ಬೆಂಗಳೂರು: ಫ್ಯಾಷನ್ ಐಕಾನ್, ಬಿಗ್ ಬಾಸ್ ಖ್ಯಾತಿಯ ಉರ್ಫಿ ಜಾವೇದ್ (Urfi Javed) ಯಾವಾಗಲೂ ತಮ್ಮ ಬಟ್ಟೆ ವಿಚಾರವಾಗಿ ಟ್ರೋಲ್ಗೆ ಗುರಿಯಾಗುತ್ತಲೇ ಇರುತ್ತಾರೆ. ಆದರೆ ಇದೀಗ ನಟಿ ತನ್ನ ಬಟ್ಟೆಗಳಿಂದ ಜನರ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಬೇಸತ್ತು ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.
ಕೆಲವು ಬಾಲಿವುಡ್ ಸೆಲೆಬ್ರಿಟಿಗಳು ನಟಿಯ ಫ್ಯಾಷನ್ ಸೆನ್ಸ್ ಕುರಿತು ಶ್ಲಾಘಿಸಿದ ಸಂದರ್ಭಗಳಿವೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಲಿವುಡ್ ತಾರೆ ಕರೀನಾ ಕಪೂರ್ (Kareena Kapoor) ಅವರು ಉರ್ಫಿ ಜಾವೇದ್ ಅವರನ್ನು ಹೊಗಳಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಉರ್ಫಿ ಈ ರೀತಿ ಟ್ವೀಟ್ ಮಾಡಿದ್ದಾರೆ.
ಉರ್ಫಿ ಟ್ವೀಟ್ನಲ್ಲಿ ʻʻನಾನು ಧರಿಸುವ ಬಟ್ಟೆಗಳಿಂದ ಪ್ರತಿಯೊಬ್ಬರ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಇಂದಿನಿಂದ ನೀವು ಬದಲಾದ ಉರ್ಫಿಯನ್ನು ನೋಡುತ್ತೀರಿ. ಬದಲಾದ ಬಟ್ಟೆʼʼಎಂದು ಬರೆದುಕೊಂಡಿದ್ದಾರೆ. . ಉರ್ಫಿ ಜಾವೇದ್ ಅವರ ಟ್ವೀಟ್ ನಂತರ ನೆಟಿಜನ್ಗಳು ಗೊಂದಲಕ್ಕೊಳಗಾದರು ಮತ್ತು ಕೆಲವು ಅಭಿಮಾನಿಗಳು ʻʻನೀವು ಬದಲಾಗಬೇಡಿʼʼ ಎಂದು ಒತ್ತಾಯಿಸಿದರು. ಆದರೂ ಕೆಲವು ಬಳಕೆದಾರರು ʻಇದು ಏಪ್ರಿಲ್ ಫೂಲ್ʼʼಇರಬೇಕು ಎಂದು ಊಹಿಸಿದ್ದಾರೆ.
ಉರ್ಫಿ ಮೊದಲ ಟ್ವೀಟ್
ಈಗಾಗಲೇ ಉರ್ಫಿ ಅವರಿಗೆ ಹಲವು ಬಾರಿ ಸಾರ್ವಜನಿಕರು ಸೇರಿದಂತೆ ರಾಜಕೀಯ ವ್ಯಕ್ತಿಗಳು ನೋಟಿಸ್ ನೀಡಿದ್ದರು. ಈ ಕಾರಣಕ್ಕಾಗಿ ಮೈ ತುಂಬಾ ಬಟ್ಟೆ ತೊಡುವ ಮಾತುಗಳನ್ನು ಉರ್ಫಿ ಆಡಿರಬಹುದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಈಗಲಾದರೂ ಬುದ್ಧಿ ಬಂತಲ್ಲ, ಒಳ್ಳೆಯದಾಗಲಿ ಎಂದು ಹಲವರು ಕಾಲೆಳೆದಿದ್ದರು.
ಇಷ್ಟಾದ ನಂತರ ಉರ್ಫಿ ಮತ್ತೊಂದು ಟ್ವೀಟ್ ಮೂಲಕ ಚಮಕ್ ನೀಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ‘ನಾನು ನಿಮಗೆ ಎಪ್ರಿಲ್ ಫೂಲ್ (April Fool) ಮಾಡಿದೆ. ಉರ್ಫಿ ಬದಲಾಗಲ್ಲ’ ಎಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳನ್ನು ಮೂರ್ಖರನ್ನಾಗಿ ಮಾಡಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Urfi Javed: ಇದು ಡಬಲ್ ಧಮಾಕಾ! ಒಟ್ಟಿಗೆ ಕಾಣಿಸಿಕೊಂಡ ಉರ್ಫಿ ಜಾವೇದ್ ಮತ್ತು ಸನ್ನಿ ಲಿಯೋನ್!
ಉರ್ಫಿ ಎಪ್ರಿಲ್ ಫೂಲ್ ಟ್ವೀಟ್
ಡರ್ಟಿ ಮ್ಯಾಗಜೀನ್ಗೆ ನೀಡಿದ ಸಂದರ್ಶನದಲ್ಲಿ, ಉರ್ಫಿ ತನ್ನ ಜೀವನ ಮತ್ತು ತನ್ನ ಆಯ್ಕೆಗಳ ಬಗ್ಗೆ ಹೇಳಿಕೊಂಡಿದ್ದರು. “ನನ್ನ ಜೀವನದುದ್ದಕ್ಕೂ ನಾನು ಹಣದ ಬಗ್ಗೆ ಅಸಮಾಧಾನ ಮತ್ತು ಒತ್ತಡವನ್ನು ಹೊಂದಿದ್ದೇನೆ. ನನ್ನ ಪ್ರಕಾರ ಗಂಡಿನ ಹಿಂದೆ ಓಡುವ ಬದಲು ಹುಡುಗಿಯರು ಹಣದ ಹಿಂದೆ ಓಡಬೇಕು. ಏಕೆಂದರೆ ಹಣವು ಎಲ್ಲವೂ ಅಲ್ಲ. ನಿಮಗೆ 100 ಸಮಸ್ಯೆಗಳಿದ್ದರೆ, ಹಣವು ಅವುಗಳಲ್ಲಿ 99 ಸಮಸ್ಯೆಗಳನ್ನು ಮಾತ್ರ ಪರಿಹರಿಸುತ್ತದೆʼʼ ಎಂದು ಹೇಳಿಕೊಂಡಿದ್ದರು.
ರಿಲೇಶನ್ಶಿಪ್ನಲ್ಲಿದ್ದಾರಾ ಉರ್ಫಿ?
ಬಾಲಿವುಡ್ ಖ್ಯಾತ ನಟ ಅರ್ಜುನ್ ಕಪೂರ್ ಜತೆ ಉರ್ಫಿ ಜಾವೇದ್ ಫೋಟೊ ತೆಗೆಸಿಕೊಂಡಿದ್ದು, ಸಖತ್ ಸುದ್ದಿಯಾಗಿದ್ದರು. ಆ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ. ಸನ್ನಿ ಜತೆಗೆ ನಟಿ ಕಾಣಿಸಿಕೊಂಡಿದ್ದು, ಅತೀ ಶೀಘ್ರದಲ್ಲೇ ಮದುವೆ ಆಗುವುದಾಗಿ ಹೇಳಿಕೊಂಡಿದ್ದರು. ಯಾವಾಗ ಮದುವೆ ಎಂದು ಕೇಳಿದ ಪ್ರಶ್ನೆಗೆ ‘ಅವನು ಯಾವಾಗ ಮದುವೆ ಆಗುತ್ತಾನೋ ಆವಾಗ. ಈಗಾಗಲೇ ಅವನಿಗೆ ಎರಡು ಮದುವೆ ಆಗಿದೆ. ಈಗಾಗಲೇ ಡಿವೋರ್ಸ್ ಕೂಡ ಮಾಡಿಕೊಂಡಿದ್ದಾನೆ” ಎಂದು ಹೇಳಿಕೊಂಡಿದ್ದರು.