Site icon Vistara News

Urfi Javed | ಉರ್ಫಿ ಜಾವೇದ್ ಕುರಿತು ಮುಂಬೈ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗ

Urfi Javed

ಬೆಂಗಳೂರು : ಫ್ಯಾಷನ್‌ ಐಕಾನ್‌ ಎಂತಲೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್‌ (Urfi Javed) ಅವರ ಭದ್ರತೆ ಕೋರಿ ಹಾಗೂ ಅವರ ಬೇಡಿಕೆಯನ್ನು ಪರಿಶೀಲಿಸುವಂತೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗವು ಮುಂಬೈ ಪೊಲೀಸ್ ಕಮಿಷನರ್‌ಗೆ ಜನವರಿ 17 ಮಂಗಳವಾರದಂದು ಪತ್ರ ಬರೆದಿದೆ. ರಾಜಕೀಯ ಲಾಭಕ್ಕಾಗಿ ಬಿಜೆಪಿ ನಾಯಕಿ ಚಿತ್ರಾ ವಾಘ್ ಅವರು ತಮ್ಮ ವಿರುದ್ಧ ದೂರು ದಾಖಲಿಸಿದ್ದಾರೆ ಮತ್ತು ಮಾಧ್ಯಮಗಳೊಂದಿಗೆ ಸಂವಾದದ ಸಮಯದಲ್ಲಿ ತನಗೆ ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಉರ್ಫಿ ಜಾವೇದ್ ಎಂಎಸ್‌ಸಿಡಬ್ಲ್ಯುಗೆ (ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗ) ದೂರು ಪತ್ರವನ್ನು ಸಲ್ಲಿಸಿದ್ದಾರೆ ಎಂದು ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗವು ತಿಳಿಸಿದೆ.

ಉರ್ಫಿ ಅವರು ಹೊರಗಡೆ ತನಗೆ ಅಸುರಕ್ಷಿತ ಭಾವನೆ ಇದೆ. ಹಾಗೂ ತನಗೆ ಭದ್ರತೆ ಬೇಕಾಗಿದೆ ಎಂದು MSCW ಅವರಲ್ಲಿ ಕೋರಿದ್ದಾರೆ. MSCW ದೂರನ್ನು ಗಂಭೀರವಾಗಿ ಪರಿಗಣಿಸುವಂತೆ ಮುಂಬೈ ಪೊಲೀಸರನ್ನು ಕೇಳಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕಳೆದ ವಾರ ಉರ್ಫಿ ಜಾವೇದ್‌ MSCW ಅಧ್ಯಕ್ಷೆ ರೂಪಾಲಿ ಚಕಂಕರ್ ಅವರನ್ನು ಭೇಟಿ ಮಾಡಿದರು. ʻʻMSCW ಸೋಮವಾರ ಮುಂಬೈ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದು ಭದ್ರತೆಗಾಗಿ ಉರ್ಫಿ ಜಾವೇದ್ ಅವರ ಬೇಡಿಕೆಯನ್ನು ಪರಿಶೀಲಿಸುವಂತೆ ಪೊಲೀಸರನ್ನು ಕೇಳಿದೆ” ಎಂದು ಅಧಿಕಾರಿ ಹೇಳಿದ್ದಾರೆ. ಮುಂಬೈ ಪೊಲೀಸರು ಶನಿವಾರ ಉರ್ಫಿ ಜಾವೇದ್ ವಿರುದ್ಧ ಚಿತ್ರಾ ವಾಘ್ ನೀಡಿದ ದೂರಿಗೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಬಿಜೆಪಿಯ ಮಹಿಳಾ ವಿಭಾಗದ ಮುಖ್ಯಸ್ಥೆ ವಾಘ್ ಅವರು ಸಾರ್ವಜನಿಕ ಸ್ಥಳಗಳಲ್ಲಿ ಅಸಮರ್ಪಕವಾಗಿ ಡ್ರೆಸ್ಸಿಂಗ್ ಮಾಡಿದ್ದಕ್ಕಾಗಿ ಉರ್ಫಿ ಜಾವೇದ್ ವಿರುದ್ಧ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ | Urfi Javed | ರೆಕ್ಕೆಗಳಿಂದ ಮಾನ ಮುಚ್ಚಿಕೊಂಡ ಉರ್ಫಿ ಜಾವೇದ್‌: ಪ್ರತಿ ಮಹಿಳೆಗೆ ಸ್ವಾತಂತ್ರ್ಯದ ರೆಕ್ಕೆಗಳಿವೆ ಎಂದ ನೆಟ್ಟಿಗರು!

ಕೆಲವು ದಿನಗಳ ಹಿಂದೆ ನಟಿ ಉರ್ಫಿ ಜಾವೇದ್ ಅವರು ಚಿತ್ರಾ ಕಿಶೋರ್ ವಾಘ್ ಮೇಲೆ ಆರೋಪ ಮಾಡಿದ್ದರು. ಅವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಹಾಗೂ ಮಾನಹಾನಿ ಮಾಡುವಂತಹ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ತಮ್ಮ ವಕೀಲರ ಮೂಲಕ ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ಉರ್ಫಿ ದೂರು ನೀಡಿದ್ದಾರೆ. ಅಲ್ಲದೇ, ತಮಗೆ ಜೀವ ಬೆದರಿಕೆ ಇರುವ ಕಾರಣದಿಂದಾಗಿ ರಕ್ಷಣೆ ನೀಡುವಂತೆ ಉರ್ಫಿ ಮನವಿ ಮಾಡಿದ್ದಾರೆ. ಅದಕ್ಕೂ ಮುನ್ನ ತಮ್ಮಿಂದ ಯಾವುದೇ ತಪ್ಪು ಆಗಿಲ್ಲ ಎಂದು ಮನದಟ್ಟು ಮಾಡಲು ವಿಚಾರಣೆಗೂ ಖುದ್ದಾಗಿ ಹೋಗಿದ್ದಾರೆ. 

ಇದನ್ನೂ ಓದಿ | Urfi Javed | ನಮ್ಮ ದೇಶದ ಹುಡುಗಿಯರು ಉರ್ಫಿ ನೋಡಿ ಕಲಿಯಬೇಕು: ರ್‍ಯಾಪರ್‌ ಯೋ ಯೋ ಹನಿ ಸಿಂಗ್

Exit mobile version