ಉರ್ಫಿ ಜಾವೇದ್ (Urfi Javed) ತಮ್ಮ ಸ್ಟೈಲ್ ಮೂಲಕ ನೋಡುಗರನ್ನು ಬೆರಗುಗೊಳಿಸುತ್ತಿರುವುದು ಇದೇ ಮೊದಲೇನಲ್ಲ. ಆದರೆ ಇದೀಗ ಫ್ಯಾಷನ್ ಐಕಾನ್ ಎಂದೇ ಖ್ಯಾತಿ ಪಡೆದ ಉರ್ಫಿ ಈಗ ಮೆಟಲ್ ಕವಚದ (ಮೆಟಲ್ ಬಸ್ಟಿಯರ್) ಮೂಲಕ ಎದೆಯನ್ನು ಮುಚ್ಚಿಕೊಂಡಿದ್ದಾರೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಮೆಟಲ್ ಬಸ್ಟಿಯರ್ ಧರಿಸಿ ಕಾಣಿಸಿಕೊಂಡಿದ್ದಾರೆ ಉರ್ಫಿ. ತಮ್ಮ ವಿಶಿಷ್ಟವಾದ ಗೋಲ್ಡನ್ ಮೆಟಲ್ ಕವಚದಿಂದ ಗಮನ ಸೆಳೆದಿದ್ದಾರೆ.
ಇದನ್ನು ಮಾಡಲು ನಮಗೆ ತಿಂಗಳುಗಳ ಕಾಲ ತೆಗೆದುಕೊಂಡಿತು ಎಂದು ಉರ್ಫಿ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಮೆಟಲ್ ಕವಚವನ್ನು ಬ್ಲೌಸ್ ರೀತಿಯಲ್ಲಿ ಧರಿಸಿ ಅದರ ಮೇಲೆ ಸೀರೆ ಉಟ್ಟುಕೊಂಡಿದ್ದಾರೆ. ಈ ರೀತಿಯ ಎದೆ ಕವಚ ಧರಿಸಿದ ಉರ್ಫಿಯನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಸೋನಂ ಕಪೂರ್ ಈ ಹಿಂದೆ ಇದೇ ರೀತಿಯ ಕವಚವನ್ನು ಧರಿಸಿ ಫೋಟೊಶೂಟ್ ಮಾಡಿಸಿಕೊಂಡಿದ್ದರು. ಇದೀಗ ಉರ್ಫಿ ಅವರಿಂದ ಸ್ಫೂರ್ತಿ ಪಡೆದಿದ್ದಾರೆಂದು ಹೇಳಲಾಗುತ್ತಿದೆ. ಸೋನಂ ಮಾತ್ರವಲ್ಲದೇ ಅನೇಕ ನಟಿಯರು ಈ ರೀತಿಯ ಕವಚವನ್ನು ಧರಿಸಿ ಫೋಸ್ ನೀಡಿದ್ದರು.
ಉರ್ಫಿಯ ಔಟ್ಫಿಟ್ ನೋಡಲು ಕಾಯುವ ಬಹಳಷ್ಟು ಜನರಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಜನರು ಈ ನಟಿಯನ್ನು ಟ್ರೋಲ್ ಕೂಡಾ ಮಾಡುತ್ತಾರೆ. ಈ ಬಗ್ಗೆ ನಟಿ ಈ ಹಿಂದೆಯಷ್ಟೇ ಬೇಸರ ಹೊರ ಹಾಕಿದ್ದರು.
ಇದನ್ನೂ ಓದಿ: Urfi Javed: ಹೃದಯ ಕಿತ್ತು ಮಾನ ಮುಚ್ಚಿಕೊಂಡ ಫ್ಯಾಷನ್ ಐಕಾನ್ ಖ್ಯಾತಿಯ ಉರ್ಫಿ ಜಾವೇದ್
ʻʻನಾನು ಪಾಪ್ಯುಲರ್ ಆಗಿದ್ದೇನಾ ಎಂದು ಕೇಳಿದರೆ ಹೌದು. ಫೇಮಸ್ ಕೂಡಾ ಆಗಿದ್ದೇನೆ. ಆದರೆ ಜನರು ನನ್ನನ್ನು ಗೌರವಿಸುವುದಿಲ್ಲ. ಜನರು ನನ್ನೊಂದಿಗೆ ಕೆಲಸ ಮಾಡಲು ಬಯಸುವುದಿಲ್ಲʼʼ ಎಂದು ನಟಿ ಬಿಬಿಸಿ ವರ್ಲ್ಡ್ಗೆ ಹೇಳಿದ್ದರು. ಮಾತುಕತೆಯ ಮಧ್ಯೆ ಮಾತನಾಡಿದ ಉರ್ಫಿ ಜಾವೇದ್ ಅವರು ಟ್ರೋಲ್ ಬಗ್ಗೆ ಪ್ರತಿಕ್ರಿಯಿಸಿದ್ದರು. ʻʻಟ್ರೋಲ್ ನನಗೂ ನೋವುಂಟು ಮಾಡುತ್ತದೆ ಎಂದಿದ್ದಾರೆ. ನಾನು ಕೂಡಾ ಮನುಷ್ಯಳೆ. ನನಗೂ ನೋವಾಗುತ್ತದೆ. ಆದರೆ ನನಗೆ ಬೇಸರವಾಗುವುದು 5-10 ನಿಮಿಷʼʼ ಎಂದಿದ್ದರು