Site icon Vistara News

Urfi Javed: ಪೊಲೀಸ್‌ ಕಸ್ಟಡಿಗೆ ಉರ್ಫಿ ಜಾವೇದ್‌; ವಿಡಿಯೊ ವೈರಲ್‌!

Urfi Javed ARRESTED

ಬೆಂಗಳೂರು: ಫ್ಯಾಷನ್‌ ಐಕಾನ್‌ ಎಂತಲೇ ಖ್ಯಾತಿ ಗಳಿಸಿರುವ ಉರ್ಫಿ ಜಾವೇದ್‌ (Urfi Javed) ಅವರನ್ನು ಮುಂಬೈ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಫೋಟೊಗ್ರಾಫರ್‌ಗಳು ಹಂಚಿಕೊಂಡಿರುವ ವಿಡಿಯೊದಲ್ಲಿ, ಉರ್ಫಿ ಅವರನ್ನು ಪೊಲೀಸ್ ಅಧಿಕಾರಿಗಳು ಅರೆಸ್ಟ್‌ ಮಾಡಿ ಕರೆದುಕೊಂಡು ಹೋಗಿರುವುದು ವೈರಲ್‌ ಆಗಿದೆ. ವಿಡಿಯೊದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮೊಂದಿಗೆ ಪೊಲೀಸ್ ಠಾಣೆಗೆ ಬರುವಂತೆ ಉರ್ಫಿಯನ್ನು ಕೇಳಿದ್ದಾರೆ.

ಈ ರೀತಿ ತುಂಡು ತುಂಡು ಬಟ್ಟೆಯನ್ನು ಹಾಕಿಕೊಂಡು ಯಾರು ಓಡಾಡುತ್ತಾರೆ? ಎಂದು ಅಧಿಕಾರಿ ಉರ್ಫಿಗೆ ಪ್ರಶ್ನೆ ಕೇಳಿದ್ದಾರೆ. ಇದಾದ ಬಳಿಕ ಅಧಿಕಾರಿಗಳು ಏನು ಹೇಳಬೇಕೆಂದರೂ ಪೊಲೀಸ್ ಠಾಣೆಯಲ್ಲಿ ಹೇಳಬಹುದು ಎಂದು ವಾದ ವಿವಾದದ ನಂತರ ಉರ್ಫಿಯನ್ನು ಕಸ್ಟಡಿಗೆ ಕರೆದೊಯ್ದಿದ್ದಾರೆ. ವಿಡಿಯೊದಲ್ಲಿ ಉರ್ಫಿ ಒಂದು ಜೊತೆ ಡೆನಿಮ್ ಪ್ಯಾಂಟ್‌ನೊಂದಿಗೆ ಬ್ಯಾಕ್‌ಲೆಸ್‌ ಕೆಂಪು ಟಾಪ್ ಧರಿಸಿದ್ದರು. ಸಾಮಾಜಿಕ ಮಾಧ್ಯಮ ಬಳಕೆದಾರರೂ ವಿಡಿಯೊ ಸತ್ಯಾಸತ್ಯತೆಯಲ್ಲಿ ಗೊಂದಲಕ್ಕೊಳಗಾಗಿದ್ದಾರೆ.

ಕೆಲವರು ಇಂದು ʻʻತಮಾಷೆಯಾಗಿ ತೋರುತ್ತಿದೆ” ಎಂದು ಕಮೆಂಟ್‌ ಮಾಡಿದ್ದಾರೆ. ಕಳೆದ ತಿಂಗಳು, ಉರ್ಫಿ ಅವರ ಫ್ಯಾಷನ್ ಆಯ್ಕೆಗಳಿಗಾಗಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಎಂದು ವರದಿಯಾಗಿತ್ತು. ಉರ್ಫಿ ಜಾವೇದ್ ಅವರು ತಮ್ಮ ಫ್ಯಾಷನ್ ಆಯ್ಕೆಗಳ ಕಾರಣದಿಂದ ಆಗಾಗ್ಗೆ ಟ್ರೋಲ್, ಗುರಿ ಮತ್ತು ನಿಂದನೆಗೆ ಒಳಗಾಗುತ್ತಾರೆ.

ಇದನ್ನೂ ಓದಿ: Urfi Javed: ಶಿಲ್ಪಾ ಶೆಟ್ಟಿ ಪತಿ, ಉರ್ಫಿ ಮುಖಾಮುಖಿ; ಐಕಾನಿಕ್ ಬ್ರಹ್ಮಾಂಡಗಳು ಅಂದ್ರು ನೆಟ್ಟಿಗರು!

ಸಂದರ್ಶನವೊಂದರಲ್ಲಿ, ಉರ್ಫಿ ತನ್ನ ವಿರುದ್ಧ ದೂರು ಸಲ್ಲಿಸುವವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಟ್ಟೆಗಳ ಆಯ್ಕೆಯನ್ನು ಸಮರ್ಥಿಸಿಕೊಂಡು ಬರುತ್ತಲೇ ಇದ್ದಾರೆ.

ಉರ್ಫಿ ಜಾವೇದ್ ಅವರು ‘ಬಿಗ್ ಬಾಸ್ ಒಟಿಟಿ’ಯಲ್ಲಿನ ನಂತರ ಖ್ಯಾತಿಯನ್ನು ಗಳಿಸಿದರು. ಹಲವಾರು ಟಿವಿ ಶೋಗಳಲ್ಲಿಯೂ ನಟಿಸಿದ್ದಾರೆ. ಅವರು ‘ಬಡೆ ಭಯ್ಯಾ ಕಿ ದುಲ್ಹನಿಯಾ’ ಚಿತ್ರದಲ್ಲಿ ಅವ್ನಿ ಪಾತ್ರವನ್ನು ಮರು ಸೃಷ್ಟಿಸಿ ಹೆಸರುವಾಸಿಯಾಗಿದ್ದಾರೆ.

Exit mobile version