Site icon Vistara News

Urfi Javed | ʻಬೇಷರಮ್‌ ರಂಗ್‌ʼ ಹಾಡಿಗೆ ಕೇಸರಿ ಬಣ್ಣದ ತುಂಡು ಬಟ್ಟೆ ಧರಿಸಿ ಕ್ಯಾಟ್‌ ವಾಕ್‌ ಮಾಡಿದ ಉರ್ಫಿ!

Urfi Javed

ಬೆಂಗಳೂರು: ಶಾರುಖ್‌ ಖಾನ್‌- ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್‌’ ಸಿನಿಮಾದ ಕೇಸರಿ ವಿವಾದದ ಬೆನ್ನಲ್ಲೇ ಇದೀಗ ಫ್ಯಾಷನ್‌ ಐಕಾನ್‌ ಖ್ಯಾತಿಯ ಉರ್ಫಿ ಜಾವೇದ್‌ (Urfi Javed ) ಕೇಸರಿ ಕಟ್-ಔಟ್ ಟಾಪ್‌ನಲ್ಲಿ ʻಬೇಷರಮ್‌ ರಂಗ್‌ʼ ಸಾಂಗ್‌ಗೆ ಕ್ಯಾಟ್‌ ವಾಕ್‌ ಮಾಡಿರುವ ವಿಡಿಯೊ ಇನ್‌ ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಪಠಾಣ್‌ ಸಿನಿಮಾದ ʻಬೇಷರಮ್‌ ರಂಗ್ʼ ಬಿಡುಗಡೆಯಾದಾಗಿನಿಂದ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ. ಹಲವಾರು ರಾಜಕಾರಣಿಗಳು ದೀಪಿಕಾ ಪಡುಕೋಣೆ ಅವರ ʻಕೇಸರಿʼ ಬಿಕಿನಿ ಮತ್ತು ಶಾರುಖ್‌ ಅವರ ʻಹಸಿರುʼ ಶರ್ಟ್‌ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇದೀಗ ಬೇಷರಮ್ ರಂಗ್‌ ಹಾಡಿಗೆ ಕಟ್-ಔಟ್ ಕೇಸರಿ ಬಟ್ಟೆ ಧರಿಸಿ ಉರ್ಫಿ ಸುದ್ದಿಯಾಗಿದ್ದಾರೆ. ಉರ್ಫಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ, ನಟಿ ಕೇಸರಿ ಕಟ್-ಔಟ್ ಟಾಪ್ ಮತ್ತು ಮ್ಯಾಚಿಂಗ್ ಹೀಲ್ಸ್‌ನೊಂದಿಗೆ ಜೋಡಿಯಾಗಿರುವ ಸಣ್ಣ ಸ್ಕರ್ಟ್‌ನಲ್ಲಿ ಕ್ಯಾಟ್‌ ವಾಕ್‌ ಮಾಡಿದ್ದಾರೆ. ಈ ವಿಡಿಯೊಗೆ ನೆಟ್ಟಿಗರು ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದು ʻʻಕೇಸರಿ ವಿವಾದಕ್ಕಾಗಿ ಕೇಸರಿ ಬಣ್ಣದ ಉಡುಪನ್ನು ಧರಿಸಿದ್ದಾರೆ. ಜನರ ಗಮನ ಸೆಳೆಯಲು (attention seeking) ಹೀಗೆ ಮಾಡುತ್ತಿದ್ದಾರೆʼʼ ಎಂದು ಕಮೆಂಟ್‌ ಮಾಡಿದರೆ, ಇನ್ನೊಬ್ಬರು ʻʻಮತ್ತೆ ಕೇಸರಿ ಬಣ್ಣವನ್ನು ಅವಮಾನಿಸಲಾಗುತ್ತಿದೆ. ವಿವಾದವನ್ನು ಸೃಷ್ಟಿಸಬೇಡಿ” ಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ | Urfi Javed | ʻʻನನ್ನನ್ನು ಯಾರೂ ಬಂಧಿಸಿಲ್ಲ, ಆಗಿದ್ದೇ ಬೇರೆʼʼ: ಉರ್ಫಿ ಜಾವೇದ್‌ ಹೇಳಿದ್ದೇನು?

ಬಿಜೆಪಿ ಮಹಾರಾಷ್ಟ್ರ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ವಾಘ್ ಅವರು ಉರ್ಫಿ ವಿರುದ್ಧ “ಇವರು ಮುಂಬೈನ ಬೀದಿಗಳಲ್ಲಿ ದೇಹವನ್ನು ಪ್ರದರ್ಶಿಸುತ್ತಾ ತಿರುಗಾಡುತ್ತಿದ್ದಾರೆ” ಎಂದು ದೂರು ದಾಖಲಿಸಿದ್ದರು. ಇದಕ್ಕೆ ಖಡಕ್‌ ಆಗಿ ಪ್ರತಿಕ್ರಿಯಿಸಿದ ಉರ್ಫಿ “ಸಂವಿಧಾನದಲ್ಲಿ ಇನ್ನು ತಡೆಯುವ ಯಾವುದೇ ವಿಧಿ ಇಲ್ಲ’ ಎಂದಿದ್ದರು.

ಇದನ್ನೂ ಓದಿ | Urfi Javed | ಉರ್ಫಿ ಜಾವೇದ್‌ಗೆ ವಾಟ್ಸ್ ಆ್ಯಪ್‌ನಲ್ಲಿ ಅತ್ಯಾಚಾರ, ಕೊಲೆ ಬೆದರಿಕೆ: ವ್ಯಕ್ತಿ ಬಂಧನ

Exit mobile version