Site icon Vistara News

Urfi Javed: ಉರ್ಫಿ ಜಾವೇದ್‌ ಫ್ಯಾಷನ್ ʻಬ್ಯಾಡ್ ಟೇಸ್ಟ್ʼ ಎಂದು ರಣಬೀರ್‌ ಅಂದಿದಕ್ಕೆ ಉರ್ಫಿ ಪ್ರತಿಕ್ರಿಯೆ ನೀಡಿದ್ದೇನು?

Urfi Javed FINALLY Reacts To Ranbir Kapoor's

ಬೆಂಗಳೂರು: ಉರ್ಫಿ ಜಾವೇದ್ (Urfi Javed) ಆಗಾಗ ಹೊಸ ಅವತಾರದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಉರ್ಫಿ ಜಾವೇದ್‌ ಎಷ್ಟೇ ಟ್ರೋಲ್‌ ಆದರೂ ಅವರ ಫ್ಯಾಷನ್‌ ಸೆನ್ಸ್‌ಗೆ ಅದೆಷ್ಟೋ ಬಾಲಿವುಡ್‌ ತಾರೆಯರು ಸೆರಿದಂತೆ ಅನೇಕರು ಹೊಗಳಿದ್ದಾರೆ. ರಣಬೀರ್ ಕಪೂರ್ ಈ ಹಿಂದೆ ನಟಿಯ ಫ್ಯಾಷನ್‌ ಸೆನ್ಸ್‌ ಬಗ್ಗೆ ಕಾಮೆಂಟ್‌ ಮಾಡಿದ್ದರು. “ಆ ರೀತಿಯ ಫ್ಯಾಷನ್​​ ಬಗ್ಗೆ ನನಗಷ್ಟು ಆಸಕ್ತಿ ಇಲ್ಲ” ಎಂದಿದ್ದರು. ಉರ್ಫಿ ಜಾವೇದ್‌ ಫ್ಯಾಷನ್ ನೋಡಿ ʻಬ್ಯಾಡ್ ಟೇಸ್ಟ್ʼ ಎಂದು ಹೇಳಿದ್ದರು.

ಕರೀನಾ ಕಪೂರ್ ಜತೆಗಿನ ಚಾಟ್ ಶೋದಲ್ಲಿ ರಣಬೀರ್ ಅವರು ಉರ್ಫಿ ಜಾವೇದ್‌ ಕುರಿತು ಆ ರೀತಿಯ ಫ್ಯಾಷನ್​​ ಬಗ್ಗೆ ನನಗಷ್ಟು ಆಸಕ್ತಿ ಇಲ್ಲ ಎಂದಿದ್ದರು. ಆದರೆ ನಾವು ಹೇಗಿದ್ದೇವೋ ಆ ಬಗ್ಗೆ ನಮಗೆ ಸಮಾಧಾನ ಇರುವ ಜಗತ್ತಿನಲ್ಲಿ ನಾವಿಂದು ವಾಸವಿದ್ದೇವೆ ಎಂದಿದ್ದರು. ಇದೀಗ ಆನ್‌ಲೈನ್ ಪೋರ್ಟಲ್‌ನೊಂದಿಗಿನ ಸಂವಾದದಲ್ಲಿ, ಉರ್ಫಿ ಜಾವೇದ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ ʻʻಕರೀನಾ ಕಪೂರ್‌ ಅವರು ನನ್ನ ಬಗ್ಗೆ ಹೊಗಳಿದಾಗ ನಾನು ಜೀವನದಲ್ಲಿ ಏನನ್ನಾದರೂ ಸಾಧಿಸಿದ್ದೇನೆ ಎಂದು ನಾನು ಅರಿತುಕೊಂಡೆ. ಅದೇ ರೀತಿ ರಣಬೀರ್‌ ಅವರ ಕಾಮೆಂಟ್‌ಗಳನ್ನು ನೋಡಿ ಅಸಮಾಧಾನಗೊಂಡೆ. ನನಗೆ ಅವರಿಂದ ದೃಢೀಕರಣ ಪಡೆಯುವ ಅಗತ್ಯವಿಲ್ಲ”ಎಂದು ಹೇಳಿಕೊಂಡರು.

ಇದನ್ನೂ ಓದಿ: Urfi Javed: ತಂದೆಯಿಂದಲೇ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳಕ್ಕೊಳಗಾದ ಉರ್ಫಿ ಜಾವೇದ್‌!

ಕರೀನಾ ಕಪೂರ್ ಹೇಳಿದ್ದೇನು?

ಬಾಲಿವುಡ್ ತಾರೆ ಕರೀನಾ ಕಪೂರ್ (Kareena Kapoor) ಅವರು ಉರ್ಫಿ ಜಾವೇದ್ ಅವರನ್ನು ಹೊಗಳಿದ್ದಾರೆ. ʻʻಉರ್ಫಿ ತುಂಬ ‘ಧೈರ್ಯಶಾಲಿ’ ಎಂದು ಹೇಳಿದ್ದರು. ನಟಿ ಮಾತನಾಡಿ ʻನಾನು ಉರ್ಫಿ ಜಾವೇದ್‌ ಅವರಷ್ಟು ಧೈರ್ಯಶಾಲಿಯಲ್ಲ. ಫ್ಯಾಷನ್ ಎನ್ನುವುದು ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ. ಅವರ ಒಂದು ಈ ಆತ್ಮವಿಶ್ವಾಸ ಇಂದು ಇಲ್ಲಿಗೆ ತಂದಿದೆ. ಉರ್ಫಿ ಅದ್ಭುತವಾಗಿ ಕಾಣುತ್ತಾರೆ ಎಂದು ನಾನು ಭಾವಿಸುತ್ತೇನೆʼʼಎಂದಿದ್ದರು.

ಮಾತು ಮುಂದುವರಿಸಿ ʻʻತನಗೆ ಬೇಕಾದಂತಹ ಫ್ಯಾಷನ್‌ ಅನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ಅದು ಫ್ಯಾಷನ್‌ ಅಂದರೆ. ನಿಮ್ಮ ಸ್ಕಿನ್‌ಗೆ ಯಾವುದು ಆರಾಮದಾಯಕವಾಗಿರುತ್ತದೆಯೋ ಅದನ್ನು ನೀವು ಮುಂದುವರಿಸಿ. ಉರ್ಫಿ ಅವರ ನಾನು ಆತ್ಮವಿಶ್ವಾಸವನ್ನು ಪ್ರೀತಿಸುತ್ತೇನೆ. ನಾನು ಆತ್ಮವಿಶ್ವಾಸದ ಹುಡುಗಿ. ಉರ್ಫಿ ಅವರು ನಡೆದುಕೊಳ್ಳುವ ರೀತಿಯನ್ನು ಪ್ರೀತಿಸುತ್ತೇನೆ. ಹ್ಯಾಟ್ಸ್ ಆಫ್ ಉರ್ಫಿ.”ಎಂದಿದ್ದರು.

Exit mobile version