ತೊಡುವ ಬಟ್ಟೆಯ ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್ (Urfi Javed), ಈಗ ಹೊಸದೊಂದು, ವಿಚಿತ್ರವಾದ ಬಟ್ಟೆಯ ಮೂಲಕ ಸುದ್ದಿಯಲ್ಲಿದ್ದಾರೆ. ಉರ್ಫಿ ಈ ಸಲ ಧರಿಸಿರುವ ಬಟ್ಟೆಯನ್ನಂತೂ ನೀವು ಈ ಹಿಂದೆ ನೋಡಿರಲಿಕ್ಕಿಲ್ಲ. ಈ ವಿಡಿಯೊ ನೋಡಿದರೆ ನಗು ಬಾರದೆಯೂ ಇರುವುದಿಲ್ಲ..!
ಉರ್ಫಿ ಜಾವೇದ್ ಅವರು ಈ ಸಲ ಹೋಟೆಲ್ ವೇಟ್ರೆಸ್ ಉಡುಪು ಧರಿಸಿದ್ದಾರೆ. ಬಿಳಿ ಬಣ್ಣದ, ಕಾಲರ್ ಇರುವ ಶರ್ಟ್ ಧರಿಸಿ ಕಪ್ಪು ಬಣ್ಣದ ಸ್ಕರ್ಟ್ ಧರಿಸಿದ್ದಾರೆ. ಆದರೆ ಈ ಉಡುಪಿನಲ್ಲಿ ಒಂದು ಟ್ವಿಸ್ಟ್ ಇದೆ. ವಿಡಿಯೊ ನೋಡಿದರೆ ಉರ್ಫಿ ಜಾವೇದ್ ದೇಹಕ್ಕೆ ಪೂರ್ತಿ ಬಟ್ಟೆ ಧರಿಸಿದಂತೆ ಕಾಣುತ್ತದೆ. ಆದರೆ ಅವರು ಕನ್ನಡಿಗೆ ಬೆನ್ನು ಮಾಡಿ ನಿಂತಿದ್ದು, ಆ ಕನ್ನಡಿಯಲ್ಲಿ ಅವರ ಹಿಂಭಾಗ ಕಾಣುತ್ತದೆ. ಮುಂಭಾಗ ಪೂರ್ತಿ ಸ್ಕರ್ಟ್ ಮುಚ್ಚಿದ್ದರೆ, ಹಿಂಭಾಗ ಬಿಕನಿಯಷ್ಟೇ ಇದೆ..!
ಉರ್ಫಿ ಇತ್ತೀಚೆಗೆ ತಮ್ಮ ಎದೆ ಭಾಗಕ್ಕೆ ಐಸ್ಕ್ರೀಂ ಕೋನ್ನಂಥದ್ದನ್ನು ಮುಚ್ಚಿಕೊಂಡು ಸುದ್ದಿಯಾಗಿದ್ದರು. ಹಿಂದೊಮ್ಮೆ ಬರೀ ಗಾಜಿನಲ್ಲಿ ಮಾನ ಮುಚ್ಚಿಕೊಂಡು ಟ್ರೋಲ್ ಆಗಿದ್ದರು. ಎಷ್ಟಾಗತ್ತೋ ಅಷ್ಟು ವಿಚಿತ್ರವಾದ, ಕಡಿಮೆ ಬಟ್ಟೆಯನ್ನವರು ಧರಿಸುತ್ತಾರೆ. ಹಾಗೇ ಈ ಸಲವೂ ಕೂಡ ಹೋಟೆಲ್ ವೇಟ್ರೆಸ್ (ಪರಿಚಾರಿಕೆ) ಉಡುಪಿನಲ್ಲಿ ಸಿಕ್ಕಾಪಟೆ ಟ್ರೋಲ್ ಆಗಿದ್ದಾರೆ.