ಬೆಂಗಳೂರು : ಬಾಲಿವುಡ್‌ನ ಕಾಂಟ್ರೋವರ್ಸಿಯಲ್ ಕ್ವೀನ್ ಹಾಗೂ ಹಿಂದಿ ಬಿಗ್ ಬಾಸ್ OTT ಸೀಸನ್ 1ರ ಸ್ಪರ್ಧಿ ಉರ್ಫಿ ಜಾವೇದ್ (Urfi Javed) ತಮ್ಮ ಉಡುಗೆಗಳಿಂದಲೇ ಸದ್ದು ಮಾಡುತ್ತಿರುತ್ತಾರೆ. ಮುಂಬೈ ಬೀದಿಯಲ್ಲಿ ಬಿಕಿನಿ ಧರಿಸಿ ಓಡಾಡಿದರು ಎನ್ನುವ ಕಾರಣಕ್ಕಾಗಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಉರ್ಫಿ ಜಾವೇದ್ ಗರಂ ಆಗಿದ್ದಾರೆ. ʻನನ್ನ ದೇಹ, ನನ್ನ ಇಷ್ಟ. ಅತ್ಯಾಚಾರಿಗಳ ಮೇಲೆ ದೂರು ನೀಡಿ, ನನ್ನ ಮೇಲಲ್ಲʼ ಎಂದು ದೂರು ನೀಡಿದವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ದೂರು ನೀಡಿದವರ ವಿರುದ್ಧ ಪ್ರತಿಕ್ರಿಯಿಸಿರುವ ಉರ್ಫಿ ಜಾವೇದ್ ʻʻನಾನು ತಾಲಿಬಾನ್ ಆಡಳಿತದಲ್ಲಿ ವಾಸಿಸುತ್ತಿಲ್ಲ. ಭಾರತದಲ್ಲಿ ಬದುಕುತ್ತಿರುವೆ. ನನ್ನ ಉಡಪು ನನ್ನ ಇಷ್ಟ. ನಮಗಿಷ್ವವಾದ ಬಟ್ಟೆ ಧರಿಸಲು ಸ್ವಾತಂತ್ರ್ಯ ಇಲ್ಲವಾ? ಬಿಕಿನಿ ಧರಿಸಿದರೆ ನಿಮಗೆ ಸಮಸ್ಯೆ ಆಗುತ್ತದೆ ಅಂತಾದರೆ ಕಣ್ಣು ಮುಚ್ಚಿಕೊಂಡು ಓಡಾಡಿ. ದೂರು ಕೊಟ್ಟರೂ ನಾನು ನನ್ನಿಷ್ಟದಂತೆಯೇ ಬಟ್ಟೆ ಧರಿಸುತ್ತೇನೆʼʼ ಎಂದು ಉರ್ಫಿ ಹೇಳಿದ್ದಾರೆ.
ಇದನ್ನೂ ಓದಿ | Urfi Javed | ಉರ್ಫಿ ಜಾವೇದ್ ವಿರುದ್ಧ ದೂರು ದಾಖಲು: ಮಾದಕ ಡ್ಯಾನ್ಸ್ ವಿಡಿಯೊ ವೈರಲ್!
ಉರ್ಫಿ ಜಾವೇದ್ ಮಾದಕ ಡಾನ್ಸ್‌ಗೆ ದೂರು ದಾಖಲು
ಈ ಹಿಂದೆ ಅಷ್ಟೇ ಉರ್ಫಿ ಜಾವೇದ್ ವಿರುದ್ಧ ವ್ಯಕ್ತಿಯೊಬ್ಬರು ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ಉರ್ಫಿ ಜಾವೇದ್ ಡಾನ್ಸ್ ಮಾಡಿರುವ ʻʻಹಾಯ್ ಹಾಯ್ ಯೇ ಮಜ್ಬೂರಿʼ(Haye Haye Yeh Majboori) ಹಾಡು ಬಿಡುಗಡೆಗೊಂಡಿತ್ತು. ಈ ಹಾಡಿನಲ್ಲಿ ಉರ್ಫಿ ಅತ್ಯಂತ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಬಟ್ಟೆಗಳು ಅತ್ಯಂತ ಅಶ್ಲೀಲವಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಬರೆಯಲಾಗಿತ್ತು. ಅಕ್ಟೋಬರ್ 11ರಂದು ಈ ಹಾಡು ಯುಟ್ಯೂಬ್‌ನಲ್ಲಿ ಅಪ್ಲೋಡ್ ಆಗಿತ್ತು.
ಇದನ್ನೂ ಓದಿ | Urfi Javed | ಏನ್ ಉಡುಗೆ, ಇದು ಏನ್ ಉಡುಗೆ ಎಂದವರ ಚಳಿಬಿಡಿಸಿದ ಉರ್ಫಿ; ವಿಡಿಯೊ ವೈರಲ್!