Site icon Vistara News

Upcoming Movies | ಈ ವಾರ ಬಿಡುಗಡೆಯಾಗುತ್ತಿರುವ ಸಿನಿಮಾಗಳಿವು!

Upcoming Movies

ಬೆಂಗಳೂರು : ಈ ವಾರ ಕನ್ನಡದಲ್ಲಿ ಎಂಟು ಚಿತ್ರಗಳು ತೆರೆಗೆ (Upcoming Movies) ಅಪ್ಪಳಿಸಲಿವೆ. ‘ಆವರ್ಥ’, ‘ಅಬ್ಬರ’, ‘ಮಠ’, ‘ಖಾಸಗಿ ಪುಟಗಳು’, ‘ಧಮ್’, ‘ಭಾಗ್ಯವಂತರು’, ‘ದಿ ಫಿಲ್ಮ್ ಮೇಕರ್’, ‘ಕುಳ್ಳನ ಹೆಂಡತಿ’ ಹೀಗೆ ಒಟ್ಟು 8 ಸಿನಿಮಾಗಳು ಪ್ರೇಕ್ಷಕರ ಮುಂದೆ ಬರುತ್ತಿದೆ. ಈಗಾಗಲೇ ಥಿಯೇಟರ್‌ಗಳಲ್ಲಿ ‘ಕಾಂತಾರ’, ‘ಗಂಧದ ಗುಡಿ’ ಸೇರಿದಂತೆ ಸಾಕಷ್ಟು ಸಿನಿಮಾಗಳು ಭರ್ಜರಿ ಪ್ರದರ್ಶನ ಕಾಣುತ್ತಿವೆ. ಅದರ ಜತೆಗೆ ಈ ವಾರ ಮತ್ತಷ್ಟು ಸಿನಿಮಾಗಳು ಬೆಳ್ಳಿ ಪರದೆ ಮೇಲೆ ಅಪ್ಪಳಿಸುತ್ತಿವೆ.

ಪ್ರಜ್ವಲ್‌ ದೇವರಾಜ್‌ ನಟನೆಯ ʻಅಬ್ಬರʼ ಸಿನಿಮಾವನ್ನು ರಾಮ್‌ ನಾರಾಯಣ್‌ ನಿರ್ದೇಶನ ಮಾಡಿದ್ದಾರೆ. ಈ ವಾರ ವಿಶೇಷ ಅಂದರೆ ನಟ ಶಂಕರ್‌ ನಾಗ್‌ ಅಭಿನಯದ ʻಎಸ್‌.ಪಿ.ಸಾಗ್ಲಿಯಾನ-2ʼ ಚಿತ್ರ ರೀ ರೀಲಿಸ್‌ ಆಗುತ್ತಿದೆ. ಬಾಲಿವುಡ್‌ನಲ್ಲಿ ಸೂಪರ್‌ ಹಿಟ್‌ ʻದೃಶ್ಯಂ-2ʼ ಸೀಕ್ವೆಕ್‌ ಈ ವಾರ ತೆರೆಗೆ ಬರುತ್ತಿದೆ. ಅಜಯ್‌ ದೇವಗನ್‌ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ʻಮಿಸ್ಟರ್‌ ಮಮ್ಮಿʼ ಕೂಡ ಬಿಡುಗಡೆಗೊಳ್ಳುತ್ತಿದೆ.

ಇದನ್ನೂ ಓದಿ | Kantara Movie | ಕಟೀಲು ದೇಗುಲಕ್ಕೆ ಸಪ್ತಮಿ ಗೌಡ ಭೇಟಿ; ತುಳು ಸಿನಿಮಾದಲ್ಲಿ ನಟಿಸಲೂ ರೆಡಿ ಎಂದ ನಟಿ

ಟಾಲಿವುಡ್‌ನಲ್ಲಿ ʻಗಾಲೋಡುʼ, ʻಮಸೂದʼ,ʻ ಅಲಿಪಿರಿಕಿ ಅಲ್ಲಂಟ ದೂರಂʼ, ʻಸೀತಾಪುರಂಲೋʼ, ʻಪ್ಲೇʼ, ʻಬೆಸ್ಟ್ ಕಪಲ್ʼ, ʻಭಾರತ ಪುತ್ರುಲುʼ, ʻಬಾದ್‌ಶಾʼ ಚಿತ್ರ ಬಿಡುಗಡೆಯಾಗುತ್ತಿವೆ. ತಮಿಳಿನಲ್ಲಿ ʻʻಕಳಗ ತಲೈವನ್‌, ಯುಗಿʼಹೀಗೆ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಕನ್ನಡ, ತೆಲುಗು, ತಮಿಳಿನಲ್ಲಿ ಈ ವಾರ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬರುತ್ತಿಲ್ಲ.

ಇದನ್ನೂ ಓದಿ | Kannada New Film | ಹೊಸ ಸಿನಿಮಾ ಅನೌನ್ಸ್‌ ಮಾಡಿದ ನಟ ರಿಷಿ: ಪ್ರಶಾಂತ್ ರಾಜಪ್ಪ ಆ್ಯಕ್ಷನ್‌ ಕಟ್‌!

Exit mobile version