Site icon Vistara News

Upendra Birthday | ಫ್ಯಾನ್ಸ್ ತಲೆಗೆ ಕೆಲಸ ಕೊಟ್ರು ಉಪೇಂದ್ರ: ವಿಚಾರವಂತರಾಗೋಣ ಅಂದಿದ್ಯಾಕೆ?

Upendra Birthday

ಬೆಂಗಳೂರು: ಸೆಪ್ಟೆಂಬರ್‌ 18ಕ್ಕೆ ರಿಯಲ್‌ ಸ್ಟಾರ್‌ ಉಪೇಂದ್ರ ಜನುಮದಿನ (Upendra Birthday). ನಟ ಉಪೇಂದ್ರ ತಮ್ಮ ಅಭಿಮಾನಿಗಳ ಜತೆಗೆ ಹೊಸ ರೀತಿಯಲ್ಲಿ ಹುಟ್ಟು ಹಬ್ಬವನ್ನು ಆಚರಿಸಕೊಳ್ಳಲು ಮುಂದಾಗಿದ್ದಾರೆ. ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಬಾರಿ ಕೇಕ್, ಹಾರದ ಬದಲು ವಿಶೇಷವಾದ ಗಿಫ್ಟ್ ಒಂದನ್ನು ಅಭಿಮಾನಿಗಳಲ್ಲಿ ಅವರು ಕೇಳಿದ್ದಾರೆ. ಒಂದು ಹಾಳೆಯಲ್ಲಿ 18 ಪದಗಳನ್ನು ಮೀರದಂತೆ ಏನಾದರೂ ಒಂದು ಉತ್ತಮ ವಿಚಾರವನ್ನು ಬರೆದು ತರುತ್ತೀರಾ ಎಂದು ಟ್ವೀಟ್‌ ಮೂಲಕ ಉಪೇಂದ್ರ ಮನವಿ ಮಾಡಿದ್ದಾರೆ.

ಉಪ್ಪಿ ಬರ್ತ್‌ಡೇ ಟಾಸ್ಕ್‌!
ʻʻಸೆ. 18 ಅಭಿಮಾನಿಗಳ ದಿನದಂದು ನಿಮ್ಮನ್ನು ನಮ್ಮ ಮನೆಯಲ್ಲಿ ಭೇಟಿಯಾಗುತ್ತೇನೆ. ಆ ದಿನ ಕೇಕ್, ಹೂಗುಚ್ಛ ಗಿಫ್ಟ್ ಎಲ್ಲಾ ಬಿಟ್ಟು ಒಂದು ಹಾಳೆಯಲ್ಲಿ 18 ಪದಗಳನ್ನು ಮೀರದಂತೆ ಏನಾದರೂ ಒಂದು ಉತ್ತಮ ವಿಚಾರವನ್ನು ಬರೆದು ತರುತ್ತೀರಾ? ಅತ್ಯುತ್ತಮವಾದ 18 ಬರವಣಿಗೆಗೆ ಸೂಕ್ತ ಬಹುಮಾನವಿರುತ್ತದೆʼʼ ಎಂದು ಉಪೇಂದ್ರ ಬರೆದುಕೊಂಡಿದ್ದಾರೆ.

ಈ ಬಾರಿಯ ಉಪೇಂದ್ರ ಜನುಮದಿನ ಅತ್ಯಂತ ವಿಶೇಷವಾಗಿ ಇರಲಿದೆ. ತಾವು ನಿರೀಕ್ಷೆ ಮಾಡಿರುವ ಉಡುಗೊರೆಯನ್ನು ಅಭಿಮಾನಿಗಳು ಮರೆಯದೇ ತರುತ್ತಾರೆ ಎನ್ನುವ ಆಕಾಂಕ್ಷೆಯಲ್ಲಿ ಅವರಿದ್ದಾರೆ.

ಇದನ್ನೂ ಓದಿ | UI : ಬುದ್ಧಿಯ ಬಿರುಗಾಳಿಯತ್ತ ರಿಯಲ್‌ ಸ್ಟಾರ್‌ ಉಪೇಂದ್ರ

ಭರದಿಂದ ಸಾಗುತ್ತಿದೆ ʻಯುಐʼ ಚಿತ್ರದ ಶೂಟಿಂಗ್
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದಲ್ಲಿ ‘ಯುಐ’ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಸುಮಾರು 7 ವರ್ಷಗಳ ನಂತರ ಉಪೇಂದ್ರ ನಿರ್ದೇಶನಕ್ಕೆ ಇಳಿದಿದ್ದು, ಎರಡು ಸೂಪರ್ ಹಿಟ್ ಚಿತ್ರಗಳನ್ನು ಇಂಡಸ್ಟ್ರಿಗೆ ಕೊಟ್ಟ ಕೆ.ಪಿ. ಶ್ರೀಕಾಂತ್ ಉಪ್ಪಿಯ ಹೊಸ ಕನಸಿಗೆ ಸಾಥ್ ನೀಡಿದ್ದಾರೆ. ಜನರಿಗೆ ಮನರಂಜನೆ ನೀಡಲು ಈ ಜೋಡಿ ಸಿದ್ದವಾಗಿದೆ. ಈ ಹಿಂದೆ ಹತ್ತು ಚಿತ್ರಗಳ ನಿರ್ದೇಶನ ಮಾಡಿದ್ದಾರೆ ರಿಯಲ್ ಸ್ಟಾರ್. ಇದು ಅವರ ಡೈರೆಕ್ಷನ್‌ನಲ್ಲಿ ಮೂಡಿಬರಲಿರುವ 11ನೇ ಚಿತ್ರವಾಗಿದೆ.

‘ಯುಐ’ ಚಿತ್ರದಲ್ಲಿ ಬಹುಭಾಷಾ ಕಲಾವಿದ ಮುರಳಿಕೃಷ್ಣ, ನಿಧಿ ಸುಬ್ಬಯ್ಯ, ನಿರ್ದೇಶಕ ಇಂದ್ರಜಿತ್ ಲಂಕೇಶ್, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ, ನಿರ್ಮಾಪಕ ಉಮೇಶ್ ಬಣಕಾರ್, ನಿರ್ದೇಶಕ ಓಂ ಸಾಯಿಪ್ರಕಾಶ್ ನಟಿಸುತ್ತಿದ್ದಾರೆ.

ಇದನ್ನೂ ಓದಿ | Namma Hudugaru Movie | ರಿಯಲ್ ಸ್ಟಾರ್ ಉಪೇಂದ್ರ ಕುಟುಂಬದ ಕುಡಿ ಗಾಂಧಿನಗರಕ್ಕೆ ಎಂಟ್ರಿ

Exit mobile version