ಬೆಂಗಳೂರು: ಬಾಲಿವುಡ್ನ ಕಾಂಟ್ರೋವರ್ಸಿಯಲ್ ಕ್ವೀನ್ ಹಾಗೂ ಹಿಂದಿ ಬಿಗ್ ಬಾಸ್ OTT ಸೀಸನ್ 1ರ ಸ್ಪರ್ಧಿ ಉರ್ಫಿ ಜಾವೇದ್ (Urfi Javed) ತಮ್ಮ ಉಡುಗೆಗಳಿಂದಲೇ ಸದ್ದು ಮಾಡುತ್ತಿರುತ್ತಾರೆ. ಈಗಾಗಲೇ ಉರ್ಫಿ ತುಂಡು ಬಟ್ಟೆಯ ವಿಚಾರಕ್ಕಾಗಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ಯುಟ್ಯೂಬರ್, ಕಂಟೆಂಟ್ ಕ್ರಿಯೇಟರ್ ಆಗಿರುವ ಹಿಂದೂಸ್ತಾನಿ ಭಾವು ಈಗ ಉರ್ಫಿ ಜಾವೇದ್ ಬಗ್ಗೆ ಮಾತನಾಡಿದ್ದಾರೆ.
ವಿಡಿಯೊದಲ್ಲಿ ಉರ್ಫಿ ಜಾವೇದ್ ಕುರಿತು ಹಿಂದೂಸ್ತಾನಿ ಭಾವು ʻʻಉರ್ಫಿ ತುಂಡು ಬಟ್ಟೆ ಹಾಕುವುದನ್ನು ನಿಲ್ಲಿಸಬೇಕು. ಇದು ಭಾರತದ ಸಂಸ್ಕೃತಿಗೆ ವಿರುದ್ಧವಾಗಿದೆ. ಅವರು ಸುಧಾರಿಸದೇ ಇದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದುʼʼ ಎಂದು ಹೇಳಿದ್ದಾರೆ. ಈ ಬಗ್ಗೆ ಉರ್ಫಿ ಜಾವೇದ್ ಗರಂ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ʻʻನೀವು ನಿಮ್ಮ ಬೈಗುಳದಿಂದ ಎಷ್ಟು ಜನರು ಸುಧಾರಿಸಿದ್ದಾರೆ? ನೀವು ನನಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದೀರಿ. ನಿಮ್ಮನ್ನು ನಾನು ಜೈಲಿಗೆ ಕಳುಹಿಸಬಲ್ಲೆʼʼಎಂದು ಉರ್ಫಿ ವಾರ್ನಿಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ | Urfi Javed | ʻಅತ್ಯಾಚಾರಿಗಳ ಮೇಲೆ ದೂರು ನೀಡಿ, ನನ್ನ ಮೇಲಲ್ಲʼ: ಉರ್ಫಿ ಜಾವೇದ್ ಗರಂ ಆಗಿದ್ಯಾಕೆ?
ಉರ್ಫಿ ಮೇಲೆ ಕೇಸ್!
ಈ ಹಿಂದೆ ಅಷ್ಟೇ ಉರ್ಫಿ ಜಾವೇದ್ ಮುಂಬೈ ಬೀದಿಯಲ್ಲಿ ಬಿಕಿನಿ ಧರಿಸಿ ಓಡಾಡಿದರು ಎನ್ನುವ ಕಾರಣಕ್ಕಾಗಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ವಿಷಯ ಗೊತ್ತಾಗುತ್ತಿದ್ದಂತೆ ಉರ್ಫಿ ಜಾವೇದ್ ಗರಂ ಆಗಿದ್ದರು. ʻನನ್ನ ದೇಹ, ನನ್ನ ಇಷ್ಟ. ಅತ್ಯಾಚಾರಿಗಳ ಮೇಲೆ ದೂರು ನೀಡಿ, ನನ್ನ ಮೇಲಲ್ಲʼ ಎಂದು ದೂರು ನೀಡಿದವರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.
ಇದನ್ನೂ ಓದಿ | Urfi Javed | ಉರ್ಫಿ ಜಾವೇದ್ ವಿರುದ್ಧ ದೂರು ದಾಖಲು: ಮಾದಕ ಡ್ಯಾನ್ಸ್ ವಿಡಿಯೊ ವೈರಲ್!