Site icon Vistara News

Urfi Javed: ತನ್ನ ಎಡಗೈಯಿಂದ ಎದೆ ಭಾಗ ಮುಚ್ಚಿಕೊಂಡ ಉರ್ಫಿ: ಕಾನೂನು ಎಲ್ಲಿದೆ ಎಂದು ನೆಟ್ಟಿಗರ ಆಕ್ರೋಶ!

Urfi Javed exposing her chest is covered by her left hand.

ಬೆಂಗಳೂರು: ಟಾಪ್‌ಲೆಸ್‌ ವಿಡಿಯೊ, ಫೋಟೊಗಳನ್ನು ಉರ್ಫಿ ಜಾವೇದ್‌ (Urfi Javed) ಹಂಚಿಕೊಳ್ಳುವುದು ಮೊದಲೇನಲ್ಲ. ಸಾಕಷ್ಟು ಬಾರಿ ತಮ್ಮ ಬಟ್ಟೆಯ ವಿಚಾರವಾಗಿ ಫ್ಯಾಷನ್‌ ಐಕಾನ್‌ ಎಂದೇ ಖ್ಯಾತಿ ಪಡೆದ ಉರ್ಫಿ ಟ್ರೋಲ್‌ಗೆ ಗುರಿಯಾಗುತ್ತಲೇ ಇರುತ್ತಾರೆ. ಇದೀಗ ನಟಿ ಮತ್ತೆ ಸಂಪೂರ್ಣ ಟಾಪ್ಲೆಸ್ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈಗ ಅವರು ಬಹುತೇಕ ಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಒಂದೇ ಕೈಯಲ್ಲಿ ತಮ್ಮ ಎದೆ ಭಾಗವನ್ನು ಮುಚ್ಚಿಕೊಂಡಿದ್ದಾರೆ.

ಈ ಬಾರಿ ಸಂಪೂರ್ಣ ಟಾಪ್ ಲೆಸ್ ವಿಡಿಯೊವನ್ನು ಶೇರ್ ಮಾಡಿರುವ ಉರ್ಫಿ ʻಎಲ್ಲ ಮಿತಿಗಳನ್ನುʼ ದಾಟಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. ʻಆಕೆ ಎಂದಿಗೂ ಬದಲಾಗುವುದಿಲ್ಲʼ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೊದಲ್ಲಿ, ಉರ್ಫಿ ನೇರಳೆ ಮಣಿಗಳ ದಾರಗಳೊಂದಿಗೆ ಮೇಲುಡುಪು ಧರಿಸಿರುವುದನ್ನು ನೋಡಬಹುದು. ಬಳಿಕ ತನ್ನ ಎಡಗೈಯಿಂದ ಎದೆ ಭಾಗವನ್ನು ಮುಚ್ಚಿಕೊಂಡಿದ್ದಾರೆ.

ವಿಡಿಯೊವನ್ನು ಹಂಚಿಕೊಂಡಾಗಿನಿಂದ 3993 ಕಾಮೆಂಟ್‌ಗಳೊಂದಿಗೆ 1.5 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿವೆ. ವಿಡಿಯೊಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ಒಬ್ಬರು ʻಮಹಿಳೆಯರು ಅಸುರಕ್ಷಿತರಾಗಿದ್ದಾರೆ. ಭಾರತೀಯ ಕಾನೂನು ಎಲ್ಲಿದೆ” ಎಂದು ಬರೆದಿದ್ದಾರೆ. ಇನ್ನೊಬ್ಬರು ʻʻಈಕೆ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುತ್ತಿದ್ದಾಳೆ. ಈಕೆ ವಿರುದ್ಧ ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ?ʼʼ ಎಂದು ಬರೆದಿದ್ದಾರೆ.

ಇದನ್ನೂ ಓದಿ; Urfi Javed: ನೀರಜ್‌ ಪಾಂಡೆ ಕಡೆಯಿಂದ ಕಿರುಕುಳ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ಉರ್ಫಿ ಜಾವೇದ್

ಉರ್ಫಿ ಜಾವೇದ್‌ ವಿಡಿಯೊ

ಉರ್ಫಿ ಜಾವೇದ್​ ಬದುಕಿನಲ್ಲಿ ಅನೇಕ ಕಹಿ ಘಟನೆಗಳು ಕೂಡ ನಡೆದಿವೆ. ಆ ಬಗ್ಗೆ ‘ಹ್ಯೂಮನ್ಸ್​ ಆಫ್​ ಬಾಂಬೆ’ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಬೆದರಿಕೆ ಕರೆಗಳು ಬಂದ ಕಾರಣ ಏಪ್ರಿಲ್‌ 16ರಂದು ಮತ್ತೊಮ್ಮೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಬಿಗ್ ಬಾಸ್ ಒಟಿಟಿಯಲ್ಲಿ ಉರ್ಫಿ ಜಾವೇದ್ ಕಾಣಿಸಿಕೊಂಡಿದ್ದರು. ಆ ಬಳಿಕ ಮೊದಲ ವಾರದಲ್ಲೇ ಈ ಕಾರ್ಯಕ್ರಮದಿಂದ ಹೊರಬಂದರು. ಆದರೆ ಬಳಿಕ ಉರ್ಫಿ ತನ್ನ ಫ್ಯಾಷನ್ ಮತ್ತು ಸ್ಟೈಲ್​ನಿಂದ ಭಾರೀ ಜನಪ್ರಿಯತೆ ಪಡೆದಿದ್ದಾರೆ.

Exit mobile version