Site icon Vistara News

Urfi Javed: ಮಾಧುರಿ ದೀಕ್ಷಿತ್‌ ಕಾರಣಕ್ಕೆ ಉರ್ಫಿ ಜಾವೇದ್‌ ಗರಂ: ಕಂಗನಾ ರಣಾವತ್‌ರನ್ನು ಹೊಗಳಿದ್ಯಾಕೆ?

Urfi Javed Gets Uninvited From Event Because Of Madhuri Dixit Sympathysis Kangana

ಬೆಂಗಳೂರು: ಉರ್ಫಿ ಜಾವೇದ್‌ (Urfi Javed) ತಮ್ಮ ಉಡುಪಿನ ಬಗ್ಗೆಯೇ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಅದರ ಹೊರತಾಗಿ ಆಗಾಗ ಕೆಲವೊಂದು ವಿಚಾರಕ್ಕೆ ಧ್ವನಿ ಎತ್ತುತ್ತಿರುತ್ತಾರೆ. ಇದೀಗ ಸೋಷಿಯಲ್‌ ಮೀಡಿಯಾ ಮೂಲಕ ಉರ್ಫಿ ಜಾವೇದ್‌ ಒಬ್ಬ ಸೆಲೆಬ್ರಿಟಿಯ ಕಾರಣದಿಂದ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊನೆಯ ಕ್ಷಣದಲ್ಲಿ ನನಗೆ ಆಹ್ವಾನ ನೀಡಲಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೇ ನಟಿ ಉರ್ಫಿ ಜಾವೇದ್‌ ಅವರು ನಟಿ ಕಂಗನಾ ರಣಾವತ್ ಅವರ ಹೆಸರನ್ನು ಪರೋಕ್ಷವಾಗಿ ಬಳಸಿ ಟ್ವೀಟ್‌ ಕೂಡ ಮಾಡಿದ್ದಾರೆ.

ಉರ್ಫಿ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಮಾಧುರಿ ದೀಕ್ಷಿತ್‌ ಅವರ ವಿಡಿಯೊ ಜತೆ ಪೋಸ್ಟ್‌ ಹಂಚಿಕೊಂಡು ನಡೆದ ಸಂಗತಿಯನ್ನು ವಿವರಿಸಿದ್ದಾರೆ. ಉರ್ಫಿ ಪೋಸ್ಟ್‌ನಲ್ಲಿ ʻʻಮುಂಬೈಯಲ್ಲಿ ನಡೆದ ಈ ಈವೆಂಟ್‌ನ ಮೋಜಿನ ಸಂಗತಿ ಎಂದರೆ, ನನ್ನ ತಂಡವನ್ನು ಆಯೋಜಕರು ಕರೆ ಮಾಡಿ, ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದರು. ನಾನು ಕೂಡ ಆಹ್ವಾನವನ್ನು ಸ್ವೀಕರಿಸಿದೆ. ನನ್ನೆಲ್ಲ ಪ್ಲ್ಯಾನ್ಸ್‌ಗಳನ್ನು ರದ್ದುಗೊಳಿಸಿ ಕೊನೆಯ ಕ್ಷಣದಲ್ಲಿ ಔಟ್‌ ಫಿಟ್‌ಗಳನ್ನು ಅರೆಂಜ್‌ ಮಾಡಿಕೊಂಡೆ. ಇದಾದ ಕೊನೆಯ ಕ್ಷಣದಲ್ಲಿ ನನ್ನ ತಂಡಕ್ಕೆ ಕರೆ ಮಾಡಿ ನನಗೆ ಆಹ್ವಾನವಿಲ್ಲ ಎಂದರು. ನಾವು ಅವರಿಗೆ ಕಾರಣವನ್ನು ಕೇಳಿದಾಗ, ಮಾಧುರಿ ಅವರ ಗೆಸ್‌ ಲಿಸ್ಟ್‌ನಲ್ಲಿ ನಾನು ಇಲ್ಲ ಎಂಬ ವಿಚಿತ್ರ ಕಾರಣ ತಿಳಿಸಿದರುʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Urfi Javed: ಜೊಮ್ಯಾಟೊ ಕಳುಹಿಸಿದ ಗಿಫ್ಟ್‌ನ್ನೇ ಬಟ್ಟೆ ಮಾಡಿಕೊಂಡ ಉರ್ಫಿ: ಕಾರಣವೇನು?

ಕಂಗನಾ ರಣಾವತ್‌ ಅವರನ್ನು ಶ್ಲಾಘಿಸಿದ ಉರ್ಫಿ

ಈ ಪೋಸ್ಟ್‌ ಬಳಿಕ ಟ್ವೀಟ್‌ನಲ್ಲಿ ಉರ್ಫಿ ಜಾವೇದ್‌ ಹೊಸ ಪೋಸ್ಟ್‌ ಹಂಚಿಕೊಂಡು ಕಂಗನಾ ರಣಾವತ್‌ ಅವರನ್ನು ಹೊಗಳಿದ್ದಾರೆ. ಕಂಗನಾ ಅವರು ಆಗಾಗ ಬಾಲಿವುಡ್‌ ಚಿತ್ರೋದ್ಯದಲ್ಲಿ ಇರುವ ಸ್ಥಿತಿಗತಿ ಬಗ್ಗೆ ಧ್ವನಿ ಎತ್ತುತ್ತಲೇ ಇರುತ್ತಾರೆ. ಇದನ್ನು ನಟಿ ಉರ್ಫಿ ಜಾವೇದ್‌ ಕಂಗನಾ ಅವರ ಹೆಸರನ್ನು ಪರೋಕ್ಷವಾಗಿ ಬಳಸಿ ʻʻಕಂಗನಾ ಅವರು ಯಾಕೆ ಆಗಾಗ ಹೀಗೆ ವರ್ತಿಸುತ್ತಾರೆ ಎಂಬುದು ನಾನು ಈಗ ನಿಧಾನವಾಗಿ ಅರ್ಥಮಾಡಿಕೊಳ್ಳುತ್ತಿದ್ದೇನೆ. ನೀವು ಅದೇಷ್ಟೋ ಕಷ್ಟಕರ ಹಾದಿಯಲ್ಲಿ ಹೋಗಿದ್ದೀರಿʼʼಎಂದು ಕಂಗನಾ ಅವರನ್ನು ಶ್ಲಾಘಿಸಿದ್ದಾರೆ ಉರ್ಫಿ.

Exit mobile version