೆ. ‘ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ 2023ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವು ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಸೆಪ್ಟೆಂಬರ್ 28 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಸಲಾರ್ ನಿರ್ಮಾಪಕರು ಚಿತ್ರದ ಇಂಗ್ಲಿಷ್ ಆವೃತ್ತಿಯನ್ನು ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ ಎಂತಲೂ ವರದಿಯಾಗಿದೆ.

ಜಾನೆ ಜಾನ್

ಕರೀನಾ ಕಪೂರ್ ಅಭಿನಯದ ಜಾನೆ ಜಾನ್ ಅವರ ಹುಟ್ಟುಹಬ್ಬ ಸೆಪ್ಟೆಂಬರ್ 21 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಸುಜೋಯ್ ಘೋಷ್ ನಿರ್ದೇಶನದ ಈ ಚಿತ್ರವು ಕೊಲೆ ರಹಸ್ಯದ ಸುತ್ತ ಸುತ್ತಲಿದೆ. ಚಿತ್ರದಲ್ಲಿ ವಿಜಯ್ ವರ್ಮಾ ಮತ್ತು ಜೈದೀಪ್ ಅಹ್ಲಾವತ್ ಕರೀನಾಗೆ ಸಾಥ್ ನೀಡಿದ್ದಾರೆ.

ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ

ಜರಾ ಹಟ್ಕೆ ಜರಾ ಬಚ್ಕೆ ಚಿತ್ರದ ಯಶಸ್ಸಿನ ನಂತರ, ವಿಕ್ಕಿ ಕೌಶಲ್ ಮತ್ತೊಂದು ಕೌಟುಂಬಿಕ ಡ್ರಾಮ ಸಿನಿಮಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಬೆಂಬಲಿತ, ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ, ಮಾನುಷಿ ಚಿಲ್ಲರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ ಚಿತ್ರ ಸೆಪ್ಟೆಂಬರ್ 22ರಂದು ಚಿತ್ರಮಂದಿರಗಳಿಗೆ ಬರಲಿದೆ.

ದಿ ವ್ಯಾಕ್ಸಿನ್ ವಾರ್

 ದಿಕಾಶ್ಮೀರ್ ಫೈಲ್ಸ್’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿರುವ ವಿವೇಕ್ ಅಗ್ನಿಹೋತ್ರಿ ‘ದಿ ವ್ಯಾಕ್ಸಿನ್ ವಾರ್’ ಎಂಬ ಬಹುನಿರೀಕ್ಷಿತ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ವಿವೇಕ್ ಅಗ್ನಿಹೋತ್ರಿ ಅವರ ದಿ ವ್ಯಾಕ್ಸಿನ್ ವಾರ್ ಸೆಪ್ಟೆಂಬರ್ 28 ರಂದು ಥಿಯೇಟರ್‌ಗಳಿಗೆ ಬರಲಿದೆ. ಚಿತ್ರದಲ್ಲಿ ನಾನಾ ಪಾಟೇಕರ್, ಅನುಪಮ್ ಖೇರ್ ಮತ್ತು ಪಲ್ಲವಿ ಜೋಶಿ ಕಾಣಿಸಿಕೊಂಡಿದ್ದಾರೆ.

ಹಡ್ಡಿ

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ನಟಿಸಿರಿವ ಹಡ್ಡಿ ಸೆಪ್ಟೆಂಬರ್ 7 ರಂದು ZEE5 ನಲ್ಲಿ ಪ್ರೀಮಿಯರ್ ಆಗಲಿದೆ.  ಈ ಸಿನಿಮಾದಲ್ಲಿ ನವಾಜುದ್ದೀನ್ ಸಿದ್ದಿಕಿ ಮಂಗಳಮುಖಿಯ ಪಾತ್ರ ಮಾಡಿದ್ದಾರೆ.ಸಿನಿಮಾಗೆ ಅಕ್ಷತ್ ಅಜಯ್ ಶರ್ಮಾ ನಿರ್ದೇಶನವಿದೆ. ಹಡ್ಡಿ ಚಿತ್ರದಲ್ಲಿ ಅನುರಾಗ್ ಕಶ್ಯಪ್, ಇಲಾ ಅರುಣ್, ಮೊಹಮ್ಮದ್ ಜೀಶನ್ ಅಯೂಬ್, ಸೌರಭ್ ಸಚ್‌ದೇವ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಇದನ್ನೂ ಓದಿ: Jawan Box Office Day 1: ʻಜವಾನ್‌ʼ ಟ್ರೈಲರ್‌ ಔಟ್‌; ಫಸ್ಟ್‌ ಡೇ ಕಲೆಕ್ಷನ್‌ ಬಗ್ಗೆ ವಿಶ್ಲೇಷಕರ ಲೆಕ್ಕಾಚಾರ ಏನು?

ಸುಖಿ

ಶಿಲ್ಪಾ ಶೆಟ್ಟಿ ಅಭಿನಯದ “ಸುಖೀ” ಸೆಪ್ಟೆಂಬರ್ 22ರಂದು ತೆರೆಗೆ ಬರಲಿದೆ. “ಫನ್ ಎಂಟರ್‌ಟೈನರ್” ಎಂದು ಬಿಂಬಿಸಲಾದ ಮುಂಬರುವ ಚಲನಚಿತ್ರವನ್ನು ಮೊದಲ ಬಾರಿಗೆ ಚಲನಚಿತ್ರ ನಿರ್ಮಾಪಕ ಸೋನಾಲ್ ಜೋಶಿ ನಿರ್ದೇಶಿಸಿದ್ದಾರೆ. ಟಿ-ಸೀರೀಸ್ ಮತ್ತು ಅಬುಂಡಾಂಟಿಯಾ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ.
ಚಿತ್ರದಲ್ಲಿ, ಶಿಲ್ಪಾ ಶೆಟ್ಟಿ ಜೊತೆಗೆ ಕುಶಾ ಕಪಿಲಾ, ದಿಲ್ನಾಜ್ ಇರಾನಿ, ಪಾವ್ಲೀನ್ ಗುಜ್ರಾಲ್, ಚೈತನ್ಯ ಚೌಧರಿ ಮತ್ತು ಅಮಿತ್ ಸಾಧ್ ಕೂಡ ನಟಿಸಿದ್ದಾರೆ.

Exit mobile version