ಬೆಂಗಳೂರು: ಫ್ಯಾಷನ್ ಐಕಾನ್ ಎಂತಲೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ (Urfi Javed) ತಮ್ಮ ಡ್ರೆಸ್ಸಿಂಗ್‌ನಿಂದಾಗಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ, ಅವರು ಮ್ಯಾಗಜಿನ್‌ಗಾಗಿ ಫೋಟೊಶೂಟ್ ಮಾಡಿದ್ದಾರೆ. ಅವರ ಫೋಟೊ ಶೂಟ್ ಬಗ್ಗೆ, ಫ್ಯಾಶನ್ ಡಿಸೈನರ್ ಅನಿತಾ ಶ್ರಾಫ್ ಅದಾಜಾನಿಯಾ (Anaita Shroff Adajania) ಇನ್‌ಸ್ಟಾದಲ್ಲಿ ಉರ್ಫಿಗಿರುವ ಫ್ಯಾಷನ್ ಆಸಕ್ತಿ ಬಗ್ಗೆ ಇನ್‌ಸ್ಟಾ ಮೂಲಕ ಹೇಳಿಕೊಂಡಿದ್ದಾರೆ.
ʻʻDIY (ದಿ ಡರ್ಟಿ ಮ್ಯಾಗಜಿನ್) ಮ್ಯಾಗಜಿನ್ ಫೋಟೊಶೂಟ್‌ನಲ್ಲಿ ಉರ್ಫಿ ಅವರ ಕಸ್ಟಮ್ ಲುಕ್ ಉತ್ತಮವಾಗಿದೆ! ನಾನು ಅವಳ ಫ್ಯಾಶನ್ ಪ್ರೀತಿಯನ್ನು ಮತ್ತು ಅವಳ ಉತ್ಸಾಹವನ್ನು ಮೆಚ್ಚಿದೆ. ವಿನ್ಯಾಸಕರು ಅವಳನ್ನು ನಿರಾಕರಿಸಿದಾಗ ನನಗೆ ಒಂದು ಕ್ಷಣ ಬೇಸರವಾಯಿತು. ಆದರೆ ಉರ್ಫಿ ತನ್ನ ಸ್ವಂತ ಫ್ಯಾಷನ್ ಶಾಪ್ ಅನ್ನು ಹೊಂದಿದ್ದಾರೆ. ಫ್ಯಾಷನ್ ಅದು ಎಲ್ಲರಿಗೂ ಇರುವಂಥದ್ದು. ಉರ್ಫಿ ದಿ ಡರ್ಟಿ ಮ್ಯಾಗಜಿನ್‌ಗಾಗಿ ಅತ್ಯಂತ ಸೃಜನಶೀಲ ಲೇಬಲ್‌ಗಳನ್ನು ಧರಿಸಿದ್ದಾಳೆ. ಅವಳಿಗೆ ಕಸ್ಟಮ್ ಮಾಡಲಾಗಿದೆʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Urfi Javed: ನಟಿ ಉರ್ಫಿಯ ಕ್ಯಾಬ್ ಡ್ರೈವರ್ ಲಗೇಜ್ ಸಹಿತ ಪರಾರಿ, ಮತ್ತೆ ವಾಪಸ್ ಬಂದಾಗ ಫುಲ್ ಟೈಟ್!
ಈಗಾಗಲೇ ಉರ್ಫಿ ತುಂಡು ಬಟ್ಟೆಯ ವಿಚಾರಕ್ಕಾಗಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ರಿಯಾಲಿಟಿ ಶೋ ಮೂಲಕ ಮತ್ತೆ ಸುದ್ದಿಯಾಗುತ್ತಿದ್ದಾರೆ.