ಬೆಂಗಳೂರು: ಯುಎಇ ಪ್ರವಾಸದಲ್ಲಿದ್ದ ಉರ್ಫಿ ಜಾವೇದ್ (Urfi Javed) ಅವರನ್ನು ಸಾರ್ವಜನಿಕವಾಗಿ ವಿಡಿಯೊ ಚಿತ್ರೀಕರಿಸಿದ ಆರೋಪದ ಮೇಲೆ ದುಬೈನಲ್ಲಿ ಬಂಧಿಸಲಾಗಿದೆ ಎಂದು ಈ ಹಿಂದೆ ಅಷ್ಟೇ ವರದಿಯಾಗಿತ್ತು. ಇದೀಗ ನಟಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಸ್ಥಳದಲ್ಲಿನ ಕೆಲವು ಸಮಸ್ಯೆಗಳಿಂದಾಗಿ ಚಿತ್ರೀಕರಣವನ್ನು ನಿಲ್ಲಿಸಲು ದುಬೈ ಪೊಲೀಸರು ಬಂದಿದ್ದಾರೆ’ ಎಂದು ಉರ್ಫಿ ಸ್ಪಷ್ಟಪಡಿಸಿದ್ದಾರೆ. ಈ ಘಟನೆಗೂ ನನ್ನ ಬಟ್ಟೆಗೂ ಯಾವುದೇ ಸಂಬಂಧವಿಲ್ಲ ಎಂದು ನಟಿ ಹೇಳಿಕೆ ನೀಡಿದ್ದಾರೆ.
ತಮ್ಮ ಬಟ್ಟೆಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ ಉರ್ಫಿ ಜಾವೇದ್. ಸಾರ್ವಜನಿಕವಾಗಿ ಪ್ರಚೋದಕ ಉಡುಪನ್ನು ಧರಿಸಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉರ್ಫಿ ʻʻಸ್ಥಳದಲ್ಲಿ ಕೆಲವು ಸಮಸ್ಯೆಗಳ ಕಾರಣ ಚಿತ್ರೀಕರಣ ನಿಲ್ಲಿಸಲು ಪೊಲೀಸರು ಆಗಮಿಸಿದ್ದರು. ಸಾರ್ವಜನಿಕ ಸ್ಥಳವಾಗಿದ್ದರಿಂದ ಚಿತ್ರೀಕರಣಕ್ಕೆ ಸ್ವಲ್ಪ ಸಮಯವಿತ್ತು. ನಿರ್ಮಾಣ ತಂಡವು ಚಿತ್ರೀಕರಣದ ಸಮಯವನ್ನು ವಿಸ್ತರಿಸಲಿಲ್ಲ, ಆದ್ದರಿಂದ ನಾವು ಹೊರಡಬೇಕಾಯಿತು. ಅದಕ್ಕೂ ನನ್ನ ಬಟ್ಟೆಗೂ ಯಾವುದೇ ಸಂಬಂಧವಿರಲಿಲ್ಲ. ನಾವು ಮರುದಿನ ಉಳಿದ ಭಾಗವನ್ನು ಚಿತ್ರೀಕರಿಸಿದ್ದೇವೆʼʼ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | Urfi Javed | ಉರ್ಫಿ ಜಾವೇದ್‌ಗೆ ವಾಟ್ಸ್ ಆ್ಯಪ್‌ನಲ್ಲಿ ಅತ್ಯಾಚಾರ, ಕೊಲೆ ಬೆದರಿಕೆ: ವ್ಯಕ್ತಿ ಬಂಧನ
ಆಗಿದ್ದೇನು?
ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲ ಬಟ್ಟೆಗಳನ್ನು ಧರಿಸಿ ಚಿತ್ರೀಕರಣ ಮಾಡಿದ್ದಕ್ಕಾಗಿ ಚಿತ್ರೀಕರಣದ ನಂತರ ಉರ್ಫಿಯನ್ನು ದುಬೈನಲ್ಲಿ ಸ್ಥಳೀಯ ಪೊಲೀಸರು ಪ್ರಶ್ನಿಸಿದ್ದಾರೆ. ಮತ್ತೊಂದು ವರದಿಯಲ್ಲಿ ಉರ್ಫಿ ಅವರು ಧರಿಸಿರುವ ಬಟ್ಟೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಆಕೆ ವಿಡಿಯೊವನ್ನು ಸಾರ್ವಜನಿಕ ಪ್ರದೇಶದಲ್ಲಿ ಚಿತ್ರೀಕರಣ ಮಾಡಿದ್ದಕ್ಕಾಗಿ ದುಬೈ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿತ್ತು.
ಇದನ್ನೂ ಓದಿ | Urfi Javed | ದುಬೈನಲ್ಲಿ ಉರ್ಫಿ ಜಾವೇದ್ ಅರೆಸ್ಟ್: ಬಂಧನಕ್ಕೆ ಕಾರಣವೇನು?