Site icon Vistara News

Urfi Javed | ನಮ್ಮ ದೇಶದ ಹುಡುಗಿಯರು ಉರ್ಫಿ ನೋಡಿ ಕಲಿಯಬೇಕು: ರ್‍ಯಾಪರ್‌ ಯೋ ಯೋ ಹನಿ ಸಿಂಗ್

Urfi Javed

ಬೆಂಗಳೂರು : ಬಟ್ಟೆಗಳಿಂದ ಸಾಕಷ್ಟು ಚರ್ಚೆಯಲ್ಲಿರುವ ಫ್ಯಾಷನ್‌ ಐಕಾನ್‌ ಉರ್ಫಿ ಜಾವೇದ್‌ (Urfi Javed) ಮೇಲೆ ರ್‍ಯಾಪರ್‌ ಹಾಗೂ ಗಾಯಕ ಯೋ ಯೋ ಹನಿ ಸಿಂಗ್ ಅಭಿಮಾನಿಯಾಗಿದ್ದಾರೆ. ಅವರ ಹೊಸ ಆಲ್ಬಂ ‘ಹನಿ ಸಿಂಗ್ 3.0′ ಪ್ರಚಾರದ ವೇಳೆ ವಿವಿಧ ಮಾಧ್ಯಮಗಳಿಗೆ ಅವರು ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ಉರ್ಫಿ ಜಾವೇದ್​ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚಿನ ಸಂದರ್ಶನದಲ್ಲಿ ಪ್ರಚಾರ ವೇಳೆ ಉರ್ಫಿಯನ್ನು ‘ಬೋಲ್ಡ್ ಮತ್ತು ಬ್ರೇವ್’ ಎಂದು ಕರೆದಿದ್ದಾರೆ. ಹನಿ ಸಿಂಗ್ ಮಾತನಾಡಿ ʻʻಉರ್ಫಿ ಜಾವೇದ್​ ನನಗೆ ತುಂಬ ಇಷ್ಟ. ಅವರು ತುಂಬ ಧೈರ್ಯಶಾಲಿ. ಅವರು ತಮ್ಮದೇ ರೀತಿಯಲ್ಲಿ ಬದುಕಲು ಬಯಸುತ್ತಾರೆ. ನಮ್ಮ ದೇಶದ ಎಲ್ಲ ಹುಡುಗಿಯರು ಉರ್ಫಿಯನ್ನು ನೋಡಿ ಕಲಿಯಬೇಕು. ನೀವು ಎಲ್ಲಿಂದ ಬಂದಿದ್ದೀರಿ ಮತ್ತು ನೀವು ಯಾವ ಧರ್ಮ, ಜಾತಿ ಅಥವಾ ಯಾವ ಮನೆಯವರು ಎಂಬುದನ್ನು ಲೆಕ್ಕಿಸದೆ ಯಾರಿಗೂ ಭಯಪಡದೆ, ನಿಮ್ಮ ಹೃದಯದಲ್ಲಿ ಏನು ಬರುತ್ತದೋ ಅದನ್ನು ಯಾವುದೇ ಹಿಂಜರಿಕೆಯಿಲ್ಲದೆ ಮಾಡಿ. ನಿಮ್ಮ ಹೃದಯ ಹೇಳುವುದನ್ನು ಯಾರಿಗೂ ಹೆದರದೆ ಮಾಡಿʼʼ ಎಂದಿದ್ದಾರೆ.

ಇದನ್ನೂ ಓದಿ | Urfi Javed | ನನಗೆ ಬಟ್ಟೆಯ ಅಲರ್ಜಿ ಇದೆ: ಅರೆ ಬೆತ್ತಲೆಯ ಹಿಂದಿನ ಕಾರಣ ಬಿಚ್ಚಿಟ್ಟ ಉರ್ಫಿ ಜಾವೇದ್‌!

ಸಂದರ್ಶನಕಾರರು ಹನಿ ಸಿಂಗ್ ಹಾಡಿನ ವಿಡಿಯೊದಲ್ಲಿ ಉರ್ಫಿ ಅವರಿಗೆ ಚಾನ್ಸ್‌ ನೀಡಲು ಬಯಸುತ್ತಾರೆಯೇ ಎಂದು ಕೇಳಿದಾಗ, ʻʻಖಂಡಿತವಾಗಿಯೂ. ಅವರು ಚೆನ್ನಾಗಿ ಅಭಿನಯಿಸಬಲ್ಲರು. ನಾನು ಅವರಿಗೆ ಅದೃಷ್ಟ ಮತ್ತು ಬೆಂಬಲವನ್ನು ಬಯಸುತ್ತೇನೆ.”ಎಂದಿದ್ದಾರೆ.

ಹನಿ ಸಿಂಗ್ ಮಾಡೆಲ್ ಟೀನಾ ಥಡಾನಿಯೊಂದಿಗೆ ಡೇಟಿಂಗ್ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಸೆಪ್ಟೆಂಬರ್ 2022ರಲ್ಲಿ, ಶಾಲಿನಿ ತಲ್ವಾರ್ ಜತೆ ವಿಚ್ಛೇದನ ಪಡೆದುಕೊಂಡರು.

ಇದನ್ನೂ ಓದಿ | Urfi Javed | ʻಬೇಷರಮ್‌ ರಂಗ್‌ʼ ಹಾಡಿಗೆ ಕೇಸರಿ ಬಣ್ಣದ ತುಂಡು ಬಟ್ಟೆ ಧರಿಸಿ ಕ್ಯಾಟ್‌ ವಾಕ್‌ ಮಾಡಿದ ಉರ್ಫಿ!

Exit mobile version