ಬೆಂಗಳೂರು : 1998ರ ಜನವರಿ 16ರಂದು ತೆರೆ ಕಂಡ ರಿಯಲ್ ಸ್ಟಾರ್ ಉಪೇಂದ್ರ (Upendra ) ಅಭಿನಯದ ʻಎʼ ಸಿನಿಮಾ ಈಗ 25 ವರ್ಷ ಪೂರ್ಣಗೊಳಿಸಿದೆ. ಈ ಸಿನಿಮಾ ಮೂಲಕ ಉಪೇಂದ್ರ ಅವರು ನಟ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಉಪೇಂದ್ರ ನಾಯಕರಾಗಿ 25 ವರ್ಷ ಪೂರ್ಣಗೊಳಿಸಿದ್ದಾರೆ.
ಉಪ್ಪಿ ಎಂಟರ್ಟೈನರ್ಸ್ ಮೂಲಕ ʻಎʼ ಸಿನಿಮಾ ಮೂಡಿಬಂದಿತ್ತು. ಕೋಟಿ ಬಜೆಟ್‌ನಲ್ಲಿ ಸಿದ್ಧವಾದ ಈ ಸಿನಿಮಾ 20 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿತ್ತು. ಈ ಸಿನಿಮಾದ ಮಾರಿ ಕಣ್ಣು ಮೊದಲಾದ ಹಾಡುಗಳು ಹಿಟ್ ಆದವು. ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದರು. ಈ ಚಿತ್ರದಲ್ಲಿ ಉಪ್ಪಿ ಜತೆಯಾಗಿ ಚಾಂದಿನಿ ಮೊದಲಾದವರು ನಟಿಸಿದ್ದರು. ಈ ಸಿನಿಮಾ ಸೈಕಾಲಾಜಿಕಲ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿತ್ತು.
ಇದು ಚಲನಚಿತ್ರ ನಿರ್ದೇಶಕ ಮತ್ತು ನಟಿಯ ನಡುವಿನ ಪ್ರೇಮಕಥೆಯನ್ನು ಹೇಳುತ್ತದೆ. ಇದನ್ನು ಫ್ಲ್ಯಾಷ್‌ಬ್ಯಾಕ್ ಮತ್ತು ರಿವರ್ಸ್ ಸ್ಕ್ರೀನ್‌ಪ್ಲೇಯೊಳಗೆ ನಿರೂಪಿಸಲಾಗಿದೆ. ಚಿತ್ರವು ಕಾಸ್ಟಿಂಗ್ ಕೌಚ್‌ನಂತಹ ಚಲನಚಿತ್ರ ಪ್ರಪಂಚದ ಕರಾಳ ಸತ್ಯಗಳೊಂದಿಗೆ ಕಥೆಯಿದೆ. ಕೆಲವು ಪ್ರೇಕ್ಷಕರು ಕಥೆಯನ್ನು ಅರ್ಥಮಾಡಿಕೊಳ್ಳಲು ಅದನ್ನು ಹಲವಾರು ಬಾರಿ ಸಿನಿಮಾವನ್ನು ವೀಕ್ಷಿಸಿದ್ದಾರೆ. ಚಿತ್ರವನ್ನು ತೆಲುಗಿಗೆ ಡಬ್ ಮಾಡಿ ಆಂಧ್ರಪ್ರದೇಶದಲ್ಲಿ ಬಿಡುಗಡೆ ಮಾಡಲಾಯಿತು. ಈ ಚಲನಚಿತ್ರವನ್ನು ತಮಿಳಿನಲ್ಲಿ ʻಅಡವಾಡಿʼ ಎಂದು ಮರುನಿರ್ಮಾಣ ಮಾಡಲಾಯಿತು. ಸಂಗೀತ ನಿರ್ದೇಶಕರಾಗಿ ಗುರುಕಿರಣ್ ಅವರ ಮೊದಲ ಚಿತ್ರ. ಉದಯ ಫಿಲ್ಮ್ಸ್ ಅವಾರ್ಡ್‌ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಉಪೇಂದ್ರ ಪಡೆದುಕೊಂಡರೆ, ಅತ್ಯುತ್ತಮ ಸಂಗೀತ ನಿರ್ದೇಶಕ (1998) ಪ್ರಶಸ್ತಿಯನ್ನು ಗರುಕಿರಣ್ ಪಡೆದರು.
ಇದನ್ನೂ ಓದಿ | Priyanka Upendra | ʻಪ್ರಜೆಯೇ ಪ್ರಭು’ ಎಂದು ಪ್ರಜಾಕೀಯಕ್ಕೆ ಸಾಥ್ ಕೊಟ್ರಾ ಪ್ರಿಯಾಂಕಾ ಉಪೇಂದ್ರ?
ವರ್ಷಗಳ ನಂತರ ನಿರ್ದೇಶನದತ್ತ ಮುಖ ಮಾಡಿರುವ ಉಪ್ಪಿ
ಯುಐ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದ್ದು, ಉಪ್ಪಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವರ್ಷಗಳ ನಂತರ ನಿರ್ದೇಶನದತ್ತ ಮುಖ ಮಾಡಿರುವ ಉಪ್ಪಿ, ಜತೆಗೆ ಈ ಚಿತ್ರದಲ್ಲಿ ಯುವ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಉಪ್ಪಿ ಕ್ಯಾಪ್ ಹಾಕಿ, ಮೈಕ್ ಹಿಡಿದು ನಿರ್ದೇಶನಕ್ಕೆ ಇಳಿದಿದ್ದು, ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಇತಿಹಾಸ ಮರುಕಳಿಸಲಿದೆಯಾ ಎಂದು ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.
ʻತರ್ಲೆ ನನ್ಮಗʼ, ʻಆಪರೇಷನ್ ಅಂತʼ, ʻಶ್ʼ..!, ʻಓಂʼ, ʻಉಪ್ಪಿ-2ʼ, ʻಸೂಪರ್ʼ ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ʻಉಪ್ಪಿ 2ʼ ನಂತರ ಬುದ್ಧಿವಂತನ ನಿರ್ದೇಶನದಲ್ಲಿ ಯಾವ ಸಿನಿಮಾ ಕೂಡ ತೆರೆಗೆ ಬರಲಿಲ್ಲ. ಅದ್ಧೂರಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.
ಇದನ್ನೂ ಓದಿ | Sunny Leone | ಉಪೇಂದ್ರ ಸಿನಿಮಾದ ʻಯುಐʼನಲ್ಲಿ ನಟಿಸುತ್ತಿದ್ದಾರಾ ಸನ್ನಿ ಲಿಯೋನ್?