ಬೆಂಗಳೂರು; ಮಾಜಿ ಬಿಗ್ ಬಾಸ್ ಸ್ಪರ್ಧಿ ಫ್ಯಾಷನ್ ಐಕಾನ್ ಎಂದೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ (Urfi Javed) ಹೊಸ ರೀತಿಯ ಫ್ಯಾಷನ್‌ಗೆ ಹೆಸರುವಾಸಿ. ದಿನನಿತ್ಯದ ವಸ್ತುಗಳನ್ನು ಬಳಕೆ ಮಾಡಿಕೊಂಡು ಸಖತ್ ಕ್ರಿಯೇಟಿವ್ ಆಗಿ ಕಣ್ಮನ ಸೆಳೆಯುವ ಉಡುಪುಗಳನ್ನು ಧರಿಸಿ ಸುದ್ದಿಯಾಗುತ್ತಲೇ ಇರುತ್ತಾರೆ. ಆದರೀಗ ನಟಿಯ ಡ್ರೆಸ್ ವೈರಲ್ ಆಗಿದೆ. ಈ ಹಿಂದೆ ಆಟಿಕೆಗಳಿಂದ ಮಾಡಲ್ಪಟ್ಟ ಜಾಕೆಟ್ , ಟೀಬ್ಯಾಗ್ ನಿಂದ ಡ್ರೆಸ್, ಈ ರೀತಿಯ ಬಟ್ಟೆ ಧರಿಸಿ ಟ್ರೆಂಡ್‌ಸೆಟರ್ ಆಗಿದ್ದರು. ಇದೀಗ ಹಿಂದೆಂದೂ ನೋಡಿರದ ಶೋಗಳಿಂದ ತಯಾರಿಸಿದ ಉಡುಪನ್ನು ಧರಿಸಿಕೊಂಡಿದ್ದಾರೆ.
“ಯಾರೂ ಉರ್ಫಿಯನ್ನು ಶೂಗಳಿಂದ ಹೊಡೆಯಬೇಡಿʼʼ ಎಂಬ ಕ್ಯಾಪ್ಷನ್ ಮೂಲಕ ವಿಡಿಯೊ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಶೋ ನೋಡಿದ ಕೂಡಲೇ ತನ್ನ ಕಾಲಿಗೆ ಸೈಜ್ ಆಗುವುದಿಲ್ಲ ಎಂದು ತಿಳಿದು ನಟಿ ಅದನ್ನೇ ಬಟ್ಟೆಯನ್ನಾಗಿ ಮಾಡಿಕೊಂಡಿರುವುದು ಕಂಡಿದೆ. ಅಷ್ಟೇ ಅಲ್ಲದೇ ರ‍್ಯಾಂಪ್ ವಾಕ್ ಕೂಡ ಮಾಡಿದ್ದಾರೆ. ಈ ವಿಡಿಯೊವನ್ನು ಕೆಲವು ಗಂಟೆಗಳ ಹಿಂದೆ ಉರ್ಫಿ ಜಾವೇದ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 5.4 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಕಮೆಂಟ್‌ಗಳ ವಿಭಾಗದಲ್ಲಿ ಜನರು ವಿಶಿಷ್ಟವಾದ ಉಡುಪಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಟೊಮ್ಯಾಟೊದಿಂದ ಮಾಡಿದ ಉಡುಪನ್ನು ಧರಿಸಲು ಉರ್ಫಿಗೆ ಸಲಹೆ ನೀಡಿದ್ದಾರೆ. ಇನ್ನೊಬ್ಬರು, “ಅತ್ಯುತ್ತಮ ಸೃಜನಶೀಲತೆ” ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಶೂಗಳನ್ನು ಸಹ ಬಿಡಲಿಲ್ಲ ನೀವು” ಎಂದು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Urfi Javed: ಎಲ್ಲ ಆಯ್ತು, ಈಗ ಮೆಟಲ್ ಕವಚದಿಂದ ಮಾನ ಮುಚ್ಚಿಕೊಂಡ ಉರ್ಫಿ!
ಈ ಹಿಂದೆ ಉರ್ಫಿ ಮೆಟಲ್ ಕವಚದ (ಮೆಟಲ್ ಬಸ್ಟಿಯರ್) ಮೂಲಕ ಎದೆಯನ್ನು ಮುಚ್ಚಿಕೊಂಡಿದ್ದರು. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಮೆಟಲ್ ಬಸ್ಟಿಯರ್ ಧರಿಸಿ ಕಾಣಿಸಿಕೊಂಡಿದ್ದರು. ಇದನ್ನು ಮಾಡಲು ನಮಗೆ ತಿಂಗಳುಗಳ ಕಾಲ ತೆಗೆದುಕೊಂಡಿತು ಎಂದು ಉರ್ಫಿ ವಿಡಿಯೊವನ್ನು ಪೋಸ್ಟ್ ಮಾಡಿದ್ದರು. ಮೆಟಲ್ ಕವಚವನ್ನು ಬ್ಲೌಸ್ ರೀತಿಯಲ್ಲಿ ಧರಿಸಿ ಅದರ ಮೇಲೆ ಸೀರೆ ಉಟ್ಟುಕೊಂಡಿದ್ದರು.