Site icon Vistara News

Urfi Javed | ದುಬೈನಲ್ಲಿ ಉರ್ಫಿ ಜಾವೇದ್‌ ಅರೆಸ್ಟ್‌: ಬಂಧನಕ್ಕೆ ಕಾರಣವೇನು?

Urfi Javed

ಬೆಂಗಳೂರು : ಯುಎಇ ಪ್ರವಾಸದಲ್ಲಿದ್ದ ಉರ್ಫಿ ಜಾವೇದ್‌ (Urfi Javed) ಅವರನ್ನು ಸಾರ್ವಜನಿಕವಾಗಿ ವಿಡಿಯೊ ಚಿತ್ರೀಕರಿಸಿದ ಆರೋಪದ ಮೇಲೆ ದುಬೈನಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ತಮ್ಮ ಬಟ್ಟೆಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ ಉರ್ಫಿ ಜಾವೇದ್‌. ಇದೀಗ ಸಾರ್ವಜನಿಕವಾಗಿ ಪ್ರಚೋದಕ ಉಡುಪನ್ನು ಧರಿಸಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಉರ್ಫಿ ಇತ್ತೀಚೆಗಷ್ಟೇ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ತಮ್ಮ ಮುಂಬರುವ ಪ್ರಾಜೆಕ್ಟ್‌ಗಳ ಚಿತ್ರೀಕರಣಕ್ಕಾಗಿ ಹೋಗಿದ್ದರು. ಒಂದು ವಾರಕ್ಕೂ ಹೆಚ್ಚು ಕಾಲ ಅಲ್ಲಿಯೇ ಇದ್ದರು. ತಮ್ಮ ಪ್ರವಾಸದ ವಿಡಿಯೊ ಹಾಗೂ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದರು. ದುಬೈನಲ್ಲಿಯೂ ಅಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿದ್ದಾರೆ. ವರದಿಯ ಪ್ರಕಾರ ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲ ಬಟ್ಟೆಗಳನ್ನು ಧರಿಸಿ ಚಿತ್ರೀಕರಣ ಮಾಡಿದ್ದಕ್ಕಾಗಿ ಚಿತ್ರೀಕರಣದ ನಂತರ ಉರ್ಫಿಯನ್ನು ದುಬೈನಲ್ಲಿ ಸ್ಥಳೀಯ ಪೊಲೀಸರು ಪ್ರಶ್ನಿಸಿದ್ದಾರೆ. ಮತ್ತೊಂದು ವರದಿ ಹೇಳುವಂತೆ ಉರ್ಫಿ ಅವರು ಧರಿಸಿರುವ ಬಟ್ಟೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಆಕೆ ವಿಡಿಯೊವನ್ನು ಸಾರ್ವಜನಿಕ ಪ್ರದೇಶದಲ್ಲಿ ಚಿತ್ರೀಕರಣ ಮಾಡಿದ್ದಕ್ಕಾಗಿ ದುಬೈ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದೆ.

ಇದನ್ನೂ ಓದಿ | Urfi Javed | ಉರ್ಫಿ ಜಾವೇದ್‌ ವಿರುದ್ಧ ದೂರು ಸಲ್ಲಿಕೆ: ಸೀರೆಯಿಂದ ಟ್ರೋಲ್‌ ಆಗಿದ್ಯಾಕೆ ನಟಿ?

ಈ ಹಿಂದೆ ಅಷ್ಟೇ ಲೇಖಕ ಚೇತನ್‌ ಭಗತ್‌ ಅವರು ಉರ್ಫಿ ಕುರಿತಾಗಿ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ಚೇತನ್‌ ಭಗತ್‌ ಕಾರ್ಯಕ್ರಮವೊಂದರಲ್ಲಿ ಯುವಕರ ಬಗ್ಗೆ ಮಾತನಾಡುವಾಗ ʻʻಈಗಿನ ಯುವಕರು ಮೊಬೈಲ್‌ಗೆ ಅಡಿಕ್ಟ್‌ ಆಗಿದ್ದಾರೆ. ಬಹಳ ಹೊತ್ತು ಮೊಬೈಲ್‌ನಲ್ಲಿಯೇ ಕಳೆಯುತ್ತಾರೆ. ಉರ್ಫಿ ಜಾವೇದ್‌ ಕಾಸ್ಟ್ಯೂಮ್‌ಗೆ ಲೈಕ್‌ ಹಾಗೂ ಕಮೆಂಟ್‌ ಮಾಡುವುದರಲ್ಲಿಯೇ ದಿನಗಳೆಯುತ್ತಾರೆ. ಅದು ನಿಮ್ಮ ಅಧ್ಯಯನಗಳಲ್ಲಿ ಬರುವುದಿಲ್ಲ. ಯಾವುದೇ ಸಂದರ್ಶನದಲ್ಲಿ ನೀವು ಹೋದಾಗ ಅವರ ಕುರಿತು ಪ್ರಶ್ನೆ ಕೇಳುವುದಿಲ್ಲʼʼಎಂದು ಹೇಳಿಕೆ ನೀಡಿದ್ದರು.

ಇದರ ಬಗ್ಗೆ ಉರ್ಫಿ ಗರಂ ಆಗಿ ಸೋಷಿಯಲ್‌ ಮೀಡಿಯಾ ಮೂಲಕ ಚೇತನ್‌ ಭಗತ್‌ ಅವರಿಗೆ ಉತ್ತರವನ್ನು ನೀಡಿದ್ದರು ʻʻಕಾರ್ಯಕ್ರಮದಲ್ಲಿ ನನ್ನ ಹೆಸರು ಹೇಳಬಾರದಿತ್ತು. ಯುವಕರ ಮನಸ್ಸನ್ನು ನಾನು ಹಾಳು ಮಾಡಿಲ್ಲ. ನನ್ನ ಚಿಕ್ಕಪ್ಪನ ವಯಸ್ಸಿನ ಚೇತನ್‌ ಅವರು, ಈ ಹಿಂದೆ ಹುಡುಗರಿಗೆ ಅಶ್ಲೀಲ ಮೆಸೇಜ್‌ ಕಳುಹಿಸಿ ಮೀಟೂ ಆರೋಪಿಯಾಗಿದ್ದರು. ನನ್ನ ಬಟ್ಟೆಯ ಬಗ್ಗೆ ಮಾತನಾಡುವ ಯಾವುದೇ ಹಕ್ಕು ಅವರಿಗಿಲ್ಲʼʼ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ | Urfi Javed | ಲೇಖಕ ಚೇತನ್‌ ಭಗತ್‌ ಮೇಲೆ ಗರಂ ಆದ ಉರ್ಫಿ ಜಾವೇದ್‌: ವೈರಲ್‌ ಆಯ್ತು ಸ್ಕ್ರೀನ್‌ ಶಾಟ್‌!

Exit mobile version