Site icon Vistara News

Urfi Javed : ಟೀ ಕುಡಿಯಲು ತಿಣುಕಾಡಿದ ಉರ್ಫಿ; ವಿಡಿಯೊ ವೈರಲ್‌

Urfi Javed dress gets in the way of her drinking tea

ಬೆಂಗಳೂರು: ಫ್ಯಾಷನ್‌ ಐಕಾನ್‌ ಎಂದೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್‌ (Urfi Javed) ಇದೀಗ ಮತ್ತೆ ಟ್ರೋಲ್‌ಗೆ ಗುರಿಯಾಗಿದ್ದಾರೆ. ಉರ್ಫಿ ಟೀ ಕುಡಿಯಲು ಕಷ್ಟಪಡುತ್ತಿರುವ ವಿಡಿಯೊ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್​​ ಆಗಿದೆ. ಇತ್ತೀಚೆಗಷ್ಟೇ ಉರ್ಫಿ ಕಪ್ಪು ಬಣ್ಣದ ವಿಚಿತ್ರವಾದ ಬಟ್ಟೆಯಲ್ಲಿ ಓಡಾಡುತ್ತಿರುವ ವಿಡಿಯೊ ಕಂಡುಬಂದಿದೆ.

ಉರ್ಫಿ ಜಾವೇದ್ ಕಾರಿನಲ್ಲಿ ಕುಳಿತು ಟೀ ಕುಡಿಯುವ ವಿಡಿಯೊ ಹಂಚಿಕೊಂಡಿದ್ದಾರೆ. ʻʻಚಹಾ ತುಂಬ ಮುಖ್ಯವಾದಾಗ..!ʼʼಎಂಬ ಕ್ಯಾಪ್ಷನ್‌ ಕೂಡ ಕೊಟ್ಟಿದ್ದಾರೆ. ತಾವು ಧರಿಸಿರುವ ಉಡುಪಿನ ಮುಂಭಾಗದಲ್ಲಿ ಬ್ಯಾರಿಕೇಡ್ ತರಹ ರೀತಿಯ ಡ್ರೆಸ್‌ ಹಾಕಿಕೊಂಡಿದ್ದಾರೆ. ಒಂದೇ ದಿನದಲ್ಲಿ ಈ ವಿಡಿಯೊ 1,49,987 ಲೈಕುಗಳನ್ನು ಪಡೆದುಕೊಂಡಿದೆ. ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ʻʻಟೀಯನ್ನು ಸ್ಟ್ರಾದಿಂದ ಕುಡಿಯಿರಿʼʼಎಂದು ಒಬ್ಬರು ಕಮೆಂಟ್‌ ಮಾಡಿದರೆ, ಇನ್ನೊಬ್ಬರು ʻʻಎಲ್ಲರಿಗೂ ಮನರಂಜನೆ ನೀಡಿದ್ದಕ್ಕಾಗಿ ಧನ್ಯವಾದಗಳು” ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Urfi Javed: ಉರ್ಫಿ ಜಾವೇದ್‌ ಫ್ಯಾಷನ್ ʻಬ್ಯಾಡ್ ಟೇಸ್ಟ್ʼ ಎಂದು ರಣಬೀರ್‌ ಅಂದಿದಕ್ಕೆ ಉರ್ಫಿ ಪ್ರತಿಕ್ರಿಯೆ ನೀಡಿದ್ದೇನು?

ಇತ್ತೀಚೆಗಷ್ಟೇ ಉರ್ಫಿ ಜಾವೇದ್ ಮುಂಬೈನ ರೆಸ್ಟೋರೆಂಟ್‌ವೊಂದರಲ್ಲಿ ತಮ್ಮ ಬಟ್ಟೆಯ ಕಾರಣ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಿ ಸೋಷಿಯಲ್​ ಮೀಡಿಯಾಗಳಲ್ಲಿ ಬರೆದು ಪೋಸ್ಟ್​​​​ ಹಂಚಿಕೊಂಡಿದ್ದರು. ಜತೆಗೆ ಈ ಪೋಸ್ಟ್​​​ನಲ್ಲಿ ಜೊಮ್ಯಾಟೊವನ್ನು ಕೂಡ ಟ್ಯಾಗ್​​ ಮಾಡಲಾಗಿತ್ತು. ನಟಿ ಊರ್ಫಿ ಪೋಸ್ಟ್​​​​ಗೆ ಜೊಮ್ಯಾಟೊ ಪ್ರತಿಕ್ರಿಯಿಸಿ ಕ್ಷಮೆಯಾಚಿಸಿದೆ. ಜತೆಗೆ ಗಿಫ್ಟ್ ಬಾಸ್ಕೆಟ್​ ಉಡುಗೊರೆಯಾಗಿ ನೀಡಿದೆ. ಇದೀಗ ಜೊಮ್ಯಾಟೊ ಕಳುಹಿಸಿದ ಗಿಫ್ಟ್‌ ಬಾಸ್ಕೆಟ್‌ವನ್ನು ಬಟ್ಟೆಯಾಗಿ ಉಪಯೋಗಿಸಿಕೊಂಡಿದ್ದರು.

Exit mobile version